ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು. ಈ ವೇಳೆ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್, ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್ ಸಚಿವರಿಗೆ ಸಾಥ್ ನೀಡಿದರು.
ಎಲ್ಲೆಲ್ಲಿ ಪರಿಶೀಲನೆ?
*ರೇಸ್ ಕೋರ್ಸ್ ರಸ್ತೆ ತಪಾಸಣೆ.
*ಜವಾಹರಲಾಲ್ ನೆಹರು ತಾರಾಲಯ ಮತ್ತು ರಾಜಭವನ ರಸ್ತೆ ತಪಾಸಣೆ.
*ಇನ್ ಫೆಂಟ್ರಿ ರಸ್ತೆ ತಪಾಸಣೆ.
*ಕಮರ್ಷಿಯಲ್ ಸ್ಟ್ರೀಟ್ ತಪಾಸಣೆ.
*ಡಿಕನ್ಸನ್ ರಸ್ತೆ ತಪಾಸಣೆ.
*ಹಲಸೂರು ರಸ್ತೆ ತಪಾಸಣೆ.
*ಮಿಲ್ಲರ್ಸ್ ರಸ್ತೆ(Extension Road) ತಪಾಸಣೆ.
*ಕ್ವೀನ್ಸ್ ರಸ್ತೆ ತಪಾಸಣೆ.
*ಮೆಗ್ರಾತ್ ರಸ್ತೆ ತಪಾಸಣೆ.
*ರಿಯಾನ್ಸ್ ರಸ್ತೆ ತಪಾಸಣೆ.
*ರಾಜಾರಾಮ್ ಮೋಹನ್ ರಾಯ್ ರಸ್ತೆ ತಪಾಸಣೆ ಕೈಗೊಂಡಿದ್ದರು.
ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಲು ಗುತ್ತಿಗೆದಾರರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜನರಿಗೆ ಕಾಮಗಾರಿಯಿಂದ ಯಾವುದೇ ತೊಂದರೆಯಾದಂತೆ ಎಚ್ಚರ ವಹಿಸಬೇಕು. ತ್ವರಿತವಾಗಿ ಕೆಲಸ ಪೂರ್ಣಗೊಳಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ಮಾಡಿದ ದೂರುಗಳು ಬಂದರೆ ಆಯಾ ಗುತ್ತಿಗೆದಾರರೇ ಹೊಣೆಯಾಗುತ್ತಾರೆ ಎಂದು ಸಚಿವರು ಎಚ್ಚರಿಕೆ ನೀಡಿದರು.