ಬೆಂಗಳೂರು: ಮತದಾನ ನಮ್ಮೆಲ್ಲರ ಹಕ್ಕು ಮತ್ತು ಜವಾಬ್ದಾರಿ. ಮತದಾನ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಹೀಗಾಗಿಯೇ ಈಗ ಚಿಕ್ಕವರಿಂದಲೇ ದೊಡ್ಡವರಿಗೆ ಹೆಚ್ಚು ಮತದಾನ ಜಾಗೃತಿ ಪಾಠ ಶುರುವಾಗಿದೆ.
ಹೌದು, ಇಲ್ಲೊಬ್ಬ ಪುಟ್ಟ ಪೋರ ತನ್ನ ತಲೆ ಕೂದಲಿನ ವಿನ್ಯಾಸದ ಮೂಲಕ ಮತದಾನ ಜಾಗೃತಿ ಕಾರ್ಯ ಮಾಡುತ್ತಿದ್ದಾನೆ. ಬೆಂಗಳೂರಿನ 6 ವರ್ಷದ, ಕೆ.ಸಿ.ಚಾಣಕ್ಯ ಗುಪ್ತಾ ಎಂಬಾತ ತನ್ನ ತಲೆಕೂದಲಿನಲ್ಲಿ ವಿಶೇಷ ಕೇಶ ವಿನ್ಯಾಸದ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದ್ದಾನೆ. ತಲೆಯ ಹಿಂಬದಿಯಲ್ಲಿ VOTE ಎಂದು ಕೆತ್ತಿಸಿಕೊಂಡಿದ್ದಾನೆ.
ವಿಡಿಯೋದಲ್ಲಿ ಭಾರತೀಯರೇ ದಯವಿಟ್ಟು ಮತದಾನ ಮಾಡಿ, ನಿಮ್ಮ ಮತದಾನವೇ ನಮ್ಮ ಮುಂದಿನ ಭವಿಷ್ಯ ಎಂದು ಹೇಳುವ ಮೂಲಕ ವಿಶೇಷ ರೀತಿಯಲ್ಲಿ ಅರಿವು ಮೂಡಿಸುತ್ತಿದ್ದಾನೆ. ಈ ಬಾಲಕನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡ್ತಿದೆ.