ಬೆಂಗಳೂರು: ಕೇಂದ್ರ ಸರ್ಕಾರ ಈಗ 3 ತಿಂಗಳು ಬಡ್ಡಿ ಪಾವತಿಯನ್ನು ಮುಂದೆ ಹಾಕಿದೆ. ಆದರೆ 6 ತಿಂಗಳು ಬಡ್ಡಿ ವಿನಾಯಿತಿ ನೀಡಬೇಕು ಎಂದು ಕಾಸಿಯಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಲಾಕ್ ಡೌನ್ ನಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸುಮಾರು 25% ಅಳಿವಿನ ಅಂಚಿಗೆ ಬಂದಿವೆ. ರಾಜ್ಯ ಸರ್ಕಾರ ಈ ಪರಿಸ್ಥಿತಿ ಸುಧಾರಣೆಗೆ 2 ತಿಂಗಳ ವಿದ್ಯುತ್ ದರ ರಿಯಾಯಿತಿಯನ್ನು ಘೋಷಣೆ ಮಾಡಿತ್ತು. ಆದರೆ ಅದನ್ನ 6 ತಿಂಗಳ ಕಾಲ ಮುಂದುವರಿಸಬೇಕು ಎಂದು ಕಾಸಿಯಾ ಸಂಘದ ಅಧ್ಯಕ್ಷ ರಾಜು ತಿಳಿಸಿದರು.
ಕೆಎಸ್ಎಫ್ಸಿನಿಂದ ಸಾಲದ ಪ್ರಮಾಣವನ್ನ 600 ರಿಂದ 700 ಕೋಟಿ ನೀಡುವ ಜೊತೆಗೆ ಕಾರ್ಮಿಕ ಕನಿಷ್ಟ ವೇತನವನ್ನ ಸದ್ಯಕ್ಕೆ ಸ್ಥಗಿತಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಸ್ತುತವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಪೀಣ್ಯ ಕೈಗಾರಿಕಾ ವಲಯದ 300ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಮುಚ್ಚುವ ನೋಟಿಸ್ ನೀಡಿರುವ ಜೊತೆಗೆ 120 ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಇದನ್ನ ರಾಜ್ಯ ಸರ್ಕಾರ ಕೈಗಾರಿಕೆಗಳ ನೆರವಿಗೆ ಬರಬೇಕು ಎಂದು ಆಗ್ರಹ ಮಾಡಿದರು.
ಇನ್ನು ಕೇಂದ್ರ ಸರ್ಕಾರ 3 ಲಕ್ಷ ಕೋಟಿ ಘೋಷಣೆ 48,655 ಕೈಗಾರಿಕೆಗಳಿಗೆ ಮಾತ್ರ ತಲುಪಿದೆ. ಇದನ್ನ ಕೇಂದ್ರ ತ್ವರಿತಗತಿಯಲ್ಲಿ ಜಿಲ್ಲಾ ಮಟ್ಟದವರೆಗಿನ ಸಣ್ಣ ಕೈಗಾರಿಕೆಗಳ ವರೆಗೆ ತಲುಪುವ ರೀತಿ ಮಾಡಬೇಕು. ಇದರ ಜೊತೆಗೆ ಕೇಂದ್ರ 3 ಲಕ್ಷ ಕೋಟಿ ಪರಿಹಾರ ಧನವನ್ನು 10 ಲಕ್ಷ ಕೋಟಿಗೆ ಏರಿಸಬೇಕು. ಇದಾದರೆ ಮಾತ್ರ ಕೈಗಾರಿಕೆಗಳಿಗೆ ಸಹಾಯ ಆಗುತ್ತದೆ ಎಂದರು.