ETV Bharat / state

ಎಸ್​.ಎಂ.ಕೃಷ್ಣ ತಮಗೆ ಸಿಕ್ಕ ಅವಕಾಶದಲ್ಲಿ ಇತಿಹಾಸ ನಿರ್ಮಿಸಿದ್ದಾರೆ: ಡಿ.ಕೆ.ಶಿವಕುಮಾರ್ - ​ ETV Bharat Karnataka

ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಧಿಕಾರವಧಿಯ ಸಾಧನೆಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್​ ಗುಣಗಾನ ಮಾಡಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್​
ಡಿಸಿಎಂ ಡಿ.ಕೆ ಶಿವಕುಮಾರ್​
author img

By ETV Bharat Karnataka Team

Published : Oct 1, 2023, 7:28 PM IST

ಎಸ್.ಎಂ.ಕೃಷ್ಣ ಕುರಿತು ಡಿಕೆಶಿ ಮೆಚ್ಚುಗೆ

ಬೆಂಗಳೂರು : ತಮಗೆ ಸಿಕ್ಕ ಅವಕಾಶದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಐಟಿ ಬಿಟಿ ಬೆಳೆಯಲು, ಮೆಟ್ರೋ ಬರಲು, ಬೆಂಗಳೂರು ಅಂತರರಾಷ್ಟ್ರೀಯ ಮಾರುಕಟ್ಟೆ ಆಗಲು ಅವರು ಮಾಡಿದ ನೀತಿಗಳು ಕಾರಣ. ಕೃಷ್ಣ ಅವರು ಆದರ್ಶ, ನಾಯಕತ್ವ ಕೊಟ್ಟು ಅದನ್ನು ಮುಂದುವರೆಸಿಕೊಂಡು ಹೋಗಲು ನಮ್ಮಂಥವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದರು.

ಕುಮಾರಪಾರ್ಕ್‌ನಲ್ಲಿರುವ ಚಿತ್ರಕಲಾ ಪರಿಷತ್​ನಲ್ಲಿಂದು ಎಸ್.ಎಂ.ಕೃಷ್ಣರ ಜೀವನಗಾಥೆ ಕುರಿತ "ನೆಲದ ಸಿರಿ" ಕೃತಿ ಬಿಡುಗಡೆ ಮಾಡಲಾಯಿತು. ಡಿ.ಕೆ.ಶಿವಕುಮಾರ್, ವಿಮರ್ಶಕ, ಸಾಂಸ್ಕೃತಿಕ ಚಿಂತಕ ನರಹಳ್ಳಿ ಬಾಲಸುಬ್ರಮಣ್ಯ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮಾಜಿ ಸಚಿವ ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಕೃತಿ ಲೇಖಕ ಡಾ.ಜಗದೀಶ್ ಕೊಪ್ಪ ಕೃತಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಡಿಕೆಶಿ, ಜನನ ಉಚಿತ. ಮರಣ ಖಚಿತ. ಹುಟ್ಟು ಸಾವಿನ ನಡುವೆ ನಾವೇನು ಮಾಡುತ್ತೇವೆ ಎನ್ನುವುದು ಮುಖ್ಯ. ಕೃಷ್ಣರ ಜೊತೆ 35 ವರ್ಷದ ರಾಜಕೀಯ ಒಡನಾಟವಿದೆ. ಕಷ್ಟದ ದಿನದಲ್ಲಿ ಅವರಿಗೆ ಅಧಿಕಾರ ಸಿಕ್ಕಿತ್ತು. ಬರ, ಕಾವೇರಿ, ರಾಜ್ ಕುಮಾರ್ ಅಪಹರಣ ಸೇರಿ ನಾಲ್ಕು ಸಂಕಷ್ಟ ಎದುರಿಸಿದರು. ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಅದರಲ್ಲಿ ಯಶಸ್ಸು ಕಂಡರು. ಹಾಗೆಯೇ ಕೃಷ್ಣರ ಕಾಲ ಎಂದು ಹೆಸರು ಮಾಡಿದರು. ಎಲ್ಲ ಜನ ವರ್ಗದ ಬೆಂಬಲಗಳಿಸಿದರು ಎಂದರು.

ಅಧಿಕಾರಕ್ಕೆ ಬಂದಾಗ 13 ಸಾವಿರ ಕೋಟಿ ಇದ್ದ ರಾಜ್ಯದ ಬಜೆಟ್​, ಅಧಿಕಾರದಿಂದ ಇಳಿಯುವಾಗ 34 ಸಾವಿರ ಕೋಟಿಗೆ ತಲುಪಿತ್ತು. ಕೃಷ್ಣ ಸಂಪುಟದಲ್ಲಿ ನಾನೂ ಸಚಿವನಾಗಿದ್ದೆ. ಬೆಂಗಳೂರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನಾಗಿ ಹಾಗು ವಿಕಾಸಸೌಧ ನಿರ್ಮಾಣ ಮಾಡಿದ್ದು ಕೃಷ್ಣ.
ಬೆಂಗಳೂರಿಗೆ ಮೆಟ್ರೋ ಬರಲು ಇವರ ಕೊಡುಗೆ ಅಪಾರ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಿಡದಿಗೆ ಕೊಂಡೊಯ್ಯುವ ಪ್ರಯತ್ನ ಆಗಿತ್ತು. 6 ಸಾವಿರಕ್ಕೆ ಪ್ರತಿ ಎಕರೆಯಂತೆ 2 ಸಾವಿರ ಎಕರೆ ಸರ್ಕಾರಿ ಭೂಮಿ ಲಭ್ಯವಿತ್ತು. ಆದರೂ ಕೆಂಪೇಗೌಡ ವಿಮಾನ ನಿಲ್ದಾಣ ದೇವನಹಳ್ಳಿಗೆ ಬಂತು. ಇದಕ್ಕೆ ಕೃಷ್ಣ ಅವರೇ ಕಾರಣವೆಂದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದ ಡಿ.ಕೆ.ಶಿವಕುಮಾರ್, ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಮಕ್ಕಳು ಶಾಲೆ ಬಿಟ್ಟ ಸಂಖ್ಯೆ ಹೆಚ್ಚಾಗುತ್ತಿತ್ತು. ಈ ವೇಳೆ ಬಿಸಿಯೂಟ ಜಾರಿಗೆ ತಂದರು. ಇದರಿಂದ ಮರಳಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದರು. ಇಂದೂ ಕೂಡ ಅದು ಜಾರಿಯಲ್ಲಿದೆ. ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಶಕ್ತಿ ಕೊಡಲು ಸ್ತ್ರೀಶಕ್ತಿ ಜಾರಿಗೆ ತಂದು ಸಹಕಾರಿ ವಲಯದಲ್ಲಿ ಮಹಿಳೆಯರು ತೊಡಗಿಕೊಳ್ಳುವಂತಾಯಿತು. ಯಶಸ್ವಿನಿ ಕಾರ್ಯಕ್ರಮ ಜಾರಿಯಾಗಲಿದೆ. 10 ರೂ.ಗೆ ಯೋಜನೆ, ಹೃದಯ ಚಿಕಿತ್ಸೆಯೂ ಲಭಿಸುವಂತಾಯಿತು. ಅಂದು ಇದು ದುಬಾರಿ ಚಿಕಿತ್ಸೆಯಾಗಿತ್ತು ಎಂದು ತಿಳಿಸಿದರು.

ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಿದ್ದ ವಾಜಪೇಯಿ, ವಿದೇಶಿ ಗಣ್ಯರು ಈವರೆಗೂ ಮೊದಲು ದೆಹಲಿ, ಮುಂಬೈ, ಚೆನ್ನೈಗೆ ಬರುತ್ತಿದ್ದರು. ಆದರೆ ಇನ್ಮುಂದೆ ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗುತ್ತಾರೆ ಎಂದಿದ್ದರು. ದೇವರು ವರ ಮತ್ತು ಶಾಪ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಕೃಷ್ಣ ಅವರಿಗೆ ಕೊಟ್ಟ ಅವಕಾಶದಲ್ಲಿ ರಾಜ್ಯದಲ್ಲಿ ಇತಿಹಾದ ನಿರ್ಮಾಣ ಮಾಡಿದ್ದಾರೆ.

ಕರ್ಣನ ದಾನ, ಭೀಮನ ಬಲ, ಅರ್ಜುನನ ಗುರಿ, ವಿದುರನ ನೀತಿ, ಕೃಷ್ಣನ ತಂತ್ರ ಎಲ್ಲವೂ ಎಸ್​.ಎಂ. ಕೃಷ್ಣರಲ್ಲಿತ್ತು. ಮರಕ್ಕೆ ಬೇರು ಮುಖ್ಯವಿದ್ದಂತೆ ಮನುಷ್ಯನಿಗೆ ನಂಬಿಕೆ ಮುಖ್ಯ, ನಮ್ಮದೇ ಆದ ತತ್ವ ಸಿದ್ಧಾಂತ ಎಲ್ಲವೂ ಮುಖ್ಯ. ಅದರಂತೆ ಕೃಷ್ಣ ನಡೆದುಕೊಂಡು ರಾಜ್ಯಕ್ಕೆ ಶಕ್ತಿ ಮಾರ್ಗದರ್ಶನ ನೀಡಿದ್ದಾರೆ. ನನ್ನಂತಹ ಹತ್ತಾರು ಜನ ರಾಜಕಾರಣಿಗಳನ್ನು ತಯಾರು ಮಾಡಿದ್ದಾರೆ.

ಅಧಿಕಾರ ಇರುವಾಗ ಜಾತಿಯಾಧಾರಿತ ಕಾರ್ಯಕ್ರಮ ಮಾಡಲಾಗದು. ರಾಜಕಾರಣದಲ್ಲಿ ಇರುವಾಗ ಕೃಷ್ಣ ಯಾರಿಗೂ ಕೆಟ್ಟದ್ದು ಮಾಡಲ್ಲ, ಆಗಲ್ಲ ಎಂದರೆ ಸಮ್ಮನಿರುತ್ತಿದ್ದರು. ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಹೇಳಿದರು ಎಂದು ಅಂದು ಅಧಿಕಾರಿಗಳನ್ನು ಬೇರೆ ಬೇರೆ ಆಯಕಟ್ಟಿನ ಜಾಗದಲ್ಲಿ ನೇಮಿಸಲಾಗಿತ್ತು. ಆದರೂ ಕೃಷ್ಣ ಕೆಟ್ಟದ್ದು ಮಾಡಲಿಲ್ಲ ಎಂದು ಡಿಕೆಶಿ ಹೊಗಳಿದರು.

ಬಿ.ಎಲ್.ಶಂಕರ್ ಹೇಳಿಕೆ : ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ಮಾತನಾಡಿ, ಜಂಟಲ್ ಮನ್ ಪೊಲಿಟಿಕಲ್​ಗಳಲ್ಲಿ ಕೃಷ್ಣ ಅಗ್ರಗಣ್ಯರು. ಇಂದಿನ ರಾಜಕಾರಣದಲ್ಲಿ ಅಜಾತಶತ್ರು ಆಗಿ ಉಳಿಯುವುದು ಕಷ್ಟ, ಕೃಷ್ಣ ಅಂತಹ ರಾಜಕಾರಣಿಯಾಗಿದ್ದಾರೆ. ನಾನು ಸಭಾಪತಿ ಆಗುವುದಕ್ಕೂ ಕೃಷ್ಣ ಕಾರಣ. ಜನತಾ ದಳ ಇಬ್ಬಾಗ ಆದಾಗ ನಾನು ತಟಸ್ಥವಾಗಿದ್ದೆ. ಆಗ ಕೃಷ್ಣ ಯಾವ ಪಕ್ಷವನ್ನೂ ಸದ್ಯಕ್ಕೆ ಸೇರಬೇಡಿ ಎಂದಿದ್ದರು. ನಂತರ ಅವಕಾಶ ಬಂದಾಗ ಸಭಾಪತಿ ಮಾಡಿದರು. ಆಗ ದೇವೇಗೌಡರ ಜೊತೆ ಒಡನಾಟವಿದೆ ಅವರನ್ನು ಮಾಡಬೇಡಿ ಎನ್ನುವ ವಿರೋಧವೂ ಇತ್ತು. ಆದರೂ ಅವಕಾಶ ನೀಡಿದರು. ಕೃಷ್ಣ ಅವರ ಹೆಸರಿನಲ್ಲಿ ರಾಜಕಾರಣವನ್ನು ಮೀರಿದ ಕೆಲಸ ಮಾಡಬೇಕು. ಹಾಗಾಗಿ ನಾಲೆಡ್ಜ್ ಸಿಟಿಗೆ ಕೃಷ್ಣ ಅವರ ಹೆಸರು ಇಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ನಾಲೆಡ್ಜ್ ಸಿಟಿಗೆ ಕೃಷ್ಣ ಹೆಸರು: ನಂತರ ಮಾತನಾಡಿದ ಮಾಜಿ ಸಚಿವ ಸುಧಾಕರ್, ರಾಜ್ಯದಲ್ಲಿ ಐಟಿಬಿಟಿ ಕ್ಷೇತ್ರ ತಳವೂರಲು ಕಾರಣರಾದ ಎಸ್.ಎಂ.ಕೃಷ್ಣ ಅವರ ಹೆಸರನ್ನೇ ಬೆಂಗಳೂರಿನಲ್ಲಿ ನಿರ್ಮಿಸಲುದ್ದೇಶಿಸಿರುವ ನಾಲೆಡ್ಜ್ ಸಿಟಿಗೆ ಇಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಎಸ್.ಎಂ ಕೃಷ್ಣ ನನ್ನ ರಾಜಕೀಯ ಗುರು, ನಾನು ಇಲ್ಲಿ ನಿಂತಿರುವುದಕ್ಕೆ ಕೃಷ್ಣ ಅವರೇ ಕಾರಣ. 2013 ರಲ್ಲಿ ಸ್ವತಃ ದೆಹಲಿಗೆ ಬಂದು ಬಿ ಫಾರಂ ಕೊಡಿಸಿದ್ದರು. ಇಂದು ಅವರ ಜೀವನಗಾಥೆಯ ಕೃತಿ ಅನಾವರಣ ವೇದಿಕೆಯಲ್ಲಿರುವುದು ಸಂತಸ ತಂದಿದೆ ಎಂದರು.

ಕೃಷ್ಣ ಅವರ ಆಡಳಿತದಲ್ಲಿ ಕೈಗಂಡ ಅಚ್ಚುಕಟ್ಟಾದ ನಿರ್ಣಯಗಳೇ ಇಂದು ರಾಜ್ಯದ ಭವಿಷ್ಯದ ಭದ್ರ ಬುನಾದಿಯಾಗಿದೆ. ಅವರ ಸಂಪನ್ಮೂಲ ಕ್ರೋಢೀಕರಿಸಿದ ವಿಧಾನ ರಾಜ್ಯದ ಆರ್ಥಿಕತೆಗೆ ಹೆಚ್ಚಿನ ಬಲ ತಂದಿದೆ. ಕೃಷ್ಣ ಆಡಳಿತ ಪರಿ ಯುವಕರಿಗೆ ದಾರಿದೀಪವಾಗಿದೆ. ಅವರ ಮಾರ್ಗವನ್ನು ನಾವು ಮುಂದುವರೆಸಬೇಕಿದೆ.

ನಾಡುಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಆದರೆ ಆಧುನಿಕ ಬೆಂಗಳೂರು ನಿರ್ಮಾತೃ ಹೆಸರು ಎಸ್.ಎಂ.ಕೃಷ್ಣಗೆ ಸಲ್ಲಲಿದೆ. ಸಣ್ಣ ನಗರ ಇಂದು ಜಾಗತಿಕ ನಗರವಾಗಿ ಬೆಳೆದಿದೆ. 30 ಲಕ್ಷ ಜನ ನೇರವಾಗಿ ಐಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೂರದೃಷ್ಟಿ ನಾಯಕ ಬೆಂಗಳೂರಿಗೆ ಸೀಮಿತವಾಗಿರಲಿಲ್ಲ. ಹೈಟೆಕ್ ಸಿಎಂ ಎನ್ನಿಸಿಕೊಂಡು, ಹೈಟೆಕ್ ರಾಜ್ಯ ಮಾಡಬೇಕು ಎನ್ನುವ ಕನಸು ಕಂಡವರು. ಗ್ರಾಮೀಣ ಪ್ರದೇಶದ ರೈತರ ಬದುಕು ಹಸನಕ್ಕೆ ಶ್ರಮಿಸಿದವರು ಎಂದು ಸುಧಾಕರ್​ ಗುಣಗಾನ ಮಾಡಿದರು.

ಇದನ್ನೂ ಓದಿ : ಕಾವೇರಿ ಸಮಸ್ಯೆಗೆ 'ಸಂಕಷ್ಟ ಸೂತ್ರ'ವೊಂದೇ ಶಾಶ್ವತ ಪರಿಹಾರ: ಎಸ್.ಎಂ.ಕೃಷ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.