ಬೆಂಗಳೂರು: ಇತ್ತೀಚೆಗೆ ಆನೆ ದಂತಗಳನ್ನು ಕೆತ್ತನೆ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ 6 ಜನ ಆರೋಪಿಗಳನ್ನು ಅರಣ್ಯ ಸಂಚಾರಿ ದಳ ಬಂಧಿಸಿದೆ.
![six accused of selling aesthetically crafted elephants fang](https://etvbharatimages.akamaized.net/etvbharat/prod-images/10233030_ttt.jpg)
ಸದಾಶಿವ, ನಾಗರಾಜ್, ಮೊಹಮ್ಮದ್ ಅಸ್ಗರ್, ಪ್ರಮೀಳಾ ಕುಮಾರಿ, ಪ್ರಭು, ಪುರುಷೋತ್ತಮ್ ಬಂಧಿತ ಆರೋಪಿಗಳು. ಇವರು ಮರಿಯಪ್ಪನಪಾಳ್ಯದ ಮನೆಯೊಂದರಲ್ಲಿ ಆನೆ ದಂತ ಸಂಗ್ರಹಿಸಿಟ್ಟಿದ್ದು, ಅವುಗಳನ್ನು ಕೆತ್ತನೆ ಮಾಡಿ ಮಾರಾಟ ಮಾಡುವುದರಲ್ಲಿ ತೊಡಗಿದ್ದರು.
ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಆನೆ ದಂತಗಳನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.