ETV Bharat / state

ಸಿಡಿ ಕೇಸ್​: ಆರೋಪಿಗಳಾದ ನರೇಶ್, ಶ್ರವಣ್ ಜಾಮೀನು ಆಕ್ಷೇಪಣೆ ಅರ್ಜಿ ಸೋಮವಾರ ಸಲ್ಲಿಕೆ - ನರೇಶ್, ಶ್ರವಣ್

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್ ಮತ್ತು ಶ್ರವಣ್ ಪಾತ್ರ ಶಂಕೆ ಕಂಡುಬರುತ್ತಿದೆ. ಹನಿಟ್ರ್ಯಾಪ್ ಸಂಚಿನ ಭಾಗವಾಗಲು ಹಲವು ದಾಖಲೆಗಳಿವೆ. ಸಿಸಿಟಿವಿ ದೃಶ್ಯಗಳು ಹಾಗೂ ದಾಖಲಾತಿಗಳ ಸಹಿತ ಎಸ್​​ಐಟಿ ಮನವಿ ಸಲ್ಲಿಸಲಿದೆ.

ಸಿಡಿ ಕೇಸ್
ಸಿಡಿ ಕೇಸ್
author img

By

Published : May 29, 2021, 8:43 PM IST

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆಯು ಸೆಷನ್ಸ್ ಕೋರ್ಟ್ ಸ್ಯಾನಿಟೈಜ್ ಮಾಡುತ್ತಿರುವ ಹಿನ್ನೆಲೆ ನಡೆಯಬೇಕಿದ್ದ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಇಂದು ನ್ಯಾಯಾಲಯಕ್ಕೆ ಅಕ್ಷೇಪಣೆ ಸಲ್ಲಿಸಬೇಕಿದ್ದ ಎಸ್​​ಐಟಿ ಅಧಿಕಾರಿಗಳು ಸೋಮವಾರ ಅಕ್ಷೇಪಣೆ ಸಲ್ಲಿಸಲಿದ್ದಾರೆ.

ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್, ಶ್ರವಣ್​​ಗೆ ಬೇಲ್ ನೀಡದಂತೆ ಮನವಿ ಮಾಡಲು ಎಸ್​ಐಟಿ ಸಂಪೂರ್ಣ ತಯಾರಿ ಮಾಡಿಕೊಂಡಿತ್ತು.

ಆಕ್ಷೇಪಣಾ ಅರ್ಜಿಯಲ್ಲಿ ಎಸ್ಐಟಿ ಸೇರಿಸಿರುವ ವಿವರ

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್ ಮತ್ತು ಶ್ರವಣ್ ಪಾತ್ರದ ಶಂಕೆ ಕಂಡುಬರುತ್ತಿದೆ. ಹನಿಟ್ರ್ಯಾಪ್ ಸಂಚಿನ ಭಾಗವಾಗಿರುವ ಹಲವು ದಾಖಲೆಗಳಿವೆ. ಸಿಸಿಟಿವಿ ದೃಶ್ಯಗಳು ಹಾಗೂ ದಾಖಲಾತಿಗಳ ಸಹಿತ ಎಸ್​​ಐಟಿ ಮನವಿ ಸಲ್ಲಿಸಲಿದೆ.

ಸಂಚಿನ ಭಾಗವಾಗಿ ರಾಜಧಾನಿಯ ಎಸ್​ಪಿ ರೋಡಿನಲ್ಲಿ ದುಬಾರಿ ಕ್ಯಾಮರಾ ಖರೀದಿಸಲಾಗಿದೆ. ಪೊಲೀಸರ ಕೈಗೆ ಸಿಗದೆ ಈವರೆಗೂ ತಲೆಮರೆಸಿಕೊಂಡಿರುವುದು ಯಾಕೆ ಎನ್ನುವ ಪ್ರಶ್ನೆಯ ಜೊತೆ ಆರೋಪಿಗಳಿಗೆ ಜಾಮೀನು ನೀಡದಂತೆ ಎಸ್​ಐಟಿಯಿಂದ ಮನವಿ ಸಲ್ಲಿಕೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.