ಬೆಂಗಳೂರು: ಸಿಡಿ ಪ್ರಕರಣದ ಯುವತಿಯಿಂದ ಮೂರನೇ ವಿಡಿಯೋ ರಿಲೀಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು, ನಾನು ಮೀಟಿಂಗ್ನಲ್ಲಿದ್ದೆ, ಹಾಗಾಗಿ ವಿಡಿಯೋ ಬಗ್ಗೆ ಗೊತ್ತಾಗಲಿಲ್ಲ ಎಂದಿದ್ದಾರೆ.
ವಕೀಲರ ಮೂಲಕ ಯುವತಿ ದೂರು ಸಲ್ಲಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದೂರು ಕೊಡಲಿ, ಕಾನೂನಾತ್ಮಕವಾಗಿ ಎಸ್ಐಟಿ ಪರಿಶೀಲಿಸುತ್ತದೆ. ಯಾರೇ ದೂರು ನೀಡಿದರೂ ಎಸ್ಐಟಿ ತಂಡ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಓದಿ:ಇನ್ನೂ ಹತ್ತು ವಿಡಿಯೋ ಬಿಟ್ಟರೂ ಹೆದರಲ್ಲ, ನಮಗೂ ವಕೀಲರಿದ್ದಾರೆ; ರಮೇಶ ಜಾರಕಿಹೊಳಿ
ಯುವತಿ ತಂದೆ-ತಾಯಿಗೆ ರಕ್ಷಣೆ ಕೊಡುವ ಸಂಬಂಧ ನಾನು ಈಗಾಗಲೇ ಹೇಳಿದ್ದೇನೆ, ಅವರು ಎಲ್ಲಿದ್ದಾರೆ ಎಂಬುದನ್ನು ನೋಡಿಕೊಂಡು ಅಲ್ಲೇ ರಕ್ಷಣೆಕೊಡಲಾಗುತ್ತದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದರು.