ಬೆಂಗಳೂರು: ವೈಟ್ಫೀಲ್ಡ್ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ನಡೆಯುವ 90 ದಿನಗಳ ಫೀನಿಕ್ಸ್ ಫೆಸ್ಟಿವಲ್ ಸೀಸನ್-3ಕ್ಕೆ ಖ್ಯಾತ ಹಿನ್ನೆಲೆ ಗಾಯಕ ಮೋಹಿತ್ ಚೌಹಾಣ್ ಚಾಲನೆ ನೀಡಿದರು.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಸಾಲು ಸಾಲಾಗಿ ಹಬ್ಬಗಳಿರುವ ಹಿನ್ನೆಲೆ ಫೀನಿಕ್ಸ್ ಮಾರ್ಕೆಟ್ ಸಿಟಿ ತನ್ನ 3ನೇ ಋತುವಿನ ಫೀನಿಕ್ಸ್ ಉತ್ಸವ ಆಯೋಜಿಸಿದೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈ ಉತ್ಸವ ಸುಮಾರು 90 ದಿನಗಳ ಕಾಲ ನಡೆಯಲಿದ್ದು, ನಿರಂತರ ಮನರಂಜನೆ,ವಿವಿಧ ಬಗೆಯ ಆಹಾರ ಪದಾರ್ಥಗಳು ಮತ್ತು ಅನೇಕ ಮನೋರಂಜನಾ ಕ್ರೀಡಾ ಕಾರ್ಯಕ್ರಮ, ಶಾಪಿಂಗ್ ಉತ್ಸವದಲ್ಲಿರಲಿದೆ. ಫೀನಿಕ್ಸ್ ಮೆಗಾ ಮಾಡೆಲ್ ಹಂಟ್‌ನ ಗ್ರಾಂಡ್ ಫಿನಾಲೆ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭಗೊಂಡಿದ್ದು, ಖ್ಯಾತ ಹಿನ್ನಲೆ ಗಾಯಕ ಮೋಹಿತ್ ಚೌಹಾಣ್ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಉತ್ಸವದಲ್ಲಿ ಮೋಹಿತ್ ಚೌಹಾಣ್ ಸೇರಿದಂತೆ, ಪ್ರತಿ ದಿನ ಒಬ್ಬೊಬ್ಬ ಕಲಾವಿದರು ಕಾರ್ಯವನ್ನು ನಡೆಸಿಕೊಡಲಿದ್ದಾರೆ. ಅಕ್ಟೋಬರ್ 19ರಂದು ಅನನ್ಯ ಬಿರ್ಲಾ, ನವೆಂಬರ್ 8ರಂದು ವಿದ್ಯಾ ಓಕ್ಸ್, ನವೆಂಬರ್ 15ರಂದು ಜೀವೇಶು ಅಹ್ಲುವಾಲಿಯಾ ಕಾರ್ಯಕ್ರಮ ನೀಡಲಿದ್ದಾರೆ.
ದಕ್ಷಿಣದ ಹಿರಿಯ ನಿರ್ದೇಶಕ ಗಜೇಂದ್ರಸಿಂಗ್ ರಾಥೋಡ್ ಮಾತನಾಡಿ, ಈ ವರ್ಷ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಸೀಸನ್ 3 ಉತ್ಸವ, ಮತ್ತಷ್ಟು ದೊಡ್ಡ ಅವತಾರದಲ್ಲಿ ಖ್ಯಾತ ಕಲಾವಿದರು ಮತ್ತು ಸಂಗೀತಗಾರರ ನೇರ ಸಂಗೀತ ಕಚೇರಿಗಳು, ಮೋಡಿ ಮಾಡುವ ಅಲಂಕಾರ, ಒಂದು ಕೋಟಿ ಮೌಲ್ಯದ ಬಹುಮಾನಗಳೊಂದಿಗೆ ಪ್ರಾರಂಭಗೊಂಡಿದೆ ಎಂದರು. ಅಕ್ಟೋಬರ್ 20ರಂದು ಸ್ಟೆಪ್ ಇನ್ ಔಟ್ ಆಹಾರ ಉತ್ಸವ ನಡೆಯಲಿದೆ. ನವೆಂಬರ್‌ನಲ್ಲಿ ಫ್ಯಾಷನ್ ಮತ್ತು ಮೋಜಿನ ಡೆನಿಮ್ ಫೆಸ್ಟಿವಲ್ ನಡೆಯಲಿದೆ. ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಮಾಲ್‌ನಲ್ಲಿನ ಅಲಂಕಾರಕ್ಕೆ ದೇವಿ ಮಹಾಲಕ್ಷ್ಮಿ ಸ್ಫೂರ್ತಿಯಾಗಲಿದ್ದಾರೆ. ಬೃಹತ್ ಗಾತ್ರದ ಕಮಲ, ನವಿಲುಗಳ ಆಕಾರಗಳನ್ನು ಕ್ರಿಸ್ಟೆಲ್‌ಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಇವು ದೀಪಾವಳಿಯ ಹೊಳಪಿಗೆ ಮತ್ತಷ್ಟು ಮೆರುಗು ನೀಡಲಿದೆ. ಜ್ಯುವೆಲ್ಲರಿ ಫೆಸ್ಟ್-19 ನಡೆಯಲಿದ್ದು, ಕಾರ್ಯಕ್ರಮದಲ್ಲಿ ಎಲ್ಲಾ ಫ್ಯಾಷನ್ ಅಗತ್ಯಗಳು ಒಂದೇ ಸೂರಿನಡಿ ಲಭ್ಯವಾಗಲಿದ್ದು, ಇಲ್ಲಿಗೆ ಭೇಟಿ ನೀಡಿ ಎಂಜಾಯ್ ಮಾಡಿ ಎಂದರು.