ETV Bharat / state

ಚುನಾವಣೆಗೆ ಸಿಲಿಕಾನ್ ಸಿಟಿ ರೆಡಿ, ರೌಡಿಗಳಿಂದ ಮುಚ್ಚಳಿಕೆ ಪತ್ರ, ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್

ನಗರದಲ್ಲಿರುವ 7 ಸಾವಿರ ರೌಡಿಗಳ ಪೈಕಿ, 6 ಸಾವಿರ ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಂಡಿದ್ದೇವೆ. 7 ಜನರನ್ನ ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದೇವೆ. ಬೇರೆ ರೌಡಿಗಳನ್ನ ಆಯಾ ವಿಭಾಗದ ಡಿಸಿಪಿಗಳು ಕರೆಸಿ ಪರೇಡ್ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ​​ ಕಚೇರಿ
author img

By

Published : Apr 9, 2019, 10:30 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಅಭ್ಯರ್ಥಿಗಳು ಈ ಬಾರಿ ಗೆಲುವು ತಮ್ಮದೇ ಎಂದು ಹೇಳುತ್ತಾ ಪ್ರಚಾರದಲ್ಲಿ‌ ಮುಳುಗಿದ್ದಾರೆ. ಇದೇವೇಳೆ ಸಮಾಜಘಾತುಕ ಶಕ್ತಿಗಳು ಹಾಗು ಅಹಿತಕರ ಘಟನೆಗಳನ್ನು ತಡೆಯಲು ಬೆಂಗಳೂರು ನಗರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಪಾರದರ್ಶಕವಾಗಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಹಾಗೂ ಬೆಂಗಳೂರು‌ ನಗರ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳುತ್ತಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿದ್ದು ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ , ಗ್ರಾಮಾಂತರ ವ್ಯಾಪ್ತಿಯಲ್ಲಿ ಖಾಕಿ ಕಣ್ಗಾವಲು ಇಡಲಾಗಿದೆ. ನಗರದಲ್ಲಿ 16 ಸಾವಿರ ಮಂದಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರೀಯ ಸಶಸ್ತ್ರ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ 10 ರಿಂದ 12 ಸೆಂಟ್ರಲ್ ಫೋರ್ಸ್​ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇನ್ನು ಮತಗಟ್ಟೆಗಳ ಸಂಖ್ಯೆ ಆಧರಿಸಿ ಅದರಲ್ಲಿ 1,600 ಸೂಕ್ಷ್ಮ , 600 ಸಾಧಾರಣಾ ಮತಗಟ್ಟೆ ಎಂದು ಘೋಷಣೆ ಮಾಡಲಾಗಿದೆ. ವಿಶೇಷವಾಗಿ ನಗರದಲ್ಲಿ ಸಿಆರ್​​​ಪಿಎಫ್ ಪಥ ಸಂಚಲನ ನಡೆಸಲಾಗಿದೆ.

ನಗರದಾದ್ಯಂತ 1,200 ಸಿಸಿಟಿವಿ ಅಳವಡಿಸಲಾಗಿದ್ದು, ಡಿಸಿಪಿಗಳು ಆಯಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಮುಖ್ಯವಾಗಿ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಒಟ್ಟು 7 ಸಾವಿರ ರೌಡಿಗಳ ಪೈಕಿ, 6 ಸಾವಿರ ರೌಡಿಗಳಿಂದ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಿರುವಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 7 ಜನರನ್ನ ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದೇವೆ. ಇತರೆ ರೌಡಿಗಳನ್ನು ಆಯಾ ವಿಭಾಗದ ಡಿಸಿಪಿಗಳು ಕರೆಸಿ ಪರೇಡ್ ನಡೆಸ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.