ಬೆಂಗಳೂರು: ನಗರದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಆನ್ಲೈನ್ ಮೂಲಕ ನೋಂದಣಿ ಮಾಡಿ ಮೊದಲ ಲಸಿಕೆ ಪಡೆದವರು 4,20,088 ಜನ. ಆದರೆ ಸ್ಥಳದಲ್ಲೇ ನೋಂದಣಿ ಮಾಡಿ ಮೊದಲ ಲಸಿಕೆ ಪಡೆದವರು 9,81,900 ನಾಗರಿಕರು ಎಂದು ಪಾಲಿಕೆಯ ಅಂಕಿ ಸಂಖ್ಯೆಗಳು ತಿಳಿಸುತ್ತಿವೆ.
ಇನ್ನು 2ನೇ ಡೋಸ್ ಲಸಿಕೆ ಆನ್ಲೈನ್ ಮೂಲಕ 1,31,885 ನಾಗರಿಕರು ನೋಂದಣಿ ಮಾಡಿ ಪಡೆದಿದ್ದು, ಸ್ಥಳದಲ್ಲಿ 2,85,449 ಜನ ಪಡಿದ್ದಿದ್ದಾರೆ. 23 ಮೇ ವರೆಗೆ 18-44 ವರ್ಷದ 91,00,852 ನಾಗರಿಕರಲ್ಲಿ 84,065 ಜನರು ಮೊದಲ ಲಸಿಕೆ ಪಡೆದಿದ್ದಾರೆ. 45-59 ವರ್ಷದ 17,94,346 ಮಂದಿಯಲ್ಲಿ 6,92,982 ಜನ ಮೊದಲ ಲಸಿಕೆ ಪಡೆದಿದ್ದು, 1,18,591ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 60+ ವಯಸ್ಸಿನ 8,07,000 ಜನರಲ್ಲಿ 6,18,142 ಮಂದಿ ಮೊದಲ ಲಸಿಕೆ ಪಡೆದಿದ್ದು 2,91,805 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
9,84,793 ಜನರು ಎರಡನೇ ಡೋಸ್ ಲಸಿಕೆಗೆ ಬಾಕಿ:
9,84,793 ಮಂದಿ ಎರಡನೇ ಡೋಸ್ ಲಸಿಕೆ ಬಾಕಿ ಉಳಿದಿದ್ದು, ನಗರದಲ್ಲಿ ಶೇ12ರಷ್ಟು ಜನ ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಈ ಮೂಲಕ 18 - 44 ವರ್ಷದ 84,065ಮಂದಿ ಎರಡನೇ ಡೋಸ್ ಲಸಿಕೆ ಪಡಿಯಲು ಬಾಕಿ ಇದ್ದು, 45-59 ವರ್ಷದ 5,74,391 ಜನರಿಗೆ ಎರಡನೇ ಡೋಸ್ ಬಾಕಿ ಇವೆ ಹಾಗೂ 60+ ಜನರಿಗೆ 3,26,337 ಜನ ಎರಡನೇ ಡೋಸ್ ಲಸಿಕೆ ಬಾಕಿ ಇವೆ.
ಲಸಿಕೆ ಕೊರತೆ ಬೋರ್ಡ್ಗಳು ನಗರದ ಅನೇಕ ಲಸಿಕಾ ಕೇಂದ್ರಗಳಲ್ಲಿ ಕಂಡು ಬರುತ್ತಿದ್ದು, ಕೋವ್ಯಾಕ್ಸಿನ್ 2ನೇ ಡೋಸ್ ಪಡೆಯುವುದು ಸಾಹಸ ಪಡುವಂತಾಗಿದೆ. ಮೊದಲ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದ ನಂತರ 4-6 ವಾರದ ಗಡುವು ಲಸಿಕೆಗೆ ಇದೆ. ಈವರೆಗೂ 2ನೇ ಡೋಸ್ ಕೋವ್ಯಾಕ್ಸಿನ್ ನಗರದಲ್ಲಿ 6,570 ದಾಸ್ತಾನು ಇದೆ ಹಾಗೂ ಕೋವಿ ಶೀಲ್ಡ್ 72,960 ದಾಸ್ತಾನು ಇದೆ ಎಂದು ಪಾಲಿಕೆಯ ವರದಿಯಲ್ಲಿದೆ.