ETV Bharat / state

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಿಲಿಕಾನ್ ಸಿಟಿ ಜನರ ನಿರಾಸಕ್ತಿ : ಮನೆಗಳಲ್ಲೇ ಹಬ್ಬ ಆಚರಣೆ - ಸಾರ್ವಜನಿಕ ಗಣೇಶೋತ್ಸವ ಆಚರಣೆ ಜನರು ನಿರಾಸಕ್ತಿ

ಒಟ್ಟು 198 ವಾರ್ಡ್​​ಗಳಲ್ಲಿ 161 ಕಡೆ ಮಾತ್ರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಂಘ-ಸಂಸ್ಥೆಗಳು ಪಾಲಿಕೆಯಿಂದ ಅನುಮತಿ ಪಡೆದಿವೆ. ಆದರೆ, ಅನುಮತಿ‌ ಪಡೆದ ಎಲ್ಲಾ ಕಡೆಯೂ ಗಣೇಶಮೂರ್ತಿ ಪ್ರತಿಷ್ಠಾಪನೆ ಆಗಿಲ್ಲ. ಇನ್ನು, 37 ವಾರ್ಡ್​​ಗಳಲ್ಲಿ ಯಾವುದೇ ಬೇಡಿಕೆ ಬಂದಿಲ್ಲ. ದೇವಸ್ಥಾನಗಳಲ್ಲಿ 38 ಕಡೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿದ್ದಾರೆ..

ಸರಳ ಗಣೇಶ ಹಬ್ಬ ಆಚರಣೆ
simple Ganesha festival
author img

By

Published : Sep 10, 2021, 4:29 PM IST

ಬೆಂಗಳೂರು : ಕೊರೊನಾ ಹಿನ್ನೆಲೆ ಈ ಬಾರಿ ಕೆಲವು ನಿರ್ಬಂಧಗಳನ್ನ ಹೇರಿ ಸರ್ಕಾರ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡಿದೆ. ಈ ಹಿನ್ನೆಲೆ ಸಿಲಿಕಾನ್ ಸಿಟಿಯ ಜನರು ಮನೆಯಲ್ಲೇ ಸರಳವಾಗಿ ಗಣಪನನ್ನು ಆರಾಧಿಸುತ್ತಿದ್ದಾರೆ.

ಸರಳವಾಗಿ ಗಣೇಶನ ಹಬ್ಬ ಆಚರಣೆ..

ಪಕ್ಕದ ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್​ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಾಜ್ಯದಲ್ಲಿ ನಿಯಂತ್ರಣದಲ್ಲಿರುವ ಕೇಸ್​ಗಳ ಪ್ರಮಾಣವನ್ನು ನೋಡಿಕೊಂಡು ಸರ್ಕಾರ ಗಣೇಶನ ಹಬ್ಬ ಆಚರಣೆಗೆ ಅವಕಾಶ ಕೊಟ್ಟಿದೆ. ಕೆಲವೆಡೆ ವಾರ್ಡ್​​ಗಳಲ್ಲಿ ಗಣಪನ ಮೂರ್ತಿಗಳು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದಾರೆ. ಇನ್ನೊಂದೆಡೆ ಮನೆಯಲ್ಲೆಯೇ ಪುಟ್ಟ ಗಣಪನನ್ನು ಪೂಜೆ ಮಾಡಲಾಗುತ್ತಿದೆ.

ಪಾಲಿಕೆಯಿಂದ ಅನುಮತಿ ಪಡೆದ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿವರ : ಒಟ್ಟು 198 ವಾರ್ಡ್​​ಗಳಲ್ಲಿ 161 ಕಡೆ ಮಾತ್ರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸಂಘ-ಸಂಸ್ಥೆಗಳು ಪಾಲಿಕೆಯಿಂದ ಅನುಮತಿ ಪಡೆದಿವೆ. ಆದರೆ, ಅನುಮತಿ‌ ಪಡೆದ ಎಲ್ಲಾ ಕಡೆಯೂ ಗಣೇಶಮೂರ್ತಿ ಪ್ರತಿಷ್ಠಾಪನೆ ಆಗಿಲ್ಲ. ಇನ್ನು, 37 ವಾರ್ಡ್​​ಗಳಲ್ಲಿ ಯಾವುದೇ ಬೇಡಿಕೆ ಬಂದಿಲ್ಲ. ದೇವಸ್ಥಾನಗಳಲ್ಲಿ 38 ಕಡೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿದ್ದಾರೆ.

report
ಪಾಲಿಕೆಯಿಂದ ಅನುಮತಿ ಪಡೆದ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿವರ

ಗಣೇಶ ವಿಸರ್ಜನೆಗೆ ವ್ಯವಸ್ಥೆ : ನಗರದಲ್ಲಿ ಗಣೇಶ ವಿಸರ್ಜನೆಗೆ ಒಟ್ಟು 301 ಕಡೆ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಒಂದು ಕರೆ ಹಾಗೂ ಮೂರು ಕಡೆ ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ. ಸ್ಯಾಂಕಿ ಟ್ಯಾಂಕ್ ಹಾಗೂ ಯಡಿಯೂರು ಕೆರೆ ಕಲ್ಯಾಣಿಯಲ್ಲಿ ಮಾತ್ರ ಪಾಲಿಕೆ ವ್ಯವಸ್ಥೆ ಮಾಡಿದೆ. ಹಲಸೂರು ಕೆರೆಯ ಹೊರ ಭಾಗದಲ್ಲಿ ದೊಡ್ಡ ಟ್ಯಾಂಕರ್ ಇಟ್ಟು ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ತಿಳಿಸಿದ್ದಾರೆ.

ಕೋವಿಡ್​​ಗೆ ಹೆದರಿದ ಜನ : ಎರಡನೇ ಅಲೆಯ ಹೊಡೆತದಿಂದ ಇತ್ತೀಚಿಗಷ್ಟೆ ಚೇತರಿಸಿಕೊಂಡಿರುವ ಕಾರಣ ಜನರಲ್ಲಿಯೂ ಗುಂಪುಗೂಡುವ ಬಗ್ಗೆ, ಸಾಮಾಜಿಕ ಅಂತರ ಇಲ್ಲದೆ ಒಂದೆಡೆ ಸೇರಿದರೆ 3ನೇ ಅಲೆ ಆರಂಭವಾಗುವ ಭೀತಿ ಇದೆ.

ಹೀಗಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಣೆ ಮಾಡಲು ಹೆಚ್ಚಿನ ಜನರು ಆಸಕ್ತಿ ತೋರಿಸಿಲ್ಲ. ಕೆಲ ಸಂಘಟನೆಗಳು ಮಾತ್ರ ಮುಂದೆ ಬಂದಿವೆ. ಅದೂ ಎಲ್ಲಾ ವಾರ್ಡ್​​ಗಳಲ್ಲಿಯೂ ಜನರು ಆಸಕ್ತಿ ತೋರಿಸಿಲ್ಲ ಎಂಬುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.‌

ಓದಿ: ದಂಡಿನ ಮಾರಮ್ಮ ದೇಗುಲದಲ್ಲಿ ವಾಮಾಚಾರ ನಡೆಸಿ ಹುಂಡಿ ಹಣ ದೋಚಿದ ಕಳ್ಳರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.