ಬೆಂಗಳೂರು: ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆಯಾಗಲಿ ಎಂದು ಒತ್ತಾಯಿಸಿ ಪ್ರಧಾನಿಯವರಿಗೆ ಸಿದ್ದರಾಮಯ್ಯ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಂಚಿಕೆ ಕಡಿಮೆ ಆಗಿದೆ. ಇಸ್ರೇಲ್ ಶೇ.36, ಯುಕೆ ಶೇ.4, ಯುಎಸ್ ಶೇ.6ರಷ್ಟು ಲಸಿಕೆ ವಿತರಿಸಿದೆ. ಆದರೆ ನಮ್ಮಲ್ಲಿ ಮಾತ್ರ ಕೇವಲ ಶೇ.0.5ರಷ್ಟು ಮಾತ್ರ ವಿತರಣೆ ಆಗಿದೆ. ಲಸಿಕೆ ವಿತರಣೆ ತ್ವರಿತಗೊಳಿಸುವಂತೆ ಪತ್ರದಲ್ಲಿ ಅವರು ಒತ್ತಡ ಹೇರಿದ್ದಾರೆ.
![siddharamaih writes letter to pm narendra modi](https://etvbharatimages.akamaized.net/etvbharat/prod-images/kn-bng-05-siddu-letter-to-pm-script-7208077_05032021171851_0503f_1614944931_366.jpg)
2 ಮಾದರಿಯ ಕೋವಿಡ್ ಲಸಿಕೆಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಹಂತಹಂತವಾಗಿ ನಾಗರಿಕರಿಗೆ ಇದರ ಪೂರೈಕೆ ಆಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ವಿತರಣೆ ಪ್ರಮಾಣ ಸಾಕಷ್ಟು ವಿಳಂಬ ಆಗುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಮಂದಿ ಈಗಿನ ಬೆಲೆಯಲ್ಲಿ ಕೋವಿಡ್ ಲಸಿಕೆ ಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ ಸರ್ಕಾರ ಈ ವ್ಯಾಕ್ಸಿನನ್ನು ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಬರೆದಿದ್ದಾರೆ.
ಖಾಸಗಿ ಆರೋಗ್ಯ ಕೇಂದ್ರಗಳ ಮೂಲಕ ಲಸಿಕೆ ವಿತರಿಸುವ ಕಾರ್ಯ ಆದರೆ ಕೇವಲ 250 ರೂ. ಬೆಲೆ ವಿಧಿಸುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಬೇಕು ಎಂದು ಪತ್ರದಲ್ಲಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.