ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಕೂಡ, ಇದು ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಬಿಜೆಪಿ ವ್ಯಂಗ್ಯವಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ. ಪರಿಣಾಮವಾಗಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸದ್ಯದಲ್ಲೇ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರಿಂದಲೇ ಮಾಹಿತಿ ಬರುತ್ತಿದೆ. ಇನ್ನು ತಮ್ಮ ತಂದೆಯವರ ಪ್ರಭಾವ ಬಳಿಸಿ ಎಲ್ಲೆಲ್ಲೂ ತನ್ನದೇ ನಡೆಯಲಿ ಎನ್ನುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಯವರು ಮತ್ತೊಂದು ಕಡೆ ಪ್ರಯತ್ನ ನಡೆಸುತ್ತಿದ್ದಾರೆ.
-
ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಿದು. @INCKarnataka ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ. ಪರಿಣಾಮವಾಗಿ,
— BJP Karnataka (@BJP4Karnataka) October 31, 2023 " class="align-text-top noRightClick twitterSection" data="
▪️ಡಿ. ಕೆ. ಶಿವಕುಮಾರ್ ಅವರು ಸದ್ಯದಲ್ಲೇ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರಿಂದಲೇ ಮಾಹಿತಿ.…
">ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಿದು. @INCKarnataka ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ. ಪರಿಣಾಮವಾಗಿ,
— BJP Karnataka (@BJP4Karnataka) October 31, 2023
▪️ಡಿ. ಕೆ. ಶಿವಕುಮಾರ್ ಅವರು ಸದ್ಯದಲ್ಲೇ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರಿಂದಲೇ ಮಾಹಿತಿ.…ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಿದು. @INCKarnataka ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ. ಪರಿಣಾಮವಾಗಿ,
— BJP Karnataka (@BJP4Karnataka) October 31, 2023
▪️ಡಿ. ಕೆ. ಶಿವಕುಮಾರ್ ಅವರು ಸದ್ಯದಲ್ಲೇ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರಿಂದಲೇ ಮಾಹಿತಿ.…
ಇದರೊಂದಿಗೆ ಮೈಸೂರು ಪ್ರವಾಸದ ಪುಕಾರು ಹಬ್ಬಿಸಿ ಕೆಪಿಸಿಸಿ ಅಧ್ಯಕ್ಷರನ್ನೇ ಅಲುಗಾಡಿಸಿದ ಸತೀಶ್ ಜಾರಕಿಹೊಳಿಯವರು ಮಗದೊಂದು ಕಡೆಯಾಗಿದ್ದಾರೆ. ಇಷ್ಟು ಸಾಲದು ಎನ್ನುವಂತೆ ಈಗ ಕೆಲಸ ಬಿಟ್ಟು ವಿದೇಶಕ್ಕೆ ಹಾರಲು ಇತರ ಸನ್ಮಿತ್ರರು ಸಜ್ಜಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬಿಜೆಪಿ ಟೀಕಿಸಿದೆ.
ಕತ್ತಲಾದ ಮೇಲಷ್ಟೇ ಚರ್ಚಿಸಬಹುದಾದ ವಿಚಾರ ಮತ್ತು ಲೆಕ್ಕಾಚಾರಗಳ ಮಾತುಕತೆಗೆ "ಆಯ್ದ ಆಮಂತ್ರಿತರ ಡಿನ್ನರ್." ಹಣಕಾಸಿನ ಲೆಕ್ಕಾಚಾರಗಳಿರುವಾಗ ಭಿನ್ನಾಭಿಪ್ರಾಯ ಸಹಜ. ಕಲೆಕ್ಷನ್ ವ್ಯವಹಾರ ಬದಿಗಿಟ್ಟು ಹೊರರಾಜ್ಯ ಚುನಾವಣೆಗಳಿಗೆ ಫಂಡ್ ಕಳಿಸಲು ಅಸಾಧ್ಯ ಎಂಬುದನ್ನು ಹೈ ಕಮಾಂಡ್‌ಗೆ ತಿಳಿಸಿ. ರಾಜ್ಯ ಸರ್ಕಾರ ಸುಲಲಿತವಾಗಿ ನಡೆಯುತ್ತದೆ ಎಂದು ಬಿಜೆಪಿ ಸಲಹೆ ನೀಡಿದೆ.
ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಣೆ ಮಾಡಿ ಸರ್ಕಾರ ಮರ್ಯಾದೆ ಕಳೆದುಕೊಂಡಿತ್ತು. ಇದೀಗ ಅನುದಾನವಿಲ್ಲದೆ ಮೊಟ್ಟೆ ವಿತರಣೆಯನ್ನೇ ಸ್ಥಗಿತ ಮಾಡಿ ರಾಜ್ಯದಲ್ಲಿ ಅಪೌಷ್ಟಿಕತೆಗೆ ನಾಂದಿ ಹಾಡಿದೆ. ಲೂಟಿಯೊಂದನ್ನೇ ಅಜೆಂಡಾವಾಗಿರಿಸಿಕೊಂಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ ಜನರಿಗೆ ಬರೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಸರ್ಕಾರ ಸದಾ ಕರ್ನಾಟಕಕ್ಕೆ ಸಂಚಕಾರ ತರಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸ್ಟಾಲಿನ್ ಸರ್ಕಾರದ ಪ್ರೇಮ, ಕರ್ನಾಟಕಕ್ಕೆ ಮರಣಶಾಸನವಾಗುತ್ತಿದೆ. ನ್ಯಾಯಾಲಯದಲ್ಲಿ ಕಾವೇರಿ ಕೊಳ್ಳದ ರೈತರ ಪರ ಸಮರ್ಥ ವಾದ ಮಂಡಿಸದೆ ಕಾಂಗ್ರೆಸ್ ಸರ್ಕಾರ ಕಳ್ಳಾಟವಾಡುತ್ತಿದ್ದು, ಕಾವೇರಿ ನೀರು ಸರಾಗವಾಗಿ ಹರಿಯುತ್ತಿದೆ. ಕಾಂಗ್ರೆಸ್‌ಗೆ ಮತ ನೀಡಿದ ಪರಿಣಾಮ, ಕರ್ನಾಟಕದ ಜನತೆ ಕುಡಿಯುವ ಹನಿ ನೀರಿಗೂ ತತ್ವಾರ ಪಡುವ ದಿನ ಅತಿ ಶೀಘ್ರದಲ್ಲಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ: ಬರ ಅಧ್ಯಯನಕ್ಕೆ 17 ತಂಡ ರಚಿಸಿದ ಬಿಜೆಪಿ.. ನ.3 ರಿಂದ 10 ರ ವರೆಗೆ ಕೇಸರಿ ಪಡೆಯಿಂದ ರಾಜ್ಯ ಪ್ರವಾಸ