ಬೆಂಗಳೂರು: ನಾಳೆ ಆರಂಭವಾಗುವ ಎಸ್ಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಡೆಯಲಿ ಎಂದು ಆಶಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಪ್ರೀತಿಯ ವಿದ್ಯಾರ್ಥಿಗಳಿಗೆ ಶುಭಾಶಯಗಳು.. ಒತ್ತಡಕ್ಕೆ ಒಳಗಾಗಬೇಡಿ. ನೆನಪಿರಲಿ ಇದು ಶಾಲೆಯ ಪರೀಕ್ಷೆ, ಜೀವನದ ಪರೀಕ್ಷೆ ಅಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಯಶಸ್ಸು ನಿಮ್ಮದಾಗಲಿ. ಗುಡ್ ಲಕ್ ಎಂದಿದ್ದಾರೆ.
![Siddaramaiah wish](https://etvbharatimages.akamaized.net/etvbharat/prod-images/7754904_sid.jpg)
ಸರ್ಕಾರಕ್ಕೆ ಸಲಹೆ..
ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗದೆ ನಿಶ್ಚಿಂತೆಯಿಂದ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಿಸುವುದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಜವಾಬ್ದಾರಿ. ಮಕ್ಕಳ ಹೆತ್ತವರು ರಾಜ್ಯ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಗೆ ಭಂಗ ತರಬೇಡಿ ಎಂದು ಸಲಹೆ ಇತ್ತಿದ್ದಾರೆ.