ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
![Siddaramaiah tweet about Rs 20 lakh crore economic package](https://etvbharatimages.akamaized.net/etvbharat/prod-images/kn-bng-06-siddu-tweet-script-7208077_21052020172420_2105f_1590062060_462.jpg)
ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಟ್ವೀಟ್ ಮೂಲಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಅಪ್ಪಟ ಸುಳ್ಳು, ಅತಿರಂಜಿತ ವಿಷಯಗಳನ್ನೇ ಮುಂದಿಟ್ಟುಕೊಂಡು ಜನರನ್ನು ವಂಚಿಸುವ ಆಡಳಿತದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೊರೊನಾ ಪರಿಹಾರ ಪ್ಯಾಕೇಜ್ ನಮ್ಮ ಮುಂದಿದೆ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Siddaramaiah tweet about Rs 20 lakh crore economic package](https://etvbharatimages.akamaized.net/etvbharat/prod-images/kn-bng-06-siddu-tweet-script-7208077_21052020172420_2105f_1590062060_201.jpg)
ಹೀಗಾಗಿ 20 ಲಕ್ಷ ಕೋಟಿಯಲ್ಲಿರುವ 13 ಸೊನ್ನೆಗಳಲ್ಲಿ ಯಾರಿಗೆ ಯಾವ 'ಸೊನ್ನೆ' ಸಿಗಲಿದೆ ಎನ್ನುವುದು ಈಗ ಮೂಡಿರುವ ಪ್ರಶ್ನೆಯಾಗಿದೆ ಎಂದಿದ್ದಾರೆ. ನರೇಂದ್ರ ಮೋದಿ ಕೈಗೊಳ್ಳುತ್ತಿರುವ ಪ್ರತಿಯೊಂದು ಕ್ರಮವನ್ನು ಲೇವಡಿ ಮಾಡುತ್ತಲೇ ಬಂದಿರುವ ಸಿದ್ದರಾಮಯ್ಯ, ಇದೀಗ ಮಹತ್ವದ ಕೊರೊನಾ ಪ್ಯಾಕೇಜ್ ವಿಚಾರವನ್ನು ಕೂಡ ಲೇವಡಿ ಮಾಡಿದ್ದಾರೆ.