ETV Bharat / state

ರಾಜ್ಯಪಾಲರದ್ದು ಅತ್ಯಂತ ಸಪ್ಪೆ ಭಾಷಣ: ಸಿದ್ದರಾಮಯ್ಯ

ವಿಧಾನ ಮಂಡಲ ಉದ್ದೇಶಿಸಿ ರಾಜ್ಯಪಾಲರು ನಡೆಸಿದ್ದು ಗೊತ್ತು ಗುರಿ ಇಲ್ಲದ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

Siddaramaiah, H.K Patil Reaction
ವಿಪಕ್ಷ ನಾಯಕ ಸಿದ್ದರಾಮಯ್ಯ,ಮಾಜಿ ಸಚಿವ ಎಚ್​. ಕೆ. ಪಾಟೀಲ್
author img

By

Published : Feb 17, 2020, 6:16 PM IST

ಬೆಂಗಳೂರು: ವಿಧಾನ ಮಂಡಲ ಉದ್ದೇಶಿಸಿ ರಾಜ್ಯಪಾಲರು ನಡೆಸಿದ್ದು ಗೊತ್ತು ಗುರಿ ಇಲ್ಲದ ಭಾಷಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ,ಮಾಜಿ ಸಚಿವ ಎಚ್​. ಕೆ. ಪಾಟೀಲ್

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ಸಾಮಾನ್ಯವಾಗಿ ಸರ್ಕಾರದ ನೀತಿ ಮತ್ತು ದ್ಯೇಯೋದ್ದೇಶವನ್ನು ಈ ಭಾಷಣದ ಮೂಲಕ ನೀಡುವ ಹೇಳಿಕೆ. ಆದರೆ ಇದು ಗೊತ್ತು ಗುರಿ ಇಲ್ಲದಂತಾಗಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಈ ಸರ್ಕಾರದ ಸಾಧನೆ ಬಗ್ಗೆ ಏನನ್ನೂ ಹೇಳಲೇ ಇಲ್ಲ. ನಮ್ಮ ಸರ್ಕಾರದ, ಸಮ್ಮಿಶ್ರ ಸರ್ಕಾರದ ಸಾಧನೆಗಳ ಪ್ರಸ್ತಾಪ ಮಾಡಲಾಗಿದೆ. ಇದಲ್ಲದೆ ಪ್ರವಾಹ ಪೀಡಿತರಿಗೆ ಪರಿಹಾರ ವಿತರಿಸುವ ಬಗ್ಗೆ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲಾಗಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರವಾಹ ಸಮಸ್ಯೆ ಎದುರಾಗಿತ್ತು. 3 ರಿಂದ 10ನೇ ತಾರೀಖಿನವರೆಗೆ ಸಮಸ್ಯೆ ಎದುರಾಗಿತ್ತು. ಮನೆ ಕಳೆದುಕೊಂಡವರಿಗೆ, ಬೆಳೆ ಕಳೆದುಕೊಂಡವರಿಗೆ, ಭೂಮಿ ಕೊಚ್ಚಿ ಹೋಗಿರುವುದಕ್ಕೆ ಪರಿಹಾರ ಕೊಡುವ ಕಾರ್ಯ ಆಗಿಲ್ಲ. ಸಂತ್ರಸ್ತರು ಕಷ್ಟದಲ್ಲಿದ್ದಾರೆ. ಶಾಲಾ ಕೊಠಡಿಗಳು ಕೂಡ ನಿರ್ಮಾಣವಾಗಿಲ್ಲ. ಇದು ಸಂವಿಧಾನ ಬಾಹಿರವಾಗಿ ನಿರ್ಮಾಣವಾದ ಸರ್ಕಾರ. ಕಳೆದ ಆರು ತಿಂಗಳಲ್ಲಿ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದ್ದಾರೆ ಹೊರತು, ಬೇರೆ ಏನು ಮಾಡಿಲ್ಲ. ರಾಜ್ಯಪಾಲರದ್ದು ಅತ್ಯಂತ ಸಪ್ಪೆ ಭಾಷಣ ಎಂದು ಹೇಳಲು ಬಯಸುತ್ತೇನೆ ಎಂದರು.

ರಾಜ್ಯಪಾಲರ ಭಾಷಣ ಎಲ್ಲರಿಗೂ ನಿರಾಸೆ ತಂದಿದೆ: ಮಾಜಿ ಸಚಿವ ಎಚ್​. ಕೆ. ಪಾಟೀಲ್ ಮಾತನಾಡಿ ರಾಜ್ಯಪಾಲರ ಭಾಷಣ ಎಲ್ಲರಿಗೂ ನಿರಾಸೆ ತಂದಿದ್ದು, ಹೊಸ ವಿಚಾರಗಳ ಪ್ರಸ್ತಾಪವಾಗಿಲ್ಲ ಎಂದರು. ರಾಜ್ಯಪಾಲರ ಭಾಷಣದಲ್ಲಿ ಹೊಸ ಯೋಚನೆಗಳು ಹೊಸ ಆಲೋಚನೆಗಳು ಇಲ್ಲ. ರಾಜ್ಯ ರಾಷ್ಟ್ರಮಟ್ಟದಲ್ಲಿ ನಡೆದಿರುವಂತಹ ಸಾಮಾಜಿಕ-ರಾಜಕೀಯ ಆಡಳಿತಾತ್ಮಕ ಬೆಳವಣಿಗೆಗಳ ಬಗ್ಗೆ ಒಂದು ಶಬ್ದವೂ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಗಿಲ್ಲ. ಸಾಂವಿಧಾನಿಕ ಮುಖ್ಯಸ್ಥರಾಗಿ ಅವರು ಏನು ಪ್ರಸ್ತಾಪ ಮಾಡಬೇಕಿತ್ತು ಅದನ್ನು ಮಾಡಿಲ್ಲ ಎಂದರು.

ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳು ಪ್ರಸ್ತಾಪವನ್ನು ರಾಜ್ಯಪಾಲರು ಮಾಡಬೇಕಿತ್ತು. ಇತ್ತೀಚೆಗೆ ಆದ ಆರ್ಥಿಕ ಏರುಪೇರುಗಳನ್ನು ಅವರು ಗಮನಿಸಿಯೇ ಇಲ್ಲ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಅವರ ಗಮನಕ್ಕೆ ಬಂದಿಲ್ಲ. ಪ್ರವಾಹದಿಂದ ರಾಜ್ಯದ ರೈತರಿಗೆ ಆಗಿರುವ ಬಹುದೊಡ್ಡ ಅನ್ಯಾಯದ ಬಗ್ಗೆ ಅವರು ಪ್ರಸ್ತಾಪ ಮಾಡಿಲ್ಲ. ಹೆಚ್ಚಿನ ಹಣವನ್ನು ಕೇಂದ್ರ ಸರ್ಕಾರ ಕೊಡಲೇಬೇಕು ಎನ್ನುವ ಮೊತ್ತವನ್ನು ಅವರ ಭಾಷಣದ ಮೂಲಕ ತಿಳಿಸಿಲ್ಲ. ಇಂಥದ್ದೊಂದು ರಾಜಕೀಯ ನಿಲುವು ಅವರ ಭಾಷಣದ ಮೂಲಕ ಬರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಅವರಿಂದ ಒಂದಷ್ಟು ನಿರೀಕ್ಷೆ ಇದ್ದದ್ದು ಹುಸಿಯಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.