ETV Bharat / state

ಅಂಗನವಾಡಿ ಆಹಾರ ದುರ್ಬಳಕೆ ಪ್ರಕರಣ: ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ - Siddaramaiah demands resignation of minister for Anganwadi food abuse case

ಸರ್ಕಾರದ ಆಹಾರ ಸ್ವಂತಕ್ಕೆ ಬಳಕೆ ಸರ್ಕಾರದಿಂದ ಅಂಗನವಾಡಿಗೆ ಕೊಟ್ಟ ಆಹಾರ ಪದಾರ್ಥವನ್ನು ಬಿಜೆಪಿಯ ಸ್ಥಳೀಯ ನಾಯಕರು ತಮ್ಮ ಸ್ವಂತ ಕೊಡುಗೆಯ ರೀತಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Siddaramaiah
ಅಂಗನವಾಡಿ ಆಹಾರ ದುರ್ಬಳಕೆ ಪ್ರಕರಣ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
author img

By

Published : May 3, 2020, 4:28 PM IST

ಬೆಂಗಳೂರು: ಅನೇಕಲ್​ನಲ್ಲಿ ಅಂಗನವಾಡಿ ಮಕ್ಕಳ ಆಹಾರ ದುರ್ಬಳಕೆ ಪ್ರಕರಣ ಸಂಬಂಧ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಅವರ ಆಗ್ರಹಿಸಿದ್ದಾರೆ.

ಅಂಗನವಾಡಿ ಆಹಾರ ದುರ್ಬಳಕೆ ಪ್ರಕರಣ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ರೇಸ್​ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಆನೇಕಲ್​ನಲ್ಲಿ ಕೇವಲ ಸ್ಯಾಂಪಲ್ ಅಷ್ಟೇ. ಇಡೀ ರಾಜ್ಯದಲ್ಲೇ ಇದು ನಡೆಯುತ್ತಿದೆ. ನಮ್ಮ ಶಾಸಕರು, ಸಂಸದರಿರುವ ಕಡೆಯೇ ಹೀಗೆ. ಇನ್ನು ಬಿಜೆಪಿ ಶಾಸಕರಿರುವ ಕಡೆ ಹೇಗೆ ನಡೆಯುತ್ತಿರಬಹುದು. ಯಡಿಯೂರಪ್ಪನವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆಹಾರ ಸ್ವಂತಕ್ಕೆ ಬಳಕೆ ಸರ್ಕಾರದಿಂದ ಅಂಗನವಾಡಿಗೆ ಕೊಟ್ಟ ಆಹಾರ ಪದಾರ್ಥವನ್ನು ಬಿಜೆಪಿಯ ಸ್ಥಳೀಯ ನಾಯಕರು ತಮ್ಮ ಸ್ವಂತ ಕೊಡುಗೆಯ ರೀತಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಕ್ಕರೆ ಸೇರಿ ಬೇರೆ ಆಹಾರ ಪದಾರ್ಥದ ಕವರ್ ಚೇಂಜ್ ಮಾಡಿ ಅವರ ಕವರ್​ಗೆ ಹಾಕಿದ್ದಾರೆ. ಅದನ್ನ ಜನರಿಗೆ ನಾವು ಕೊಟ್ಟಿದ್ದು ಅಂತ ಹಂಚಿದ್ದಾರೆ. ಆನೇಕಲ್ ತಾಲೂಕಿನಾದ್ಯಂತ ಹಂಚಿದ್ದಾರೆ. ಹಿಂದೆಯೂ ಹೀಗೆ ಮಾಡಿದ್ದರು. ಆಗಲೂ ನಾವು ಬಯಲಿಗೆಳೆದಿದ್ದೆವು. ಮಕ್ಕಳು, ಬಾಣಂತಿಯರ ಆಹಾರ ಈ ರೀತಿ ಮಾಡಿದ್ರೆ ಹೇಗೆ? ಬಿಜೆಪಿಯವರಿಗೆ ಮಾನಮರ್ಯಾದೆ ಇದ್ಯಾ? ಇವರು ಇನ್ನೆಂತ ಬಂಡರಿರಬೇಕು. ಇದು ನಿರ್ಲಜ್ಜತನದ ಪರಮಾವಧಿ. ಇದನ್ನ ಖಂಡಿಸಿದರೆ ಸಾಲದು ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದರ ಬಗ್ಗೆ ನಮ್ಮವರು ಕೇಸ್ ಕೂಡ ಕೊಟ್ಟಿದ್ದಾರೆ. ಇದಕ್ಕೆ ಏಳು ವರ್ಷ ಜೈಲು ಶಿಕ್ಷೆಯಾಗಲಿದೆ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ನೇರ ಹೊಣೆ ಸಿಎಂ ಯಡಿಯೂರಪ್ಪ ಆಗುತ್ತಾರೆ. ಸಿಎಂ ಅವರೇ ಇನ್ ಚಾರ್ಜ್ ಇದ್ರೂ ಹೀಗಾಗಿದೆ. ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಏನ್ಮಾಡ್ತಿದ್ದಾರೆ? ಇದರ ಬಗ್ಗೆ ಡಿ.ಕೆ.ಶಿವಕುಮಾರ್ ಬಹಿರಂಗ ಪಡಿಸಿದ್ದಾರೆ. ಆ ಬಗ್ಗೆ ಕೂಡಲೇ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಕ್ಕಳ ಆಹಾರ ಪಾಕೆಟ್ ಮೇಲೆ ಬಿಜೆಪಿ ಮುಖಂಡರ ಫೋಟೋ ಹಾಕಲಾಗಿದೆ. ಕೂಡಲೇ ಮುನಿರಾಜು ಎಂಬುವನನ್ನ ಅರೆಸ್ಟ್ ಮಾಡಿ. ಕೂಡಲೇ ತನಿಖೆಗೆ ಕೊಡಿ. ಯಡಿಯೂರಪ್ಪನವರೇ ನಿಮಗೆ ಮಾನಮರ್ಯಾದೆ ಇದ್ರೆ ಕ್ರಮ ತೆಗೆದುಕೊಳ್ಳಿ. ಇದರ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಜವಾಬ್ದಾರಿ ವಹಿಸಬೇಕು ಹಾಗೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾಜಿ ಸಚಿವರಾದ ಮೋಟಮ್ಮ ಹಾಗೂ ಡಾ ಜಯಮಾಲಾ ಮತ್ತಿತರರು ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.