ETV Bharat / state

ಮಾಡಾಳ್ ಲೂಟಿಯಲ್ಲಿ ನಿಮಗೂ ಪಾಲಿದೆಯಾ?: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ - ಟ್ವೀಟ್

'ಆನ್ಸರ್ ಮಾಡಿ ಮೋದಿ' ಎಂಬ ಟ್ಯಾಗ್​ಲೈನ್ ಅಡಿ ಸರಣಿ ಟ್ವೀಟ್- ವಿವಿಧ ವಿಚಾರ ಮುಂದಿಟ್ಟು ಟ್ವೀಟಾಸ್ತ್ರ ಪ್ರಯೋಗಿಸಿದ ವಿಪಕ್ಷ ನಾಯಕ- ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಮೋದಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ

PM Modi  and Siddaramaiah
ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ
author img

By

Published : Mar 12, 2023, 4:10 PM IST

ಬೆಂಗಳೂರು: ಪ್ರಧಾನಿ ನರೇಂದ್ರ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿವಿಧ ವಿಚಾರಗಳನ್ನು ಮುಂದಿಟ್ಟು ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. 'ಆನ್ಸರ್ ಮಾಡಿ ಮೋದಿ' ಎಂಬ ಟ್ಯಾಗ್ ​ಲೈನ್ ಅಡಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚನ್ನಗಿರಿ ಕ್ಷೇತ್ರದ ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಡುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ? ಎಂದು ಪ್ರಶ್ನಿಸಿದ್ದಾರೆ.

  • ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಚ್ಚುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ @narendramodi ಅವರೇ? 1/10#AnswerMadiModi

    — Siddaramaiah (@siddaramaiah) March 12, 2023 " class="align-text-top noRightClick twitterSection" data=" ">

ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ ನರೇಂಧ್ರ ಮೋದಿ ಅವರೇ?. ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು 'ತುಮ್ ಖಾವೋ, ಮುಜೆ ಬಿ ಖಿಲಾವೋ' ( ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ?, ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಲಿಲ್ಲವೇ ಮೋದಿ ಜೀ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

  • ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ
    ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ @narendramodi ಅವರೇ? 2/10#AnswerMadiModi

ಇದು ನರೇಂದ್ರ ಮೋದಿ ಕಾಲವೇ?: ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲ?. ಈಗ್ಯಾಕೆ ಹೀಗೆ ನರೇಂದ್ರ ಮೋದಿ ಜೀ? ಸದನದಲ್ಲಿ ಬ್ಲೂಫಿಲ್ಮ್ ನೋಡಿದ್ದ ಕಾರಣಕ್ಕಾಗಿ ಮೂವರು ಬಿಜೆಪಿ ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಅದು ವಾಜಪೇಯಿ ಕಾಲ, ಇದು ನರೇಂದ್ರ ಮೋದಿ ಕಾಲವೇ? ಎಂದು ಖಾರವಾಗಿ ಪ್ರಶ್ನೆ ಹಾಕಿದ್ದಾರೆ.

  • ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು ‘ತುಮ್ ಖಾವೋ, ಮುಜೆ ಬಿ ಖಿಲಾವೋ’ ( ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ @narendramodi ಅವರೇ? 3/10#AnswerMadiModi

ಯಾಕೆ ಉತ್ತರಿಸುತ್ತಿಲ್ಲ?: ಕಳೆದ ಬಾರಿ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ 10 % ಕಮಿಷನ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಸರ್ಕಾರ 40 % ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ಯಾಕೆ ಉತ್ತರಿಸುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂತೋಷ್ ಲಾಡ್ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿದ್ದಕ್ಕಾಗಿ ರಾಜೀನಾಮೆ ಕೊಡಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ನಮ್ಮ ಸರ್ಕಾರದ ವಿರುದ್ಧದ ಎಂಟು ಆರೋಪಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಗೊತ್ತಾ ನರೇಂದ್ರ ಮೋದಿ ಜೀ? ಎಂದು ಕೇಳಿದ್ದಾರೆ.

  • ಅಟಲಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮೆರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಿಲ್ಲವೇ @narendramodi ಜೀ? 4/10#AnswerMadiModi

ಹಿಂದೆ ಕರ್ನಾಟಕಕ್ಕೆ ಬಂದಿದ್ದ ನೀವು ಕರ್ನಾಟಕದ ಕಾಂಗ್ರೆಸ್ ದೆಹಲಿಯ ಹೈಕಮಾಂಡ್‌ಗೆ ಎಟಿಎಂ ಎಂದು ಗೇಲಿ ಮಾಡಿದ್ದೀರಿ. ನಿಮ್ಮ ಸಚಿವರು ಮತ್ತು ಶಾಸಕರು ಕೋಟಿ ಕೋಟಿ ಲೂಟಿ ಮಾಡಿ ನಿರ್ಭೀತಿಯಿಂದ ಇದ್ದಾರೆ ಎಂದರೆ ಕರ್ನಾಟಕ ರಾಜ್ಯ ನಿಮ್ಮ ಪಕ್ಷದ ಎಟಿಎಂ ಎಂದು ಅರ್ಥೈಸಬಹುದಾ?. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಎಲ್ಲಿಯವರೆಗೆ ಲಂಚದ ಹಣದಲ್ಲಿ ಪಾಲು ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗುತ್ತೋ ಅಲ್ಲಿಯ ವರೆಗೆ ಭ್ರಷ್ಟರು, ದುಷ್ಟರು ಎಲ್ಲರೂ ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ? ಎಂದು ಕೇಳಿದ್ದಾರೆ.

  • ವಾಜಪೇಯಿ ನೇತೃತ್ವದಲ್ಲಿ @BJP4India ಇದ್ದಾಗ ಮುಖ್ಯಮಂತ್ರಿ @BSYBJP ಮಾತ್ರವಲ್ಲ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲಾ? ಈಗ್ಯಾಕೆ ಹೀಗೆ @narendramodi ಜೀ? 5/10#AnswerMadiModi

ನರೇಂದ್ರ ಮೋದಿಯವರೇ ಕರ್ನಾಟಕದ ರೈತರ ಬದುಕು ನರಕರೂಪಿಯಾಗುತ್ತಿದೆ. ಕೇಂದ್ರ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರಾಕ್ಷಸ ರೀತಿಯಲ್ಲಿ ಕಾಡುತ್ತಿವೆ. 2023 ಬರುತ್ತಿದ್ದಂತೆಯೆ ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

  • ಸದನದಲ್ಲಿ ಬ್ಲೂಫಿಲ್ಮ್ ನೋಡಿದ್ದ ಕಾರಣಕ್ಕಾಗಿ ಮೂವರು @BJP4Karnataka ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಅದು ವಾಜಪೇಯಿ ಕಾಲ, ಇದು @narendramodi ಕಾಲವೇ? 6/10#AnswerMadiModi

ಪ್ರಧಾನಿ ನರೇಂದ್ರ ಮೋದಿ ಅವರಿಗೆ 8ನೇ ಕಂತಿನ ಪ್ರಶ್ನೆ ಹಾಗೂ ಸವಾಲು ಹಾಕಿರುವ ಸಿದ್ದರಾಮಯ್ಯ, ನೀವು ಮೈಸೂರು ಮಂಡ್ಯ ಭಾಗಕ್ಕೆ ಬರುತ್ತಿರುವುದರಿಂದ ಆ ಭಾಗದ ಸಮಸ್ಯೆಗಳ ಕುರಿತಾದ ಸಮಸ್ಯೆಗಳೇನು ಎಂಬ ಕುರಿತು ಮಾಹಿತಿ ತರಿಸಿಕೊಳ್ಳಿ ಹಾಗೂ ರೈತರೊಂದಿಗೆ, ಪತ್ರಕರ್ತರೊಂದಿಗೆ ಮಾತನಾಡಿದರೆ ಈ ಸಮಸ್ಯೆಗಳು ತಿಳಿಯುತ್ತವೆ. ಆದರೆ ನಿಮ್ಮದೇನಿದ್ದರೂ ಹೇಳುವುದಷ್ಟೆ ಆಗಿದೆ, ಕೇಳಿಸಿಕೊಂಡು ಅಭ್ಯಾಸವೆ ಇಲ್ಲವೆ?. ಮಾತೆತ್ತಿದರೆ ಭಾರತದ ಪರಂಪರೆಯ ಬಗ್ಗೆ ಮಾತನಾಡುತ್ತೀರಿ. ಭಾರತದ ಪ್ರಾಚೀನ ಜನಪರ ಪರಂಪರೆಯ ಶ್ರೀಮಂತಿಕೆ ಇರುವುದು ಕೇವಲ ಹೇಳುವ ಧಾರ್ಷ್ಟ್ಯದ ಗುಣದಲ್ಲಿ ಅಲ್ಲ. ಕೇಳಿಸಿಕೊಳ್ಳುವುದರಲ್ಲಿ ಇದೆ. ಉಪನಿಷತ್ ಅಂದರೇನೆ ಗುರು ಶಿಷ್ಯ ಇಬ್ಬರೂ ಒಟ್ಟಿಗೆ ಕೂತು ನಡೆಸುವ ಸಂವಾದ ಎಂದು ಅರ್ಥ ಎಂದು ಹೇಳಿದ್ದಾರೆ.

  • ಕಳೆದ ಬಾರಿಯ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ 10% ಕಮಿಷನ್ ಸರ್ಕಾರ ಎಂದು ಆಧಾರರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಸರ್ಕಾರ 40% ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ಯಾಕೆ ಉತ್ತರಿಸುತ್ತಿಲ್ಲ @narendramodi ಜೀ? 7/10#AnswerMadiModi

ಹಾಗಾಗಿಯೇ ಸಹನಾವವತು, ಸಹನೌಭುನಕ್ತು ಎಂದು ಹೇಳುವ ಮಂತ್ರವು ಮಾ ವಿದ್ವಿಷಾವ ಹೈ ಎಂದು ಮುಗಿಯುತ್ತದೆ. ಇಲ್ಲಿ ಸ್ವ ಎಂಬುದಿಲ್ಲ. ಸಹ ಎಂಬ ಮಾತು ಇದೆ. ನನ್ನನ್ನು ಪೋಷಿಸು ಎಂದು ಕೇಳುವ ಬದಲು ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುವ ಉಪನಿಷತ್ ಮಂತ್ರವು ನಮ್ಮಲ್ಲಿ ದ್ವೇಷ ಬಾರದೆ ಇರಲಿ ಎಂದು ಕೋರುತ್ತದೆ. ಇದರ ಲವಲೇಶ ಅಂಶವಾದರೂ ನಿಮ್ಮಲ್ಲಿ ಮತ್ತು ನಿಮ್ಮ ಪಕ್ಷದಲ್ಲಿ ಪಾಲನೆಯಾಗುತ್ತದೆಯೆ?. ಹಾಗಿದ್ದ ಮೇಲೂ ಭಾರತೀಯ ಪರಂಪರೆ, ಸನಾತನ ಧರ್ಮ ಎಂದು ನೀವು ಮತ್ತು ನಿಮ್ಮ ಪಕ್ಷದವರು ಹೇಳುವುದರಲ್ಲಿ ಅರ್ಥ ಇದೆಯೇ?. ಆದ್ದರಿಂದ ತಾವು ಮಾಧ್ಯಮಗಳೊಂದಿಗೆ, ರೈತರೊಂದಿಗೆ, ರೈತ ಸಂಘಟನೆಗಳೊಂದಿಗೆ ಕೂತು ಮುಕ್ತ ಸಂವಾದ ಮಾಡಿ ಅವರ ಸಂಕಷ್ಟವೇನೆಂದು ನಿಮಗೆ ಅರ್ಥವಾದರೂ ಆಗಬಹುದು. ಅದಕ್ಕೂ ಮೊದಲು ಈ 11 ಪ್ರಶ್ನೆಗೆ ಉತ್ತರಿಸಿ ಎಂದು 8ನೇ ಕಂತಿನ ಪ್ರಶ್ನೆ ಹಾಗೂ ಸವಾಲನ್ನು ಮುಂದಿಟ್ಟಿದ್ದಾರೆ.

1. ಅರಿಶಿಣ: ಮಂಡ್ಯ, ಮೈಸೂರಿನ ಕೆಲವು ಕಡೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ವ್ಯಾಪಕವಾಗಿ ಅರಿಶಿಣ ಬೆಳೆಯುತ್ತಾರೆ. ಸರ್ಕಾರದ ತೋಟಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ ಒಂದು ಎಕರೆಯಲ್ಲಿ ಅರಿಶಿಣ ಬೆಳೆಯಲು ಕನಿಷ್ಠ 1,43,325 ರೂಪಾಯಿಗಳಷ್ಟು ಖರ್ಚು ತಗಲುತ್ತದೆ. ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ಪ್ರಕಾರ 2.83 ಲಕ್ಷ ರೂಪಾಯಿಗಳಷ್ಟು ಖರ್ಚು ಬರುತ್ತದೆ. ಡಾ. ಸ್ವಾಮಿನಾಥನ್ ವರದಿಯ ಪ್ರಕಾರ ಲಾಭ ಸೇರಿಸಿದರೆ ಇದರ ದುಪ್ಪಟ್ಟು ಬೆಲೆ ಸಿಗಬೇಕು. ಒಂದು ಎಕರೆಯಲ್ಲಿ ಸಾಧಾರಣವಾಗಿ 24 ಕ್ವಿಂಟಾಲ್ ಅರಿಶಿಣ ಸಿಗುತ್ತದೆ ಎಂದರೆ 15-20 ಸಾವಿರ ರೂಪಾಯಿಗಳಷ್ಟು ಪ್ರತಿ ಕ್ವಿಂಟಾಲ್ ಅರಿಶಿಣಕ್ಕೆ ಬೆಲೆ ಸಿಕ್ಕರೆ ರೈತ ಉಳಿದುಕೊಳ್ಳುತ್ತಾನೆ. ಆದರೆ ಈಗ 6 ಸಾವಿರ ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಎಂಎಸ್‍ಪಿಯಲ್ಲೂ ಖರೀದಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಗೆ ಒಂದು ಬೆಳೆ/ ಉತ್ಪನ್ನ ಎಂದು ಘೋಷಿಸಿದ್ದೀರಿ, ಘೋಷಣೆಗಳಿಂದ ನಮ್ಮ ರೈತರ ಹೊಟ್ಟೆ ತುಂಬುವುದಿಲ್ಲ ಎಂಬುದಕ್ಕೆ ಇಂದು ರೈತರು ಎದುರಿಸುತ್ತಿರುವ ಸಂಕಷ್ಟಗಳೇ ಕಾರಣ.

  • ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂತೋಷ್ ಲಾಡ್ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿದ್ದಕ್ಕಾಗಿ ರಾಜೀನಾಮೆ ಕೊಡಿಸಿದ್ದೆ. ಕೇಂದ್ರದಲ್ಲಿ @BJP4India ಅಧಿಕಾರದಲ್ಲಿದ್ದರೂ ನಮ್ಮ ಸರ್ಕಾರದ ವಿರುದ್ಧದ ಎಂಟು ಆರೋಪಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಗೊತ್ತಾ @narendramodi ಜೀ? 8/10#AnswerMadiModi

2. ನೀವು ನಿಮ್ಮ ಅತ್ಯಾಪ್ತರಾದ ಅದಾನಿ, ಅಂಬಾನಿ ಮುಂತಾದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದುಬಿಟ್ಟಿರಿ. ದೆಹಲಿಯಲ್ಲಿ ರೈತರು ವೀರೋಚಿತ ಹೋರಾಟ ನಡೆಸಿದ ಕಾರಣ ಕೇಂದ್ರ ಸರ್ಕಾರ ಮಾಡಿದ್ದ ಕಾಯ್ದೆಗಳನ್ನು ವಾಪಸ್​​ ಪಡೆದಿದ್ದೀರಿ. ಆದರೆ ಬಿಜೆಪಿ ಆಡಳಿತದ ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಹಾಗೆಯೆ ಉಳಿಸಿಕೊಳ್ಳುವಂತೆ ಒತ್ತಡ ಹಾಕಿ ಈ ಮನೆಹಾಳು ಕಾಯ್ದೆಗಳನ್ನು ಹಾಗೆ ಉಳಿಸಿದ್ದೀರಿ. ಈ ಕಾಯ್ದೆಗಳಿಂದ ಆಗಿರುವ ಭೀಕರ ಹಾನಿಯ ಬಗ್ಗೆ ನಿಮಗೆ ತಿಳುವಳಿಕೆ ಇದೆಯೆ?

  • ಹಿಂದೆ ಕರ್ನಾಟಕಕ್ಕೆ ಬಂದಿದ್ದ ನೀವು ಕರ್ನಾಟಕದ ಕಾಂಗ್ರೆಸ್ ದೆಹಲಿಯ ಹೈಕಮಾಂಡ್‌ಗೆ ಎಟಿಎಂ ಎಂದು ಗೇಲಿ ಮಾಡಿದ್ದೀರಿ. ನಿಮ್ಮ ಸಚಿವರು ಮತ್ತು ಶಾಸಕರು ಕೋಟಿ ಕೋಟಿ ಲೂಟಿ ಮಾಡಿ ನಿರ್ಭೀತಿಯಿಂದ ಇದ್ದಾರೆ ಎಂದರೆ ಕರ್ನಾಟಕ ರಾಜ್ಯ ನಿಮ್ಮ ಪಕ್ಷದ ಎಟಿಎಂ ಎಂದು ಅರ್ಥೈಸಬಹುದಾ @narendramodi ಜೀ? 9/10 #AnswerMadiModi

3. ಕೊಬ್ಬರಿ: 18 ಸಾವಿರದಿಂದ ಇಪ್ಪತ್ತು ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ ಈಗ ಕೇವಲ 9 ಸಾವಿರಕ್ಕೆ ಕುಸಿದು ಹೋಗಿದೆ. ಕಣ್ಣು ಮುಂದೆಯೆ 10 ಸಾವಿರ ರೂಪಾಯಿ ಬೆಲೆ ರೈತರ ಕೈಬಿಟ್ಟು ಹೋಗುತ್ತಿದೆ. ದೇಶದ ತೆಂಗಿನಲ್ಲಿ ಕರ್ನಾಟಕದ ಪಾಲು ಶೇ.31 ರಷ್ಟಿದೆ. 13 ಲಕ್ಷ ಎಕರೆಗಳಲ್ಲಿ ತೆಂಗು ಬೆಳೆಯಲಾಗುತ್ತದೆ. ಬೆಲೆ ಪಾತಾಳಕ್ಕೆ ಕುಸಿದರೂ ಸರ್ಕಾರ ನಿಷ್ಕ್ರಿಯವಾಗಿದೆ. ಎಂಎಸ್ಪಿಗಿಂತಲೂ 2500 ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಹೀಗಿದ್ದರೂ ನೀವು ಮೌನವಾಗಿದ್ದೀರಿ. ತೆಂಗು ಬೆಳೆಗಾರರ ಸಂಕಷ್ಟಕ್ಕೆ ನೀವು ಎಪಿಎಂಸಿಗಳನ್ನು ದುರ್ಬಲಗೊಳಿಸಿದ್ದು ಕಾರಣ ಅಲ್ಲವೆ?

  • ಪ್ರಧಾನಿ @narendramodi ನೇತೃತ್ವದ ಬಿಜೆಪಿಯಲ್ಲಿ ಎಲ್ಲಿಯ ವರೆಗೆ ಲಂಚದ ಹಣದಲ್ಲಿ ಪಾಲು @BJP4India ಹೈಕಮಾಂಡ್ ಗೆ ಸಂದಾಯವಾಗುತ್ತೋ ಅಲ್ಲಿಯ ವರೆಗೆ ಭ್ರಷ್ಟರು, ದುಷ್ಟರು ಎಲ್ಲರೂ ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ?#AnswerMadiModi
    10/10

4. ಅಡಿಕೆ: ರಾಜ್ಯದಲ್ಲಿ ಸುಮಾರು 9 ಲಕ್ಷ ರೈತರು ಲಕ್ಷಾಂತರ ಎಕರೆ ಭೂಮಿಯಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ 60 ಸಾವಿರ ರೂಪಾಯಿಗಳಿಗೆ ಪ್ರತಿ ಕ್ವಿಂಟಾಲ್ ಅಡಿಕೆ ಮಾರಾಟವಾಗುತ್ತಿತ್ತು. ಈಗ 40 ಸಾವಿರ ರೂಪಾಯಿಗಳಿಗೆ ಕುಸಿದಿದೆ. ಅಡಿಕೆ ಬೆಳೆಯುವ ಜಿಲ್ಲೆಗಳ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನಿಮ್ಮ ಬಿಜೆಪಿ ಸರ್ಕಾರಗಳು ತಂದೊಡ್ಡಿವೆ. ನಮ್ಮ ರೈತರು ಬೆಳೆಯುವ ಅಡಿಕೆಯ ಬೆಲೆ ಕುಸಿಯುತ್ತಿದೆ, ಆದರೂ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ 65000 ಟನ್ ಅಡಿಕೆಯನ್ನು ವಿದೇಶಗಳಿಂದ ಜನವರಿಯವರೆಗೆ ಆಮದು ಮಾಡಿಕೊಂಡಿದೆ. ನಿಮ್ಮ ಸರ್ಕಾರಗಳಿಂದ ಇದುವರೆಗೆ ಅಡಿಕೆ ಬೆಳೆಗೆ ಬಂದಿರುವ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿಯಲಾಗಿಲ್ಲ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ನೀವೆ ನೇರವಾಗಿ ಕಾರಣ ಅಲ್ಲವೆ?.

5. ಕಮಿಷನ್ ದಂಧೆ: ನಿಮ್ಮ ಪಕ್ಷದ ಮಾಡಾಳ್ ವಿರೂಪಾಕ್ಷಪ್ಪನವರ ಮನೆಯಲ್ಲಿ 8 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಒಂದೇ ಕಂತಿನಲ್ಲಿ ಸಿಕ್ಕಿದೆ. ಒಬ್ಬ ಎಂಎಲ್‍ಎ ಬಳಿಯೆ ಇಷ್ಟೊಂದು ಹಣ ಸಿಕ್ಕಿದೆಯೆಂದರೆ ಇನ್ನು ಮಂತ್ರಿಗಳ ಬಳಿ ಎಷ್ಟಿರಬಹುದು?. 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಈ ಎಂಎಲ್‍ಎ ಕರ್ನಾಟಕದ ಹೆಮ್ಮೆಯ ಪರಂಪರೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪಿಗೆ ಕಲಬೆರಕೆ ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೋಸ್ಕ ಈ ಕಮಿಷನ್ ದಂಧೆ ನಡೆದಿದೆ. ಇಂಥ ಕಳ್ಳತನದ ಮಾಹಿತಿ ನಿಮಗೆ ಇರಲಿಲ್ಲವೆ? ನಿಮ್ಮ ಸಿಬಿಐ, ಇಡಿಗಳು ಏನು ಮಾಡುತ್ತಿವೆ? ಈ ಮಾಡಾಳು ವಿರೂಪಾಕ್ಷಪ್ಪ ಅಡಿಕೆ ಬೆಳೆಯುವ ರೈತರ ಮನೆಗಳಲ್ಲಿ ಇಷ್ಟು ಹಣ ಸಾಮಾನ್ಯ ಎನ್ನುವಂತೆ ಮಾತನಾಡಿದ್ದಾರೆ. ಇಷ್ಟೊಂದು ನಗದನ್ನು ಇಟ್ಟುಕೊಳ್ಳಲು ನಿಮ್ಮ ಪಾರ್ಟಿಯವರಿಗೆ ಮಾತ್ರ ಅನುಮತಿ ನೀಡಲಾಗಿದೆಯೆ?

6. ಮೆಣಸು: ಈ ಹಿಂದೆ ಕ್ವಿಂಟಾಲಿಗೆ 90000 ರೂವರೆಗೆ ಇದ್ದ ಮೆಣಸಿನ ಬೆಲೆ ಈಗ 40 ಸಾವಿರ ರೂಪಾಯಿಗೆ ಕುಸಿದಿದೆ. ಇದಕ್ಕೆ ಕಾರಣ ಏನು? ಇದಕ್ಕೆ ನಿಮ್ಮ ಸರ್ಕಾರದ ರೈತ ವಿರೋಧಿ ನೀತಿಗಳೆ ಕಾರಣವಲ್ಲವೆ?.

7. ಕಬ್ಬು: ವರ್ಷ ಪೂರ್ತಿ ಪ್ರಕೃತಿಯೊಂದಿಗೆ ಸೆಣಸಿ ಕಬ್ಬು ಬೆಳೆಯುವ ರೈತರಿಗೆ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ ಕಬ್ಬಿನ ಎಫ್ಆರ್​​ಪಿ ದರಗಳನ್ನು ಪ್ರತಿ ಟನ್​​ ಮೇಲೆ 3 ಸಾವಿರ ರೂ ಆಸುಪಾಸಿನಲ್ಲಿಟ್ಟಿದೆ. ಆದರೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್​ಗೆ 6500 ರೂಗಳಿಗೂ ಹೆಚ್ಚು ಸಂಪಾದಿಸುತ್ತಿವೆ. ಅವುಗಳ ಲಾಭದಲ್ಲಿ ರೈತರಿಗೆ ಯಾವುದೆ ಲಾಭವಿಲ್ಲ. 25 ಲಕ್ಷ ರೈತರು 35 ಲಕ್ಷ ಎಕರೆ ಪ್ರದೇಶದಲ್ಲಿ 6.5 ಕೋಟಿಗೂ ಹೆಚ್ಚು ಟನ್ ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ ಎಂದು ನಾನು ಕಳೆದ ಮೂರೂವರೆ ವರ್ಷಗಳಿಂದ ಒತ್ತಾಯಿಸುತ್ತಿದ್ದೇನೆ. ಆದರೂ ರಾಜ್ಯದ ಬಿಜೆಪಿ ಸರ್ಕಾರ ಪ್ರಾರಂಭಿಸಿಲ್ಲ.

8. ಹಾಲು: ನಿಮ್ಮ ಸರ್ಕಾರಗಳ ಕಾರ್ಪೊರೇಟ್ ಪರ ನೀತಿಯಿಂದಾಗಿ ಗುಜರಾತಿನಲ್ಲಿ ರೈತರ ನಿಯಂತ್ರಣದಲ್ಲಿ, ಉಸ್ತುವಾರಿಯಲ್ಲಿ ಅಮುಲ್ ಎಂಬ ಹಾಲು ಉತ್ಪಾದಕರ ಸಹಕಾರ ಸಂಸ್ಥೆಯನ್ನು ರೈತರಿಂದ ದೂರ ಮಾಡಿ ಅದನ್ನು ಹಾಳು ಮಾಡುತ್ತಿದ್ದೀರಿ. ಹಾಗೆಯೆ ಕರ್ನಾಟಕದ ಕೆಎಂಎಫ್ ಅನ್ನು ಸಹ ಕಾರ್ಪೊರೇಟ್ ಹಿತಾಸಕ್ತಿಗಳ ನಿಯಂತ್ರಣಕ್ಕೆ ಕೊಡುವ ಹುನ್ನಾರ ನಡೆಸುತ್ತಿದ್ದೀರಿ. ಇಂದು ನಮ್ಮ ರಾಜ್ಯದ 25 ಲಕ್ಷ ಹೈನುಗಾರ ಕುಟುಂಬಗಳಿಗೆ ನಿಮ್ಮ ಬಿಜೆಪಿ ಸರ್ಕಾರಗಳ ನೀತಿಗಳಿಂದ ಸಂಕಷ್ಟ ಬಂದೊದಗಿದೆ. ನಮ್ಮ ಸರ್ಕಾರ ಇದ್ದಾಗ ನಾವು ಲೀಟರ್​ 5 ರೂ. ಪ್ರೋತ್ಸಾಹ ಧನ ಕೊಡುತ್ತಿದ್ದೆವು. ಆಗ 45 ಲಕ್ಷ ಲೀಟರ್​​ಗಳಿಂದ 73 ಲಕ್ಷ ಲೀಟರ್​‍ಗಳಿಗೆ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಬಿಜೆಪಿ ಸರ್ಕಾರ ಹಾಲು ಉತ್ಪಾದಕರಿಗೆ ಯಾವ ಅನುಕೂಲಗಳನ್ನೂ ಮಾಡಲಿಲ್ಲ. ಈ ತಿಂಗಳಲ್ಲಿ 99 ಲಕ್ಷ ಲೀಟರ್​ಗಳಿಗೆ ಹೆಚ್ಚಾಗಬೇಕಾಗಿದ್ದ ಹಾಲಿನ ಉತ್ಪಾದನೆ 71 ಲಕ್ಷ ಲೀಟರ್​​ಗಳಿಗೆ ಕುಸಿದಿದೆ. ರೈತರಿಗೆ ಪ್ರತಿದಿನ 11 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರವಲ್ಲದೆ ಯಾರು ಹೊಣೆ?

9. ಈರುಳ್ಳಿ: ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಈರುಳ್ಳಿ ಬೆಳೆಯುತ್ತಾರೆ. ಈರುಳ್ಳಿ ಬೆಳೆಗೆ ಬೆಲೆ ಇಲ್ಲದೆ ರೈತರು ಬೆಂಕಿ ಹಚ್ಚುತ್ತಿರುವ ಫೋಟೋಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇತ್ತೀಚೆಗೆ ಈರುಳ್ಳಿ ಬೆಳೆಗಾರ ರೈತರೊಬ್ಬರಿಗೆ ಕೇವಲ 2 ರೂಪಾಯಿ ಚೆಕ್ ಕೊಡಲಾಗಿತ್ತು. ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸಬೇಕಾದ ಕೇಂದ್ರ ರಾಜ್ಯ ಸರ್ಕಾರ ಮೌನ ವಹಿಸಿವೆ. ಹಣ್ಣು, ತರಕಾರಿ ಬೆಳೆಯುವ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದಕ್ಕೆ ನೀವೆ ಕಾರಣರಲ್ಲವೆ?

10. ನಿಮ್ಮ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಸಣ್ಣ ಕೈಗಾರಿಕೆಗಳ ವಿರೋಧಿ, ಯುವಜನರ ವಿರೋಧಿ, ಸಣ್ಣ ಪುಟ್ಟ ವ್ಯಾಪಾರಿಗಳ ವಿರೋಧಿಯಾದ ನೀತಿಗಳಿಂದಾಗಿ ರಾಜ್ಯದ ಜನರ ಬದುಕು ಮೂರಾಬಟ್ಟೆಯಾಗುತ್ತಿದೆ. ಇಷ್ಟೆಲ್ಲ ಸಂಕಷ್ಟಗಳಿಗೆ ಕಾರಣರಾದ ನೀವು ಅದು ಯಾವ ಮುಖ ಇಟ್ಟುಕೊಂಡು ರಾಜ್ಯದಲ್ಲಿ ಓಡಾಡುತ್ತೀರಿ?

11. ಮೊದಲು ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಯುವಜನರು, ಸಣ್ಣ ಮತ್ತು ಗೃಹ ಕೈಗಾರಿಕೋದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಿಗಳ ಸಂಕಷ್ಟಗಳನ್ನು ನಿವಾರಿಸಿ ಆ ನಂತರ ಓಟು ಕೇಳಲು ಬನ್ನಿ. 10 ವರ್ಷಗಳಿಂದ ನಿಮ್ಮ ಬಣ್ಣದ ಮಾತುಗಳನ್ನು ಕೇಳಿ ಟೋಪಿ ಹಾಕಿಸಿಕೊಂಡು ಆಗಿದೆ. ನಮ್ಮ ಜನರ ಮೈಯಲ್ಲಿ ನೀವು ಇರಿಯಲು ಒಂದಿಂಚೂ ಜಾಗವನ್ನೂ ಉಳಿಸಿಲ್ಲ. ಜನರ ಬದುಕು ಸುಧಾರಣೆಯಾಗಬೇಕಾಗಿದೆಯೇ ಹೊರತು ನಿಮ್ಮ ಬೂದಿ ಬಣ್ಣದ ಮಾತುಗಳಲ್ಲ. ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂದು ನಮ್ಮ ಹಿರಿಯರು ಗಾದೆ ಮಾಡಿರುವುದು ನಿಮ್ಮಂತವರನ್ನು ನೋಡಿಯೆ ತಾನೆ?. ಹಿಂದಿನ 7 ಕಂತುಗಳ ಪ್ರಶ್ನೆಗಳನ್ನೂ ಸೇರಿಸಿ ಪ್ರಾಮಾಣಿಕವಾಗಿ ಉತ್ತರ ಕೊಡುತ್ತೀರೆಂದು ರಾಜ್ಯದ ಜನರು ಆಶಿಸುತ್ತಿದ್ದಾರೆ. ನಾನೂ ಕೂಡ ಕಾಯುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಮೈಸೂರು - ಬೆಂಗಳೂರು ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.