ETV Bharat / state

ಹಣದ ಬಲ ಅವರನ್ನು ಗೆಲ್ಲಿಸಿತು, ನಮ್ಮನ್ನು ಸೋಲಿಸಿತು; ಇದಕ್ಕೆ ಸಾಕ್ಷಿ ನಾನೇ ಎಂದ ಸಿದ್ದರಾಮಯ್ಯ - BJP leaders latest news

ಉಪಚುನಾವಣೆ, ಲವ್ ಜಿಹಾದ್,​​ ಗೋ ಹತ್ಯೆ ಮಸೂದೆ, ಬೆಂಗಳೂರು ಗಲಭೆ ಪ್ರಕರಣ, ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿರುವ ಸಮನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Siddaramaiah allegations on BJP leaders
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Nov 21, 2020, 6:34 PM IST

Updated : Nov 21, 2020, 8:05 PM IST

ಬೆಂಗಳೂರು: ಶಿರಾದಲ್ಲಿ ನಾವು ಹಣದ ಕೊರತೆಯಿಂದ ಸೋಲಬೇಕಾಯತು. ಬಿಜೆಪಿಯವರು ಸಿಕ್ಕಾಪಟ್ಟೆ ಹಣ ಹಂಚಿದ್ದರಿಂದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬೈ ಎಲೆಕ್ಷನ್​ಲ್ಲಿ ಆಡಳಿತ ಪಕ್ಷಕ್ಕೆ ಎರಡು ಲಾಭ. ಆಡಳಿತ ದುರುಪಯೋಗ ಮಾಡ್ತಾರೆ. ಅಲ್ಲದೇ ಯಾವ ಪಕ್ಷ ಅಧಿಕಾರದಲ್ಲಿ ಇರೋತ್ತೋ ಅವರೇ ಗೆಲ್ಲೋದು. ಬಿಜೆಪಿ ಪಕ್ಷ ಇದನ್ನು ಸದ್ಬಳಕೆ ಮಾಡಿಕೊಂಡಿದೆ. ಆಡಳಿತದ ಪಕ್ಷದ ಪರ ಜನ ಇರುತ್ತಾರೆ ಎನ್ನುವುದಕ್ಕೆ ನಾನು ಸಿಎಂ ಆಗಿದ್ದಾಗ ಒಂದು ಕ್ಷೇತ್ರ ಬಿಟ್ಟು ಉಳಿದ ಎಲ್ಲ ಉಪಚುನಾವಣೆಗಳನ್ನ ಗೆದ್ದುಕೊಂಡಿರುವುದು ಸಾಕ್ಷಿ ಎಂದರು.

ಇದೇ 23ರಂದು ಬಸನಗೌಡ ತುರವೀಹಾಳ ಕಾಂಗ್ರೆಸ್ ಸೇರ್ಪಡೆ ಆಗ್ತಿದ್ದಾರೆ. ಅವರೇ ಮಸ್ಕಿಗೆ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ. 23ರಂದು ಮಸ್ಕಿಯಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತೇವೆ. ಅವರು ಕಳೆದ ಬಾರಿ ಬಿಜೆಪಿ ಕ್ಯಾಂಡಿಡೆಟ್ ಆಗಿದ್ರು. ಈ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತಾರೆ. ಎರಡೂ ಕಡೆ ಜನರ ಅಭಿಪ್ರಾಯ ಸಂಗ್ರಹ ಮಾಡುವುದಕ್ಕೆ ಎರಡು ಟೀಂ ಮಾಡುತ್ತೇವೆ ಎಂದು ಹೇಳಿದರು.

ಗೋ ಹತ್ಯೆ ಮಸೂದೆ ವಿಚಾರ ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಮಾತನಾಡಿ, ಉತ್ತರ ಪ್ರದೇಶದಲ್ಲಿ ಗೋ ಮಾಂಸ ಹೆಚ್ಚು ರಪ್ತು ಮಾಡ್ತಾ ಇದ್ದಾರೆ. ಅದು ಯಾವ ಪಕ್ಷದವರು ಅಂತ ಮೊದಲು‌ ಹೇಳಲಿ. ಆಮೇಲೆ ‌ಗೋ ಹತ್ಯೆ‌ ನಿಷೇಧ ಮಾಡಲಿ. ಇಲ್ಲಿ ಸಿಟಿ ರವಿ ಬುರುಡೆ ಬಿಡುವುದು ಬೇಡ ಎಂದು ಹೇಳಿದರು.

ಬಸವಕಲ್ಯಾಣಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್​ಗೆ ಅಭ್ಯರ್ಥಿ ಕೊರತೆಯಿಲ್ಲ. ಬೈ ಎಲೆಕ್ಷನ್ ಹಣದ ಮೇಲೆ ನಡೆಯುತ್ತೆ. ಶಿರಾದಲ್ಲಿ ಪೊಲೀಸ್ ಜೀಪ್​ನಲ್ಲೇ ಹಣ ಹಂಚಿದ್ರು. ಅಧಿಕಾರದಲ್ಲಿರೋದ್ರಿಂದ ಹಾಗೆ ಮಾಡ್ತಾರೆ. ಜನ ಕೂಡ ಅಧಿಕಾರದಲ್ಲಿರುವ ಪಕ್ಷದ ಪರ ಒಲವು ತೋರಿಸುತ್ತಾರೆ ಎಂದು ವಿವರಿಸಿದರು.

ಲವ್ ಜಿಹಾದ್​​ಗಾಗಿ ಮತಾಂತರ ನಿಷೇಧ ಕಾನೂನು ಜಾರಿ ಬಗ್ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅವರಿನ್ನೂ‌ ಮನುಸ್ಮೃತಿಯಲ್ಲೇ ಇದ್ದಾರೆ. ಸಂವಿಧಾನದ ಬಗ್ಗೆ ಅವರಿಗೆ ಗೌರವ ಇಲ್ಲ. ನಾನು ಯಾರನ್ನ ಮದುವೆ ಆಗಬೇಕು ಅಂತ ಹೇಳಕ್ಕೆ ನೀವ್ಯಾರು? ಆರ್​ಎಸ್​ಎಸ್​ ಈಸ್ ಮೈ ಫಸ್ಟ್ ಪೊಲಿಟಿಕಲ್ ಅಪೋನೆಂಟ್. ನಾನು ಆರ್​ಎಸ್​ಎಸ್ ವಿರೋಧಿ. ಆರ್​ಎಸ್​ಎಸ್ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಸಿ.ಟಿ. ರವಿ ಹಿಂದೆ ಹೆಗ್ಡೆವಾರ್ ಜೊತೆ ಇದ್ನಾ? ಸಿಟಿ ರವಿ ಆರ್​ಎಸ್​ಎಸ್​ನ ಫೌಂಡರ್ ಮೆಂಬರ್​? ಹೆಗ್ಡೆವಾರ್ ಕಾಂಗ್ರೆಸ್​ನಲ್ಲಿದ್ದರು. ಗೋಳ್ವಾಳಕರ್ ಆರ್​ಎಸ್​ಎಸ್​ ಎರಡನೆ ಸರಸಂಗಚಾಲಕರು ಎಲ್ಲಿದ್ದರು? ಅವರು ಕಾಂಗ್ರೆಸ್​ನವರು. ಜನ ಸಂಘ ಇದ್ದಾಗ ರವಿ ಎಲ್ಲಿದ್ದ? ಎಂದರು.

ಅಖಂಡ ಶ್ರೀನಿವಾಸ ಮೂರ್ತಿಗೆ ನ್ಯಾಯ ಕೊಡಿಸುವ ವಿಚಾರವಾಗಿ ನಾನು ಇದರ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡೋದಿಲ್ಲ. ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡ್ತೀನಿ. ಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಇದೆ. ನಾನು ಯಾರ ವಿರೋಧಿಯೂ ಅಲ್ಲ, ನನಗೆ ಎಲ್ಲರೂ ಆಪ್ತರೆ. ನಾನು ಯಾರ ಪರವೂ ಅಲ್ಲ, ನಾನು ನ್ಯಾಯದ ಪರ. ಕಳೆದ ಚುನಾವಣೆಯಲ್ಲಿ ಸಂಪತ್ ರಾಜ್​ಗೆ ಟಿಕೆಟ್ ಕೊಡಿಸಿದ್ದು ನಾನೇ. ಹಾಗಂತ ನಾನು ಅವರು ಪರ ಅಂತ ಹೇಳೋಕೆ ಆಗುತ್ತಾ? ನಾನು ಲಾ ಪರ ಅಷ್ಟೇ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಡಿಕೆ ಶಿವಕುಮಾರ್ ಅವರಿಗೆ ಸಮನ್ಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರಿಗೆ ಯಾವುದಕ್ಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಕಾನೂನಿನಡಿಯಲ್ಲಿ ಅವರು ಹೋರಾಟ ಮಾಡುತ್ತಾರೆ ಎಂದರು. ಕರ್ನಾಟಕ ಬಂದ್​ಗೆ ಬೆಂಬಲ ನೀಡಿವ ವಿಚಾರ ಮಾತನಾಡಿ, ಇದು ನಾನು ಒಬ್ಬನ್ನೇ ಹೇಳೋದಕ್ಕೆ ಆಗೋದಿಲ್ಲ. ಪಕ್ಷದ ವೇದಿಕೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡ್ತೀನಿ. ಕರ್ನಾಟಕದಲ್ಲಿರುವವರು ನೆಲ-ಜಲ ಬಳಿಸಿಕೊಳ್ಳಿವ ಎಲ್ಲರೂ ಕನ್ನಡಿಗರೇ ಎಂದರು.

Last Updated : Nov 21, 2020, 8:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.