ETV Bharat / state

ಸರ್ಕಾರದೊಳಗೊಂದು ಸರ್ಕಾರ ಇದೆಯೇ?; ಸಿದ್ದರಾಮಯ್ಯ ಪ್ರಶ್ನೆ - ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ

ಪಿಎಂ ಕೇರ್ಸ್ ನಲ್ಲಿ ಕೇಂದ್ರ ಸರ್ಕಾರ ತಲಾ 4 ಲಕ್ಷ ರೂ. ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ನಮ್ಮಲ್ಲಿ ಮಾತ್ರ ವೆಂಟಿಲೇಟರ್‌ಗಳನ್ನು 12 ರಿಂದ 18 ಲಕ್ಷ ರೂ. ವರೆಗೆ ಹಣ ನೀಡಿ ಖರೀದಿಸಲಾಗಿದೆ. ಅಂತಹ ವಿಶೇಷತೆ ಈ ವೆಂಟಿಲೇಟರ್​ಗಳಲ್ಲೇನಿದೆ? ಇವುಗಳ ಬೆಲೆಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ? ಎಂದು ಟ್ವೀಟ್​ ಮಾಡಿದ್ದಾರೆ.

ಲೆಕ್ಕಕೊಡಿ ಅಭಿಯಾನ
ಲೆಕ್ಕಕೊಡಿ ಅಭಿಯಾನ
author img

By

Published : Jul 20, 2020, 11:35 PM IST

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಲೆಕ್ಕಕೊಡಿ ಅಭಿಯಾನ ಆರಂಭಿಸಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತೊಮ್ಮೆ ಆಕ್ರೋಶ ಹೊರ ಹಾಕಿದ್ದಾರೆ. ಸರಣಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ನಿಯಂತ್ರಣದಲ್ಲಿನ ಅವ್ಯವಹಾರದ ಬಗೆಗಿನ ನನ್ನ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಲು ಪ್ರಯತ್ನಿಸಿರುವ ಆರೋಗ್ಯ ಸಚಿವ @sriramulubjp ಮತ್ತು ಉಪಮುಖ್ಯಮಂತ್ರಿ @drashwathcn
    ಸತ್ಯವನ್ನು ಬಿಚ್ಚಿಡುವ ಬದಲಿಗೆ ಸುಳ್ಳನ್ನು ಮುಚ್ಚಿಡಲು ಪರದಾಡಿದ್ದಾರೆ.
    1/6#lekkakodi

    — Siddaramaiah (@siddaramaiah) July 20, 2020 " class="align-text-top noRightClick twitterSection" data=" ">

ಕೊರೊನಾ ನಿಯಂತ್ರಣದಲ್ಲಿನ ಅವ್ಯವಹಾರದ ಬಗೆಗಿನ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಉತ್ತರ ನೀಡಲು ಪ್ರಯತ್ನಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸತ್ಯವನ್ನು ಬಿಚ್ಚಿಡುವ ಬದಲಿಗೆ ಸುಳ್ಳನ್ನು ಮುಚ್ಚಿಡಲು ಪರದಾಡಿದ್ದಾರೆ. ನಾನು ಕೇಳಿರುವ ಯಾವ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದಾರೆನ್ನುವುದು ನನಗೆ ತಿಳಿದಿಲ್ಲ. ರಾಜ್ಯ ಸರ್ಕಾರದ ಲಿಖಿತ ಸ್ಪಷ್ಟನೆ ಕೈ ಸೇರಿದ ನಂತರ ವಿವರವಾಗಿ ಪ್ರತಿಕ್ರಿಯಿಸುವೆ. ಆದರೆ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಸಚಿವ ಡಾ. ಸುಧಾಕರ್ ಕಾಣಲಿಲ್ಲ. ಸರ್ಕಾರದೊಳಗೊಂದು ಸರ್ಕಾರ ಇದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

  • ಪಿಎಂ ಕೇರ್ಸ್ ನಲ್ಲಿ ಕೇಂದ್ರ ಸರ್ಕಾರ ತಲಾ ರೂ.4 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ

    ನಮ್ಮಲ್ಲಿ ಮಾತ್ರ ವೆಂಟಿಲೇಟರ್‌ಗಳನ್ನು 12ರಿಂದ 18 ಲಕ್ಷ ರೂಪಾಯಿ ವರೆಗೆ ನೀಡಿ ಖರೀದಿಸಲಾಗಿದೆ.
    ಅಂತಹ ವಿಶೇಷತೆ ಈ ವೆಂಟಿಲೇಟರ್ ಗಳಲ್ಲೇನಿದೆ? ಇವುಗಳ ಬೆಲೆಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ?
    4/6#lekkakodi pic.twitter.com/8lM4d10vte

ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಟ್ಟು 323 ಕೋಟಿ ರೂ. ಖರ್ಚು ಮಾಡಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಆದರೆ ಅವರು ನೀಡಿರುವ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದರೂ ಅದು 100 ಕೋಟಿ ರೂಪಾಯಿ ದಾಟುವುದಿಲ್ಲ. ಉಳಿದ ದುಡ್ಡಿಗೆ ಲೆಕ್ಕ ಎಲ್ಲಿದೆ? ಪಿಎಂ ಕೇರ್ಸ್ ನಲ್ಲಿ ಕೇಂದ್ರ ಸರ್ಕಾರ ತಲಾ 4 ಲಕ್ಷ ರೂ. ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ನಮ್ಮಲ್ಲಿ ಮಾತ್ರ ವೆಂಟಿಲೇಟರ್‌ಗಳನ್ನು 12 ರಿಂದ 18 ಲಕ್ಷ ರೂ. ವರೆಗೆ ಹಣ ನೀಡಿ ಖರೀದಿಸಲಾಗಿದೆ. ಅಂತಹ ವಿಶೇಷತೆ ಈ ವೆಂಟಿಲೇಟರ್​ಗಳಲ್ಲೇನಿದೆ? ಇವುಗಳ ಬೆಲೆಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ? ಎಂದು ಟ್ವೀಟ್​ ಮಾಡಿದ್ದಾರೆ.

  • ನಾನು ಕೊರೊನಾ ನಿಯಂತ್ರಣದ ಸಲಕರಣೆಗಳ ಲೆಕ್ಕ ಮಾತ್ರ ಕೇಳಿದ್ದಲ್ಲ. ಆಹಾರ ಧಾನ್ಯ, ಮತ್ತು ಆಹಾರ ಸಾಮಗ್ರಿಗಳ ಕಿಟ್, ಮತ್ತು ಆಸ್ಪತ್ರೆಗಳಿಗೆ‌ ಖರೀದಿಸಲಾದ ಬೆಡ್ ಗಳ ಬೆಲೆ, ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ವಾರ್ಡ್ ಗಳಿಗೆ ಆಗಿರುವ ಖರ್ಚಿನ ವಿವರವನ್ನೂ ಕೇಳಿದ್ದೇನೆ. ಆ ಲೆಕ್ಕ‌ ಎಲ್ಲಿದೆ?
    6/6#lekkakodi

ಆರೋಗ್ಯ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳಿಬ್ಬರೂ, ಖರೀದಿ ಮಾಡಿರುವ ಸಲಕರಣೆಗಳ ದುಬಾರಿ ದರವನ್ನು ಸಮರ್ಥಿಸುತ್ತಾ, ದರ ವ್ಯತ್ಯಾಸಕ್ಕೆ ಗುಣಮಟ್ಟದಲ್ಲಿನ ವ್ಯತ್ಯಾಸ ಕಾರಣ ಎಂದು ಹೇಳಿದ್ದಾರೆ. ಆದರೆ ಇದನ್ನು ತಾಂತ್ರಿಕವಾಗಿ ಸಮರ್ಥಿಸುವ ಯಾವ ದಾಖಲೆಗಳನ್ನು ಯಾಕೆ ನೀಡಿಲ್ಲ? ನಾನು ಕೊರೊನಾ ನಿಯಂತ್ರಣದ ಸಲಕರಣೆಗಳ ಲೆಕ್ಕ ಮಾತ್ರ ಕೇಳಿದ್ದಲ್ಲ. ಆಹಾರ ಧಾನ್ಯ, ಮತ್ತು ಆಹಾರ ಸಾಮಗ್ರಿಗಳ ಕಿಟ್ ಮತ್ತು ಆಸ್ಪತ್ರೆಗಳಿಗೆ‌ ಖರೀದಿಸಲಾದ ಬೆಡ್ ಬೆಲೆ, ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ವಾರ್ಡ್​ಗಳಿಗೆ ಆಗಿರುವ ಖರ್ಚಿನ ವಿವರವನ್ನೂ ಕೇಳಿದ್ದೇನೆ. ಆ ಲೆಕ್ಕ ಎಲ್ಲಿದೆ ಎಂದು ಕಿಡಿಕಾರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.