ETV Bharat / state

ಸಾಂತ್ವನ ಕೇಂದ್ರದಿಂದ ತಪ್ಪಿಸಿಕೊಂಡ ವಿದೇಶಿ ಮಹಿಳಾ ಪ್ರಜೆಗಳ ಸುಳಿವು ಇನ್ನೂ‌ ನಿಗೂಢ! - ವಿದೇಶಿ ಮಹಿಳೆರ ಅಕ್ರಮ ವಾಸ

ನಾಪತ್ತೆಯಾಗಿರುವ ಐವರು ಆಫ್ರಿಕಾ‌ ಮಹಿಳಾ ಪ್ರಜೆಗಳನ್ನು ಪತ್ತೆಹಚ್ಚುವುದು ಸಿದ್ದಾಪುರ ಪೊಲೀಸರಿಗೆ ಹೊಸ ಸವಾಲಾಗಿ ಪರಿಣಮಿಸಿದೆ‌‌. 45 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರೂ ಆರೋಪಿಗಳ ಇರುವಿಕೆ ಬಗ್ಗೆ ಸುಳಿವು ದೊರೆತಿಲ್ಲ.

siddapura
ವಿದೇಶಿ ಮಹಿಳಾ ಪ್ರಜೆಗಳು
author img

By

Published : Sep 9, 2021, 5:21 PM IST

ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಐವರು ಆಫ್ರಿಕಾ‌ ಮಹಿಳಾ ಪ್ರಜೆಗಳು ಗೋಡೆ ಹಾರಿ ಎಸ್ಕೇಪ್ ಆದ ಪ್ರಕರಣ ಸಂಬಂಧ ಶೋಧ ನಡೆಸುತ್ತಿರುವ ಸಿದ್ದಾಪುರ ಪೊಲೀಸರಿಗೆ ಪತ್ತೆ ಕಾರ್ಯ ಹೊಸ ಸವಾಲಾಗಿ ಪರಿಣಮಿಸಿದೆ‌‌.

ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದರೂ ವಿದೇಶಿ ಮಹಿಳೆಯರ ಬಗ್ಗೆ ಸಣ್ಣ ಸುಳಿವು ಸಿಗದಿರುವುದು ಪೊಲೀಸರಿಗೆ ತಲೆಬಿಸಿಯಾಗಿದೆ. ಅವರ ಪತ್ತೆಗಾಗಿ ಬಾಣಸವಾಡಿ, ಸಂಪಿಗೆಹಳ್ಳಿ,‌ ಕಮ್ಮನಹಳ್ಳಿ ಹಾಗೂ ರಾಮಮೂರ್ತಿನಗರ ಸೇರಿದಂತೆ ಸ್ನೇಹಿತರ ಹಾಗೂ ಸಂಬಂಧಿಕರ ಮನೆ ಸೇರಿ 45 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರೂ ಆರೋಪಿಗಳ ಇರುವಿಕೆ ಬಗ್ಗೆ ಸುಳಿವು ದೊರೆತಿಲ್ಲ.

ಹೈದರಾಬಾದ್ ಹಾಗೂ ಮುಂಬೈ ಸೇರಿದಂತೆ ವಿವಿಧ‌ ಕಡೆಗಳಿಗೆ ತೆರಳಿ ಶೋಧ ನಡೆಸಿದರೂ ಆರೋಪಿಗಳು ಸಿಗದೆ ಚಾಣಾಕ್ಷತನ ಮೆರೆಯುತ್ತಿದ್ದಾರೆ. ತಾಂತ್ರಿಕ ಆಯಾಮ‌ದ ಮೂಲಕ ತನಿಖೆ‌ ನಡೆಸಲು ಮುಂದಾಗಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ಮೊರೆ ಹೋದರೂ ಉಪಯೋಗವಾಗುತ್ತಿಲ್ಲ.

ಘಟನೆ ಹಿನ್ನೆಲೆ: ಕಳೆದ ಆ.16ರಂದು ಮಧ್ಯರಾತ್ರಿ ಮಹಿಳಾ ಸಾಂತ್ವನ ಕೇಂದ್ರದ ಕಾಂಪೌಂಡ್ ಹಾರಿ ತಲೆಮರೆಸಿಕೊಂಡಿದ್ದ ಆರೋಪಿಗಳು ಮಾರ್ಗ ಮಧ್ಯೆ ವಾಹನವೊಂದರಲ್ಲಿ ಹತ್ತಿ ಎಸ್ಕೇಪ್ ಆಗಿದ್ದರು.‌ ರಾತ್ರಿ ಆಗಿದ್ದರಿಂದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ‌ ನಿಖರವಾಗಿ ಗೋಚರಿಸಿಲ್ಲ. ಅಲ್ಲದೆ ಬೇರೆ ಬೇರೆ ಕಡೆ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡುತ್ತಿದ್ದರೂ ಪ್ರಯೋಜನವಾದಂತಿಲ್ಲ.

ನಗರದ ಕಾನೂನು‌ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ವಿದೇಶಿ ಮಹಿಳೆಯರು ವೀಸಾ, ಪಾಸ್ ಪೋರ್ಟ್ ಅವಧಿ‌ ಮೀರಿದರೂ ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂಬಂಧ ಹೆಣ್ಣೂರು ಸೇರಿದಂತೆ ಪೂರ್ವ ವಿಭಾಗದ ಪೊಲೀಸರು 13 ಮಂದಿ ವಿದೇಶಿಯರನ್ನು ಕಳೆದ ತಿಂಗಳು ಬಂಧಿಸಿದ್ದರು‌. ಬಳಿಕ ಸಿದ್ದಾಪುರ ಬಳಿಯ ಮಹಿಳಾ ಸಾಂತ್ವ‌ನ ಕೇಂದ್ರದಲ್ಲಿ‌ ಬಂಧಿತರನ್ನು ಇರಿಸಲಾಗಿತ್ತು. ಮೂವರು ಕಾಂಗೋ, ಇಬ್ಬರು ನೈಜಿರೀಯಾ ದೇಶದ ಮಹಿಳೆಯರು ಮಧ್ಯರಾತ್ರಿ ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ ಬಾಗಿಲು ತೆಗೆದು ಭದ್ರತಾ ಸಿಬ್ಬಂದಿ ನೀರು ಕೊಟ್ಟಿದ್ದಾರೆ.‌ ಇದೇ ಸಮಯ ಉಪಯೋಗಿಸಿಕೊಂಡು ಸಿಬ್ಬಂದಿ ಕಣ್ತಪ್ಪಿಸಿ ಕಾಂಪೌಂಡ್ ಹಾರಿ ಐವರು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದರು. ತಪ್ಪಿಸಿಕೊಳ್ಳುವ ಭರದಲ್ಲಿ ಗೋಡೆ ಹತ್ತುವಾಗ ಆಯತಪ್ಪಿ ಬಿದ್ದ ಓರ್ವ ವಿದೇಶಿ ಮಹಿಳೆ ಕಾಲು ಮುರಿದುಕೊಂಡಿದ್ದಳು. ಈ ಸಂಬಂಧ ಸ್ಥಳೀಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.