ETV Bharat / state

KSCA ಮಹಾರಾಜ ಟೂರ್ನಮೆಂಟ್ ಟೈಟಲ್ ಪ್ರಾಯೋಜಕತ್ವ ಪಡೆದ ಶ್ರೀರಾಮ್ ಕ್ಯಾಪಿಟಲ್ ಸಂಸ್ಥೆ

author img

By

Published : Jul 29, 2022, 9:24 PM IST

ಕೆಎಸ್​​ಸಿಎ ಅಧ್ಯಕ್ಷ ರೋಜರ್ ಬಿನ್ನಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೈಟಲ್ ಸ್ಪಾನ್ಸರ್ ಪಡೆದಿರುವ ಕ್ಯಾಪಿಟಲ್ ಗ್ರೂಪ್ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.

ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ
ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬದಲಾಗಿ ಮಹಾರಾಜ ಟ್ರೋಫಿ ನಡೆಸಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪಂದ್ಯಾವಳಿಗೆ ಶ್ರೀರಾಮ್ ಕ್ಯಾಪಿಟಲ್ ಗ್ರೂಪ್ ಟೈಟಲ್ ಪ್ರಾಯೋಕತ್ವ ಪಡೆದಿದೆ.

ಕೆಎಸ್​ಸಿಎ ಅಧ್ಯಕ್ಷ ರೋಜರ್ ಬಿನ್ನಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೈಟಲ್ ಸ್ಪಾನ್ಸರ್ ಪಡೆದಿರುವ ಕ್ಯಾಪಿಟಲ್ ಗ್ರೂಪ್ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಬಳಿಕ‌ ಚುಟುಕಾಗಿ ಮಾತನಾಡಿದ ಅಧ್ಯಕ್ಷರು, ಮೂರು ವರ್ಷಗಳ ಕಾಲ ಶ್ರೀರಾಮ್ ಗ್ರೂಪ್ ನಮ್ಮೊಂದಿಗೆ‌ ಒಪ್ಪಂದ ಮಾಡಿಕೊಂಡಿರುವುದು ಹರ್ಷ ತಂದಿದೆ ಎಂದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ‌, ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ಆಗಸ್ಟ್ 7 ರಿಂದ 26 ವರೆಗೂ ಮಹಾರಾಜ ಪಂದ್ಯಾವಳಿ‌ ನಡೆಯಲಿದೆ. ಮೊದಲ ಪಂದ್ಯ ಮೈಸೂರಿನ ಶ್ರೀಕಂಠದತ್ತ‌ ಒಡೆಯರ್ ಮೈದಾನದಲ್ಲಿ‌‌ ಉದ್ಘಾಟನೆಯಾಗಲಿದೆ. ಫೈನಲ್ ಪಂದ್ಯ ರಾಜಧಾನಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕಪ್ ಗಾಗಿ‌ ಒಟ್ಟು ಆರು ತಂಡಗಳ ಸೆಣಸಾಡಲಿವೆ. ಐಪಿಎಲ್ ಮಾದರಿಯಲ್ಲಿ‌ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದೆ. ನಾಳೆ ಆಟಗಾರರ ಆ್ಯಕ್ಷನ್​ ಬಿಡ್ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಓದಿ: ಭೂಕುಸಿತದ ಆತಂಕದಲ್ಲಿ ಜನತೆ : ಬೆಟ್ಟ ಕುಸಿತದ ವಿಚಾರ ಮುಚ್ಚಿಡುತ್ತಿರುವ ರಿಯಲ್ ಎಸ್ಟೇಟ್ ಮಾಫಿಯಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.