ETV Bharat / state

ಪರಿಷತ್​ ಕಲಾಪದಲ್ಲಿ ಶೃಂಗೇರಿ ಅತ್ಯಾಚಾರ ಪ್ರಕರಣ ಚರ್ಚೆ: ಕ್ರಮದ ಬಗ್ಗೆ ಸ್ಪಷ್ಟನೆ ನೀಡಿದ ಗೃಹ ಸಚಿವ - ಬೆಂಗಳೂರು ಸುದ್ದಿ

ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ವಿಧಾನ ಪರಿಷತ್​ ಕಲಾಪದಲ್ಲಿ ಚರ್ಚೆ ನಡೆಯಿತು.

Bengaluru
ಪರಿಷತ್​ ಕಲಾಪ
author img

By

Published : Feb 4, 2021, 8:43 PM IST

ಬೆಂಗಳೂರು: ಪವಿತ್ರ ಕ್ಷೇತ್ರ ಶೃಂಗೇರಿ ಬಳಿ ಇತ್ತೀಚೆಗೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ನಿರ್ಲಕ್ಷಿಸುವ ಕಾರ್ಯ ಆಗಬಾರದು ಎಂದು ವಿಧಾನ ಪರಿಷತ್​ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಒತ್ತಾಯಿಸಿದರು.

ವಿಧಾನಪರಿಷತ್​ನಲ್ಲಿ ನಿಯಮ 68ರ ಅಡಿ ಮಾತನಾಡಿದ ಅವರು, ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ ನಿರಂತರವಾಗಿ 17 ಜನ ಅತ್ಯಾಚಾರ ಎಸಗಿದ್ದಾರೆ. 30-35 ಮಂದಿ ಅತ್ಯಾಚಾರ ಎಸಗಿದ್ದಾಗಿ ಮಾಹಿತಿ ಇದೆ. ಆದರೆ ಇದರ ದೂರು ಸ್ವೀಕರಿಸಲು ಪೊಲೀಸರು ಮೂರು ದಿನ ವಿಳಂಬ ಮಾಡಿದ್ದಾರೆ. ಈ ಘಟನೆಯ ಹಿಂದೆ‌ ಕಾಣದ ಕೈಗಳಿವೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. 17 ಜನರನ್ನು ಬಾಲಕಿ ಪತ್ತೆ ಹಚ್ಚಿದ್ದರೂ, ಏಳು ಮಂದಿಯನ್ನು ಬಂಧಿಸಲಾಗಿದೆ. ಎ1 ಸಂಘ ಪರಿವಾರದವನು, ಎ2 ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಮತ್ತೊಬ್ಬ ಜಿಲ್ಲಾ ಬಿಜೆಪಿ ಮುಖಂಡರ ಮಗ, ಈ ರೀತಿ 7-8 ಜನ ಇದ್ದಾರೆ. ಬಾಲಕಿ ಅನಾಥೆ. ಹಾವೇರಿಯಿಂದ ಬಂದವಳು. ತಾಯಿ ಇಲ್ಲ, ತಂದೆ ಬೇರೆ ವಿವಾಹವಾಗಿದ್ದಾನೆ. ತಾಯಿಯ ತಂಗಿ ಜತೆ ಶೃಂಗೇರಿಗೆ ಬಂದು‌ ಕ್ರಶರ್​ನಲ್ಲಿ‌ ಕೆಲಸ ಮಾಡುತ್ತಿರುತ್ತಾಳೆ. ಆದರೆ ಅವಳ ಈ ಸ್ಥಿತಿಗೆ ಕಾರಣವಾಗಿದ್ದು, ದುರ್ವಿಧಿ ಎಂದರು.

ಅತ್ಯಂತ ಘೋರ ಅಪರಾಧವಾದ ಈ ಘಟನೆಯ ವಿಚಾರದಲ್ಲಿ ಇಷ್ಟು ನಿರ್ಲಕ್ಷ್ಯ ಏಕೆ? 15 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಎಷ್ಟೋ ದಿನ ಅತ್ಯಾಚಾರ ಎಸಗಲಾಗಿದೆ. ಈಗ ಅಧಿಕಾರಿಗಳು ರಕ್ಷಿಸಿ ದೂರು ದಾಖಲಿಸುವ ಕಾರ್ಯ ಆಗಿದೆ. ಬಲವಾದ ಸಾಕ್ಷ್ಯಾಧಾರ ಇದ್ದರೂ, ಕ್ರಮ ಆಗಿಲ್ಲ. ಗೃಹ ಇಲಾಖೆ ಏನು ಮಾಡುತ್ತಿದೆ. ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಕ್ರಶರ್ ಮಾಲೀಕರ ವಿರುದ್ಧ ಕ್ರಮ ಆಗಿಲ್ಲ ಏಕೆ? ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಪ್ರಕರಣ ಮುಚ್ಚಿ ಹಾಕುವ ಅನುಮಾನ ಇದೆ. ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು. ಸ್ಥಳೀಯ ಸಂಸದರು ಸಣ್ಣ ಪುಟ್ಟ ವಿಚಾರಕ್ಕೆ ದನಿ ಎತ್ತುವ ಇವರು ಹೇಳಿಕೆ ನೀಡಿಲ್ಲ ಎಂದಾಗ ಗೃಹ ಸಚಿವರು ಎದ್ದು ನಿಂತು ಇಲ್ಲಿ ಇಲ್ಲದಿರುವವರ ಪ್ರಸ್ತಾಪ ಬೇಡ ಎಂದರು.

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ಗಲ್ಲು ಶಿಕ್ಷೆಗೆ ಒಳಗಾಗುವ ರೀತಿ ಯಾವ್ಯಾವ ಕಾನೂನು ವಿಧಿಸಲು ಸಾಧ್ಯವೋ ಅಂತದ್ದೇ ಕಾನೂನಿನ ಅಡಿ ಪ್ರಕರಣ ದಾಖಲಿಸುತ್ತೇವೆ. ನಾಲ್ಕು ತಂಡ ಮಾಡಿದ್ದು, ಸಾಕಷ್ಟು ಜನರನ್ನು ಬಂಧಿಸಿದ್ದೇವೆ. ಉಳಿದವರ ಬಂಧನವಾಗಲಿದೆ. ಬಾಲಕಿ‌ 17 ಜನರ ಹೆಸರು ಹೇಳಿದ್ದು ಎಲ್ಲರನ್ನೂ ಬಂಧಿಸಿ ಗಲ್ಲುಶಿಕ್ಷೆಗೆ ಒಳಪಡಿಸುವ ಪ್ರಯತ್ನ ಮಾಡುತ್ತೇವೆ. ಯಾವ ಪಕ್ಷದವರಾದರೂ ಕಾಪಾಡುವ, ಉಳಿಸುವ ಯತ್ನ ಮಾಡಲ್ಲ. ಆದಷ್ಟು ಶೀಘ್ರವಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡುತ್ತೇವೆ ಎಂದರು.

ನಾರಾಯಣಸ್ವಾಮಿ ಕಲಾಪದಲ್ಲಿ ಇಲ್ಲದವರ ಹೆಸರು ಪ್ರಸ್ತಾಪ, ಮಹಿಳೆಗೆ ಅಗೌರವ ಸೂಚಿಸುವ ಮಾತನ್ನು ಆಡಬೇಡಿ ಎಂದು ಆಡಳಿತ ಪಕ್ಷದ ಸದಸ್ಯರು ಹೇಳಿದಾಗ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿಷಯದ ಗಂಭೀರತೆ ಕಡಿಮೆ ಮಾಡುವ ಮಾತನಾಡಬೇಡಿ ಎಂದು ಗೃಹ ಸಚಿವರು ಸಲಹೆ ಇತ್ತರು.

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿದ ಸಂದರ್ಭ ಚಡ್ಡಿ ಸಂಸ್ಕೃತಿ ಎಂಬ ಪದ ಪ್ರಯೋಗ ಮಾಡಿದರು. ಆಡಳಿತ ಪಕ್ಷದ ಸದಸ್ಯರು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚರ್ಚೆಯುದ್ದಕ್ಕೂ ಒಂದಲ್ಲಾ ಒಂದು ವಿಚಾರಕ್ಕೆ ಆಡಳಿತ ಹಾಗೂ ಪ್ರತಿಪಕ್ಷ ನಡುವೆ ವಾಗ್ವಾದ ನಡೆಯುತ್ತಲೇ ಇತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.