ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸಸೌಧದ ನೌಕರರ ಮೇಲೆ ಕೊರೊನಾ ಹರಡದಂತೆ ನಿಗಾವಹಿಲು ಥರ್ಮಲ್ ಸ್ಕ್ಯಾನರ್ ಅಳವಡಿಕೆ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮಲು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿ ಅವರು, ನಿನ್ನೆಯೇ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ, ಸಿಎಂ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ನಾನೂ ಕೂಡ ಆರೋಗ್ಯಾಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ, ಯಾರೂ ಕೂಡ ಆತಂಕಕ್ಕೆ ಒಳಗಾಗೋದು ಬೇಡ, ಆದಷ್ಟು ಸ್ಬಚ್ಚತೆ ಕಾಪಾಡಬೇಕು, ಸರ್ಕಾರ ಎಲ್ಲಾವರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದೆ ಎಂದರು.
ಕಲಬುರಗಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆ ವಿಚಾರಕ್ಕೆ ಪ್ರತಿಕಿಯಿಸಿದ ಅವರು ಕಲಬುರಗಿಯಲ್ಲಿ ಡಿಸಿಗಳು ಹಾಗೂ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ, ಕೊರೋನಾದಿಂದ ಮೃತ ವ್ಯಕ್ತಿಯ ಕುಟುಂಬದ ನಾಲ್ವರಿಗೆ ಕಫ ಪರೀಕ್ಷೆ ಮಾಡಲಾಗಿದೆ, ಮೂವರಲ್ಲಿ ನೆಗೆಟಿವ್ ಬಂದಿದೆ, ಒಬ್ಬರಿಗೆ ಸೋಂಕು ಪಾಸಿಟಿವ್ ಇದೆ, ಹೀಗಾಗಿ ಅವರ ಮನೆ ಸುತ್ತ ಬಫರ್ ಜೋನ್ ಮಾಡಿದ್ದೇವೆ, ಸೋಂಕಿತರ ಮನೆ ಕಡೆ ಯಾರೂ ಹೋಗದಂತೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದರು.