ಬೆಂಗಳೂರು : ನಗರದ ಕಮರ್ಷಿಯಲ್ ಸ್ಟ್ರೀಟ್ನ ಮತ್ತೊಬ್ಬ ನಟೋರಿಯಸ್ ರೌಡಿಶೀಟರ್ ಅನ್ನು ಸಿಟಿ ವ್ಯಾಪ್ತಿಯಿಂದ ಗ್ರಾಮಾಂತರ ಪ್ರದೇಶಕ್ಕೆ ಗಡಿಪಾರು ಮಾಡಿ ನಗರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ರೌಡಿಗಳ ಚಲನವಲನ ಗಮನಿಸಿ ಗಡಿಪಾರು ಸೂತ್ರವನ್ನು ಪೊಲೀಸ್ ಇಲಾಖೆ ಅಸ್ತ್ರವಾಗಿ ಬಳಸುತ್ತಿದೆ. ನಗರದ ಪೂರ್ವ ವಿಭಾಗದಲ್ಲಿ ಈಗಾಗಲೇ ನಾಲ್ಕಕ್ಕೂ ಹೆಚ್ಚು ರೌಡಿಶೀಟರ್ಗಳನ್ನು ಕಮಿಷನರ್ ಏರಿಯಾದಿಂದ ಹೊರಗಟ್ಟಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
![shivajinagar rowdy sheeter aamir khan deportation](https://etvbharatimages.akamaized.net/etvbharat/prod-images/kn-bng-03-rowdy-sheetar-koli-fayaz_13102021170139_1310f_1634124699_299.jpg)
ಈಗ ಶಿವಾಜಿನಗರ ಕೋಳಿ ಫಯಾಜ್ ಮಗನಾದ ನಟೋರಿಯಸ್ ರೌಡಿಶೀಟರ್ ಅಮೀರ್ ಖಾನ್ನನ್ನು ಗಡಿಪಾರು ಮಾಡಲಾಗಿದೆ. ಅಮೀರ್ ಖಾನ್ ಮೇಲೆ ಕೊಲೆಯತ್ನ, ಬೆದರಿಕೆ, ಸುಲಿಗೆ, ಮಾದಕ ವಸ್ತುಗಳ ಮಾರಾಟ ಸೇರಿ ಒಟ್ಟು 22 ಪ್ರಕರಣ ದಾಖಲಾಗಿದ್ದವು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾಡೆಲ್ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು.. ಆಸ್ಪತ್ರೆಗೆ ದಾಖಲು