ETV Bharat / state

ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತಾಡಿದ್ರೆ ಹುಷಾರ್: ಜಮೀರ್​ ಅಹಮದ್​ಗೆ​ ಶರವಣ ಎಚ್ಚರಿಕೆ - ಜಮೀರ್ ಅಹಮ್ಮದ್ ವಿರುದ್ಧ ಟಿ ಎ ಶರವಣ ವಾಗ್ದಾಳಿ

ಶಾಸಕ ಜಮೀರ್ ಅಹಮ್ಮದ್ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ‌ ಎಂದು ಜೆಡಿಎಸ್ ಮುಖಂಡ ಟಿ.ಎ. ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕುಮಾರಣ್ಣನ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಹುಷಾರ್​ ಅಂತ ಎಚ್ಚರಿಕೆ

sharavana outrage on Zameer Ahmed
ಜಮೀರ್ ಅಹಮ್ಮದ್ ವಿರುದ್ಧ ಟಿ ಎ ಶರವಣ ವಾಗ್ದಾಳಿ
author img

By

Published : Jun 22, 2021, 3:27 PM IST

Updated : Jun 22, 2021, 3:59 PM IST

ಬೆಂಗಳೂರು : ಶಾಸಕ ಜಮೀರ್ ಅಹಮದ್ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ‌. ಕುಮಾರಣ್ಣ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಅವರು ಬಹಿರಂಗ ಕ್ಷಮೆ ಕೋರಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಟಿ.ಎ. ಶರವಣ ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಬಗ್ಗೆ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರ ಮೂಡಿಸಿದೆ. ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದು ಎಂದುಕೊಂಡಿದ್ದಾರೆ. ಆದ್ರೆ ಜೆಡಿಎಸ್​ ಪಕ್ಷವು, ಸೀಮೆ ಎಣ್ಣೆ ಕ್ಯಾನ್ ಹಿಡಿದು ದರಿದ್ರ ನಾರಾಯಣ ಎಂಬ ಹೆಸರಿನಲ್ಲಿ ಇಡೀ ಕ್ಷೇತ್ರ ಓಡಾಡಿ ತನು ಮನ ಧನ ಎಲ್ಲವನ್ನೂ ಕೊಟ್ಟು ಚಾಮರಾಜಪೇಟೆಯ ಗಲ್ಲಿ ಗಲ್ಲಿಗಳಲ್ಲಿ ಓಡಾಡಿ ನಿಮ್ಮನ್ನು ( ಜಮೀರ್ ಅಹಮದ್ ) ಗೆಲ್ಲಿಸಿಕೊಂಡರು‌. ಅದೆಲ್ಲಾ ಮರೆತ್ರಾ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಟಿ.ಎ. ಶರವಣ

ಎರಡು ಬಾರಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರ ಬಗ್ಗೆ ಯಾಕೆ ಹೀಗೆ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ ಶರವಣ, ಒಂದು ಸಮುದಾಯವನ್ನು ಜಮೀರ್ ಅಹಮದ್ ಟಾರ್ಗೆಟ್ ಮಾಡ್ತಿದ್ದಾರೆ. ಜೆಡಿಎಸ್​ನಲ್ಲಿ ಇದ್ದಾಗ ಅಧಿಕಾರ ಅನುಭವಿಸಿ, ಈಗ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಹೋರಾಟದ ಎಚ್ಚರಿಕೆ :

ಕೂಡಲೇ ಕುಮಾರಣ್ಣ ಅವರ ಬಳಿ ಕ್ಷಮೆ‌ ಕೇಳಬೇಕು. ಇನ್ನು ಮುಂದೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಲ್ಲಿದ್ದಾರೆ ಜೆಡಿಎಸ್ ಶಾಸಕರು ಅಂತಾ ಹೇಳ್ತಿದ್ದಾರೆ. ನಿಮ್ಮದೇ ಕ್ಷೇತ್ರದ ಜನರಿಗೆ ನಾನು ಆಹಾರ ಕೊಟ್ಟಿದ್ದೇನೆ. ಕೋವಿಡ್‌ ಸಂದರ್ಭದಲ್ಲಿ ನಮ್ಮವರು ರಾಜಕೀಯ ಮಾಡಿಲ್ಲ. ಮನೆಯಲ್ಲಿ ಕುಳಿತಿದ್ದಾರೆ ಅಂದುಕೊಳ್ಬೇಡಿ. ಸಮುದಾಯಗಳನ್ನ ಎತ್ತಿಕೊಟ್ಟೋದನ್ನು ನಿಲ್ಲಿಸಿ. ಮೊದಲು ನಿಮ್ಮ ಪಕ್ಷದ ಬಗ್ಗೆ ನೋಡಿಕೊಳ್ಳಿ ಎಂದು ಶರವಣ ಕಿಡಿಕಾರಿದರು.

ನಮ್ಮವರು ಯಾರು ಪಲ್ಟಿ ಹೊಡೆದಿದ್ದಾರೆ. ಪಲ್ಟಿ ಹೊಡೆದು ವೋಟನ್ನು ಮಾರಾಟ ಮಾಡಿಕೊಂಡ್ರಲ್ಲಾ ಅದು ಪಲ್ಟಿ. ಸಿದ್ದರಾಮಯ್ಯ ಅವರನ್ನು ವೋಲೈಸಲು ಪಲ್ಟಿ ಹೊಡೆಯುತ್ತಿರುವುದು ನೀವು (ಜಮೀರ್ ಅಹಮ್ಮದ್). ನಿಮ್ಮದೇ ಪಕ್ಷದ ಅಧ್ಯಕ್ಷರು ನಿಮಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಸಿದ್ದರಾಮಯ್ಯ ಸಿಎಂ ಆಗಬೇಕು ಅಂತೀರಲ್ವಾ, ವೋಲೈಕೆಗೆ ಒಂದು ಮಿತಿ ಇರೋದಿಲ್ವಾ. ನಮ್ಮ ಕುಮಾರಸ್ವಾಮಿ ಕಪ್ಪಾಗಿದ್ದಾರೆ ಅಂತಾ ನಿಂದನೆ ಮಾಡಿದ್ದಾರೆ. ಕನ್ನಡಿಗರ ಕಪ್ಪು ಕಸ್ತೂರಿ ಅಂತಾ ಗೊತ್ತಿದೆಯಾ?. ಹುಷಾರ್ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಜಮೀರ್ ಅಹಮದ್ ಅವರಿಗೆ ಶರವಣ ಎಚ್ಚರಿಕೆ ರವಾನಿಸಿದರು.

ಕುಮಾರಸ್ವಾಮಿ ಸಿಎಂ ಆಗಿರಬೇಕಿತ್ತು:

ಕೋವಿಡ್ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿರಬೇಕಾಗಿತ್ತು. ಜನರು ಸಹ ಇದನ್ನೇ ಹೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದರೆ ಜನರಿಗೆ ಈ ರೀತಿ ಕಷ್ಟಪಡುವಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿದ್ದಾರೆ. ಒಂದು ಸಮುದಾಯದ ನಾಯಕರ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ ಎಂದ ಅವರು, ರಾಜ್ಯದ ಅಧ್ಯಕ್ಷರೇ ಸುಪ್ರೀಂ ಅಂತಾ ಮಾಜಿ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈಗ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮದು ಚಿಲ್ಲರೆ ರಾಜಕೀಯವಲ್ಲ:

ನಮ್ಮ ನಾಯಕರು ಇವರಂತೆ ಚಿಲ್ಲರೆ ರಾಜಕೀಯ ಮಾಡಲ್ಲ. ಸಹವಾಸ ದೋಷ ಬಿಟ್ಟಿದ್ದೇನೆ ಅಂತಾ ಕುಮಾರಣ್ಣ ಹೇಳಿದ್ದಾರೆ. ವೈಯಕ್ತಿಕ ಹೇಳಿಕೆ ನೀಡುವುದನ್ನು ನಿಲ್ಲಿಸಿ. ರಾಜ್ಯದ ಜನ ನಿರ್ಧಾರ ಮಾಡುತ್ತಾರೆ. ಜಮೀರ್ ಅಹಮದ್ ಹೇಳಿದ ತಕ್ಷಣ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ. ನಮ್ಮ ಕುಮಾರಣ್ಣ ಮತ್ತೆ ಸಿಎಂ ಆಗೇ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಜಮೀರ್‌ ಅಹಮದ್​ಗೆ ಈ ಹಿಂದೆ ಕುಮಾರಣ್ಣ, ಈಗ ಸಿದ್ದರಾಮಯ್ಯ, ಮುಂದೆ ಯಾರೋ? ರಾಜಕೀಯ ನಿಂತ ನೀರಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.

ಇದನ್ನೂ ಓದಿ: ಲಸಿಕೆ ಪಡೆಯಲು ಹಿಂದೇಟು: ಮನೆಗೆ ಬೀಗ ಹಾಕಿ ಓಡಿಹೋದ್ರು ಯಾದಗಿರಿಯ ಜನ!

ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿಯಲ್ಲಿದ್ದ ನಾಯಕರು ಏನಾದರೂ ಹೇಳಿ, ರೋಷನ್ ಬೇಗ್, ಸಿ.ಎಂ. ಇಬ್ರಾಹಿಂ, ತನ್ವೀರ್ ಸೇಠ್ ಅವರನ್ನು ನೇಪಥ್ಯಕ್ಕೆ ಸರಿಯುವಂತೆ ಮಾಡಿದವರು ಯಾರು? ಕಾಂಗ್ರೆಸ್​ನಲ್ಲಿ ತಮ್ಮ ಸಮುದಾಯವರು ಬೆಳೆಯದಂತೆ ಮಾಡಿದ್ದಾರೆ. ಅದೇ ಕಾರಣಕ್ಕೆ ಸಮುದಾಯವೊಂದರ ಬೇರೆ ನಾಯಕರು ನೇಪಥ್ಯಕ್ಕೆ ಸರಿದಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ನಿಲ್ಲಿಸಿ ಎಂದು ಜಮೀರ್ ಅಹಮದ್ ಅವರಿಗೆ ಶರವಣ ನೇರವಾಗಿ ಹೇಳಿದರು.

Last Updated : Jun 22, 2021, 3:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.