ETV Bharat / state

ಕಿಡ್ನಾಪ್​ ಆ್ಯಂಡ್​ ಮರ್ಡರ್​ ಕೇಸ್​.. ಮತ್ತೆ ಐವರ ಬಂಧನ, ಬಯಲಾಯ್ತು ಕೊಲೆ ಹಿಂದಿನ ಅಸಲಿಯತ್ತು

author img

By

Published : Dec 29, 2022, 10:21 AM IST

Updated : Dec 29, 2022, 10:34 AM IST

ಸಿನಿಮಾ ಶೈಲಿಯಲ್ಲಿ ಯುವಕನ ಅಪಹರಣ, ಕೊಲೆ ಪ್ರಕರಣ- ಪೊಲೀಸರಿಂದ ಐವರು ಆರೋಪಿಗಳ ಬಂಧನ- ಹತ್ಯೆ ಹಿಂದಿನ ನಿಜ ಸಂಗತಿ ಬಯಲು

Police arrested five accused in Sharat's kidnapping and murder
ಶರತ್​ ಅಪಹರಣ ಹತ್ಯೆ ಮತ್ತೆ ಪೊಲೀಸರಿಂದ ಐವರು ಆರೋಪಿಗಳ ಬಂಧನ

ಬೆಂಗಳೂರು: ಹಣ ಪಡೆದು ವಂಚಿಸಿದ್ದನೆಂಬ ಕಾರಣಕ್ಕೆ ಸಿನಿಮಾ ಶೈಲಿಯಲ್ಲಿ ಯುವಕನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಬುಧವಾರ ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉದಯ್​, ನವೀನ್, ಸಂಕೇತ್, ಭೋಗೇಶ್ ಮತ್ತು ಗೋವಿಂದ ಬಂಧಿತರು.

ಆರೋಪಿಗಳ ಪೈಕಿ ಉದಯ್, ಭೋಗೇಶ್, ಗೋವಿಂದ ಶರತ್ ಮೇಲೆ ಹಲ್ಲೆ ನಡೆಸಿದರೆ, ಸಂಕೇತ್ ತನ್ನ ತೋಟದ ಮನೆಯಲ್ಲೇ ಶರತ್​ಗೆ ಚಿತ್ರ ಹಿಂಸೆ ನೀಡಲು ಸ್ಥಳ ನೀಡಿದ್ದ. ಶರತ್​ನನ್ನು ಕೊಂದ ಬಳಿಕ ಆತನ ಮೃತದೇಹವನ್ನು ನವೀನ್ ಕಾರಿನಲ್ಲಿಯೇ ಚಾರ್ಮಾಡಿ ಘಾಟ್‌ಗೆ ಕೊಂಡೊಯ್ದರು. ಬಳಿಕ ಎಲ್ಲರೂ ಸೇರಿ ಮೃತದೇಹವನ್ನು ಎಸೆದಿದ್ದಾರೆ.

ಈ ಪ್ರಕರಣ ತನಿಖೆ ನಡೆಯುತ್ತಿದ್ದು ಆರೋಪಿಗಳ ವಿಚಾರಣೆಯಲ್ಲಿ ಮೃತದೇಹ ಯಾವ ಭಾಗದಲ್ಲಿ ಎಸೆಯಲಾಗಿದೆ ಎಂಬ ಮಾಹಿತಿ ಸಿಗಬೇಕಿದೆ. ಇನ್ನು, ಚಿಕ್ಕಬಳ್ಳಾಪುರ ಕರವೇ ಅಧ್ಯಕ್ಷ ವೆಂಕಟಚಲಪತಿ ಮತ್ತು ಅವರ ಪುತ್ರ ಎ.ವಿ. ಶರತ್ ಕುಮಾರ್ ಸೂಚನೆ ಮೇರೆಗೆ ಈ ಐವರು ಶರತ್​ಗೆ ಚಿತ್ರಹಿಂಸೆ ನೀಡಿದ್ದಲ್ಲದೆ, ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ತಿಂಗಳ ಹಿಂದೆ ಬನಶಂಕರಿಯಲ್ಲಿ ಶರತ್‌ನನ್ನು ಅಪಹರಿಸಿದ ಹಂತಕರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸಂಕೇತ್‌ನ ತೋಟದ ಮನೆಗೆ ಕರೆದೊಯ್ದು ಆರೇಳು ದಿನಗಳ ಕಾಲ ಹಿಂಸೆ ನೀಡಿ ಹತ್ಯೆಗೈದಿದ್ದರು. ಬಳಿಕ ಚಾರ್ಮಾಡಿ ಘಾಟ್‌ನಲ್ಲಿ ಮೃತದೇಹ ಎಸೆದಿದ್ದರು ಎಂದು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರ ಜಿಲ್ಲೆಯ ಕರವೇ ಅಧ್ಯಕ್ಷ ವೆಂಕಟಚಲಪತಿ ಮಗ ಶರತ್​ ಕುಮಾರ್​ ಕಳೆದ ವರ್ಷ ಶರತ್​ಗೆ 20 ರೂಪಾಯಿ ಲಕ್ಷ ಸಾಲ ಕೊಟ್ಟಿದ್ದ. ಈ ಹಣವನ್ನು ವಾಪಸ್​ ನೀಡಲು ಸತಾಯಿಸುತ್ತಿದ್ದ ಶರತ್​ನನ್ನು ಕಳೆದ ಜನವರಿಯಲ್ಲಿ ಅಪಹರಿಸಿ ಹಣ ನೀಡುವಂತೆ ಆರೋಪಿ ಶರತ್​ ಕುಮಾರ್​​ ಪೀಡಿಸಿದ್ದ. ಕೆಲವೇ ದಿನಗಳಲ್ಲಿ ಹಣ ನೀಡುವುದಾಗಿ ಹೇಳಿದ್ದ ಶರತ್​ ನುಡಿದಂತೆ ನಡೆದುಕೊಳ್ಳದಿದ್ದರಿಂದ ಮಾರ್ಚ್​ 23 ರಂದು ಆರೋಪಿಗಳಿಂದ ಬನಶಂಕರಿಯಿಂದ ಮತ್ತೆ ಅಪಹರಿಸಲ್ಪಟ್ಟಿದ್ದ.

ನಂತರ ಶರತ್​ ಕುಮಾರ್​ನ್ನು ಕಾರಿನಲ್ಲಿ ಅಪಹರಿಸಿ ಚಿಕ್ಕಬಳ್ಳಾಪುರದ ಫಾರ್ಮ್​ ಹೌಸ್​ವೊಂದಕ್ಕೆ ಕರೆತಂದ ಶರತ್​ಕುಮಾರ್​ ಹಾಗೂ ಆತನ ಸಹಚರರು ಮನಬಂದಂತೆ ಹಲ್ಲೆ ನಡೆಸಿ, ಸತತ ಒಂದು ವಾರ ನಿರಂತರವಾಗಿ ದೈಹಿಕ ಹಲ್ಲೆ ನಡೆಸಿದ್ದರು. ಹಾಗೆ ಮಾಡಿರುವ ಅಪಹರಣ ಬಗ್ಗೆ ಅನುಮಾನ ಬಾರದಿರಲು ಆರೋಪಿಗಳು ಶರತ್​ ಕಡೆಯಿಂದ ಆತನ ಪೋಷಕರಿಗೆ ಕರೆ ಮಾಡಿಸಿ ಸಾಲಗಾರರ ತೊಂದರೆ ಹೆಚ್ಚಾಗಿದ್ದರಿಂದ ಬೇರೆ ಊರಿಗೆ ಹೋಗಿ ಹಣ ಸಂಪಾದನೆ ಮಾಡಿಕೊಂಡು ಬರುತ್ತೇನೆ. ಹೀಗಾಗಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಹೇಳಿಸಿ ಕರೆಯನ್ನು ಕಟ್​ ಮಾಡಿಸಿ ಅವತ್ತೇ ಫೋನ್​ಅನ್ನು ಸ್ವಿಚ್​ ಆಫ್​​ ಮಾಡಿ ಲಾರಿಯೊಂದರ ಮೇಲೆ ಬಿಸಾಕಿದ್ದಾರೆ. ತೀವ್ರವಾದ ಗಂಭೀರ ಗಾಯಗಳಿಂದ ಬಳಲುತ್ತಿದ್ದ ಶರತ್​ ಮಾರ್ಚ್​ 29 ರಂದು ಮೃತಪಟ್ಟಿದ್ದ ಎಂದು ತಿಳಿದು ಬಂದಿತ್ತು.

ಇನ್ನು ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಮುಂದಾದ ಆರೋಪಿಗಳು ಗೀಣಿಚೀಲದಲ್ಲಿ ಶವ ಪ್ಯಾಕ್​ ಮಾಡಿ ಕಾರಿನಲ್ಲಿ ಇಟ್ಟುಕೊಂಡು ಚಾರ್ಮಾಡಿ ಘಾಟ್​ನಲ್ಲಿ ಶವ ಬಿಸಾಕಿದ್ದಾರೆ. ಬಳಿಕ ಬೆಂಗಳೂರಿಗೆ ಬಂದು ಏನೂ ಆಗಿಲ್ಲವೆಂಬಂತೆ ಆರೋಪಿಗಳು ಓಡಾಡಿಕೊಂಡಿದ್ದರು.

ಆದರೆ ಹಲ್ಲೆಯ ದೃಶ್ಯ ವೈರಲ್​ ಆಗಿದ್ದರಿಂದ ಆ ವೀಡಿಯೋವನ್ನು ಇಟ್ಟುಕೊಂಡು ಮಾಧ್ಯಮ ಸೋಗಿನಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ವಿಡಿಯೋ ಕಬ್ಬನ್​ ಪಾರ್ಕ್​ ಉಪವಿಭಾಗದ ಎಸಿಪಿಯ ಗಮನಕ್ಕೂ ಬಂದು ತನಿಖೆ ನಡೆಸಿದಾಗ ಈ ಹತೈಯ ನಿಜ ಸಂಗತಿ ಬೆಳಕಿಗೆ ಬಂದಿದೆ. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಮತ್ತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ; ವಕೀಲನ ಮೇಲೆ ಹಲ್ಲೆ ಆರೋಪ.. ಹಾನಗಲ್ ಠಾಣೆ ಪಿಎಸ್​ಐ ಅಮಾನತು

Last Updated : Dec 29, 2022, 10:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.