ETV Bharat / state

ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪ: ಷಡಕ್ಷರಿ ರುದ್ರಮುನಿ ಸ್ವಾಮೀಜಿ - ಸಿಎಂ ಬದಲಾವಣೆ ವಿಚಾರ

ಸಿಎಂ ಸ್ಥಾನದಿಂದ ಬಿಎಸ್​ವೈ ಅವರನ್ನು ಕೆಳಗಿಳಿಸಲಾಗುತ್ತದೆ ಎಂಬ ವದಂತಿಗಳ ಬೆನ್ನಲ್ಲೇ ವಿವಿಧ ಮಠಾಧೀಶರುಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಇಂದು ಕೂಡ ಮಠಾಧೀಶರುಗಳು ಬಿಎಸ್​ವೈ ಮನೆಗೆ ಭೇಟಿ ನೀಡಿದ್ದರು.

Shadakshari Rudramuni Swamiji
ಷಡಕ್ಷರಿ ರುದ್ರಮುನಿ ಸ್ವಾಮೀಜಿ
author img

By

Published : Jul 21, 2021, 5:14 PM IST

ಬೆಂಗಳೂರು: ಯಡಿಯೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ. ಅವರನ್ನು ಬದಲಾವಣೆ ಮಾಡುತ್ತಿರುವುದು ನಮಗೆಲ್ಲ ನೋವು ತಂದಿದೆ. ಬಿಎಸ್​ವೈ ಸಂಪೂರ್ಣವಾಗಿ ಅಧಿಕಾರ ಪೂರೈಸಬೇಕು ಎಂದು ತಿಪಟೂರು ಮಠದ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಒತ್ತಾಯಿಸಿದರು.

ತಿಪಟೂರು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಪ್ರತಿಕ್ರಿಯೆ

ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನಮ್ಮ ಸಮಾಜದ ಘನತೆ ಮತ್ತು ಅಮೂಲ್ಯವಾದ ಮುತ್ತು, ರತ್ನ ಇದ್ದಾಂಗೆ. ಅವರನ್ನು ಕೆಳಗಿಳಿಸುವಂತಹ ಷಡ್ಯಂತ್ರವವನ್ನು ಸ್ವ ಪಕ್ಷದವರೇ ಮಾಡುತ್ತಿರುವುದು ನಮ್ಮ ಮಠಾಧೀಶರಿಗೆ ಬಹಳ ನೋವು ತಂದಿದೆ ಎಂದರು.

ಸಿಎಂ ಬದಲಾವಣೆ ಮಾಡಿದರೆ ಕರ್ನಾಟಕದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ವೀರಶೈವ ಸಮಾಜ ಕೈಕಟ್ಟಿ ಕುಳಿತುಕೊಳ್ಳಲ್ಲ. ಪ್ರಶ್ನಾತೀತ ನಾಯಕ ಯಡಿಯೂರಪ್ಪನವರನ್ನು ಕೆಳಗಿಸಿಸುವ ಪ್ರಯತ್ನ ಮಾಡಿದ್ರೆ ರಾಜ್ಯದಲ್ಲಿ ಬಿಜೆಪಿ ಉಳಿಯಲ್ಲ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಆದರಿಂದ ಬಿಎಸ್​ವೈ ಅವರಿಗೆ ಪೂರ್ಣಾವಧಿಗೆ ಅಧಿಕಾರ ನಡೆಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಓದಿ; ಸಿಎಂ ಭೇಟಿ ಮಾಡಿದ ಸಿದ್ಧಗಂಗಾ ಶ್ರೀ.. ಬಿಎಸ್​ವೈ ಜೊತೆ ಮಹತ್ವದ ಚರ್ಚೆ

ರಾಜ್ಯದ ರಾಜಕೀಯದಲ್ಲಿ ಎಡವುವಂತಹ ಪರಿಸ್ಥಿತಿ ಬಂದಾಗ ಜಾತಿ, ಮತ ಮರೆತು ಮಠಾಧೀಶರು ಎಚ್ಚಿರುವಂತಹ ಕೆಲಸ ಮಾಡಬೇಕು. ನಾವು ಮಾಡದೇ ಬೇರೆ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಓದಿ: ಬಿ.ಎಸ್.ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರಬೇಕು: ಸಿದ್ದಗಂಗಾ ಶ್ರೀ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.