ETV Bharat / state

ಏಳು‌ ಸಚಿವರ ಖಾತೆ ಮರು ಹಂಚಿಕೆ.. ಅಧಿಕೃತ ಆದೇಶ ಪ್ರಕಟ - ಏಳು‌ ಸಚಿವರ ಖಾತೆ ಮರು ಹಂಚಿಕೆ

ಖಾತೆಗಳ ಹಂಚಿಕೆ ನಂತರ ತಲೆದೂರಿದ್ದ ಅಸಮಧಾನಕ್ಕೆ ಬ್ರೇಕ್​ ಹಾಕಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಳು ಸಚಿವರ ಖಾತೆಗಳ ಮರು ಹಂಚಿಕೆ ಮಾಡಿದ್ದಾರೆ. ಈ ಸಂಬಂಧ ರಾಜ್ಯಪಾಲರು ಪರಿಷ್ಕೃತ ಖಾತೆ ಹಂಚಿಕೆ ಪಟ್ಟಿಗೆ ಸಹಿ ಹಾಕಿದ್ದು, ನೂತನ ಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ.

Seven Ministers' portfolio Re-Distribution
ಏಳು‌ ಸಚಿವರ ಖಾತೆ ಮರು ಹಂಚಿಕೆ
author img

By

Published : Feb 11, 2020, 5:21 PM IST

ಬೆಂಗಳೂರು: ಖಾತೆಗಳ ಹಂಚಿಕೆ ನಂತರ ತಲೆದೋರಿದ್ದ ಅಸಮಧಾನಕ್ಕೆ ಬ್ರೇಕ್​ ಹಾಕಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏಳು ಸಚಿವರ ಖಾತೆಗಳ ಮರು ಹಂಚಿಕೆ ಮಾಡಿದ್ದಾರೆ. ಈ ಸಂಬಂಧ ರಾಜ್ಯಪಾಲರು ಪರಿಷ್ಕೃತ ಖಾತೆ ಹಂಚಿಕೆ ಪಟ್ಟಿಗೆ ಸಹಿ ಹಾಕಿದ್ದು, ನೂತನ ಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ.

Seven Ministers' portfolio Re-Distribution
ಏಳು‌ ಸಚಿವರ ಖಾತೆ ಮರು ಹಂಚಿಕೆ.. ಅಧಿಕೃತ ಆದೇಶ ಪತ್ರ

ಖಾತೆಗಳ ಹಂಚಿಕೆ ಆದ ಮರು ದಿನವೇ ಕೆಲ ಸಚಿವರಿಗೆ ಖಾತೆಗಳ ಮರು ಹಂಚಿಕೆ ಮಾಡಲಾಗಿದೆ. ಸಚಿವ ಬಿ.ಸಿ ಪಾಟೀಲ್ ಅವರಿಗೆ ಕೃಷಿ ಖಾತೆ ಹಂಚಿಕೆ ಮಾಡಿದ್ದು ಸಚಿವ ಶಿವರಾಮ್ ಹೆಬ್ಬಾರ್​ಗೆ ಕಾರ್ಮಿಕ ಖಾತೆ ಜೊತೆ ಸಕ್ಕರೆ ಖಾತೆ ಹಂಚಿಕೆ ಮಾಡಲಾಗಿದೆ. ಗೃಹ‌ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಗೃಹ ಖಾತೆ ಉಳಿಸಿ ಕೃಷಿ ಖಾತೆ ವಾಪಸ್ ಪಡೆಯಲಾಗಿದೆ. ಪ್ರಭು ಚೌಹಾಣ್ ಗೆ ಪಶು ಸಂಗೋಪನೆ ಖಾತೆ ಹಾಗೂ ವಕ್ಫ್ ಖಾತೆ ಉಳಿಸಿ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯನ್ನು ಜವಳಿ ಖಾತೆಯ ಜೊತೆ ಹೆಚ್ಚುವರಿಯಾಗಿ ಶ್ರೀಮಂತ ಪಾಟೀಲ್ ಅವರಿಗೆ ನೀಡಲಾಗಿದೆ. ಹಾಗೆ ಸಚಿವ ಆನಂದ್ ಸಿಂಗ್ ಗೆ ಅರಣ್ಯ ಹಾಗೂ ಜೈವಿಕ ಪರಿಸರ ಖಾತೆ, ಗೋಪಾಲಯ್ಯಗೆ ಸಣ್ಣ ಕೈಗಾರಿಕಾ, ಸಕ್ಕರೆ ಖಾತೆ ವಾಪಸ್ ಪಡೆದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ನೀಡಲಾಗಿದೆಮೂರನೇ ಬಾರಿಯ ಖಾತೆ ಹಂಚಿಕೆ ವೇಳೆಯಲ್ಲಿಯೂ ಬೆಂಗಳೂರು ನಗರಾಭಿವೃದ್ಧಿ ಹಾಗೂ ಇಂಧನ ಖಾತೆ ಯಾರಿಗೂ ಹಂಚಿಕೆ ಮಾಡದ ಸಿಎಂ ಈ ಎರಡು ಖಾತೆಗಳನ್ನು ತನ್ನ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ. ಹಾಗಾಗಿ ಇಂಧನ ಖಾತೆ ಅಪೇಕ್ಷೆ ಇಟ್ಟುಕೊಂಡಿದ್ದ ಸಚಿವರಾದ ಸುಧಾಕರ ಹಾಗೂ ಆನಂದ್ ಸಿಂಗ್​ಗೆ ಭಾರಿ ನಿರಾಸೆಯಾದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.