ಬೆಂಗಳೂರು: ತಮ್ಮ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಬಾರದು ಎಂದು ತಡೆ ಆದೇಶ ತಂದಿದ್ದ ತೇಜಸ್ವಿ ಸೂರ್ಯಗೆ ಹಿನ್ನಡೆಯಾಗಿದೆ.
ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಅಧೀನ ನ್ಯಾಯಲಯದಿಂದ ನಿರ್ಬಂಧ ತಂದಿದ್ದರು. ಆದರೆ, ಇವತ್ತು ಪ್ರಕರಣ ಇತ್ಯರ್ಥ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಸುದ್ದಿ ಪ್ರಸಾರ ಮಾಡುವುದು ಬಿಡುವುದು ಮಾಧ್ಯಮಗಳ ವಿವೇಚನೆಗೆ ಬಿಟ್ಟ ವಿಚಾರ. ತೇಜಸ್ವಿ ಸೂರ್ಯ ಬಗ್ಗೆ ಸರಿ ಅನಿಸಿದ ಸುದ್ದಿ ಹಾಕಬಹುದು. ಆ ಸುದ್ದಿ ತೇಜಸ್ವಿ ಅವರಿಗೆ ಅವಹೇಳನಕಾರಿ ಅನಿಸಿದ್ರೆ ನ್ಯಾಯಲಯದ ಮೊರೆ ಹೋಗುವಂತೆ ಸೂಚನೆ ನೀಡಿ ಹೈಕೊರ್ಟ್ ಅರ್ಜಿ ಇತ್ಯರ್ಥ ಮಾಡಿದೆ.
ಏನಿದು ಪ್ರಕರಣ:
ತೇಜಸ್ವಿ ಸೂರ್ಯ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ್ದವು. ಇದನ್ನು ಪ್ರಶ್ನಿಸಿ ಅಧೀನ ನ್ಯಾಯಾಲಯದಿಂದ ನಿರ್ಬಂಧ ತಂದಿದ್ದರು. ಆದರೆ, ಈ ನಿರ್ಬಂಧ ಪ್ರಶ್ನಿಸಿ ದೆಹಲಿ ಮೂಲದ ಡೆಮಾಕ್ರಟಿಕ್ ರಿಫಾರ್ಮ್ ಆರ್ಗನೈಸೇಷನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು.
ಈ ಹಿನ್ನೆಲೆ ವಿಚಾರಣೆ ನಡೆದಿದ್ದು, ಅಭ್ಯರ್ಥಿಯ ಪರ ಪೂರ್ವಾಪರ ತಿಳಿದುಕೊಳ್ಳಲು ಮತದಾರನಿಗೆ ಹಕ್ಕಿದೆ. ಅದನ್ನು ನಿರ್ಬಂಧಿಸುವುದು ಸರಿಯಲ್ಲ ಎಂದು ಹೈಕೋರ್ಟ್ ತಿಳಿಸಿದೆ.