ETV Bharat / state

ನಾಡಗೀತೆಗೆ ಕಾಲಮಿತಿ ನಿಗದಿ: ವಿರಾಮ ನೀಡದೆ ಹಾಡಲು ಸೂಚನೆ - ಬೆಂಗಳೂರು

ಯಾರು ಯಾವ ಧಾಟಿಯಲ್ಲಾದರೂ ಹಾಡಲಿ, ಹಿನ್ನಲೆ ಸಂಗೀತ ಯಾವುದೇ ಇರಲಿ, ತಾಳ ಯಾವುದಾದರೂ ಇರಲಿ ಆದರೆ ಗೀತೆಯನ್ನು ನಿಲ್ಲಿಸದೆ ಸಂಪೂರ್ಣವಾಗಿ ಹಾಡಬೇಕು ಎನ್ನುವ ಪ್ರಮುಖ ಅಂಶವನ್ನೂ ಸೇರಿಸಿಕೊಂಡಂತೆ ಮಾಹಿತಿಯನ್ನು ವರದಿ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಅನುಮೋದನೆ ಹಂತಕ್ಕೆ ಬಂದು ತಲುಪಿದೆ.

ನಾಡಗೀತೆಗೆ ಕಾಲಮಿತಿ ನಿಗದಿ
author img

By

Published : Oct 31, 2019, 8:16 PM IST

Updated : Oct 31, 2019, 8:59 PM IST

ಬೆಂಗಳೂರು: ಇನ್ಮುಂದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಾಡಗೀತೆ ಹಾಡುವ ಸಂಪ್ರದಾಯಕ್ಕೆ ಕಡಿವಾಣ ಬೀಳಲಿದೆ. ರಾಷ್ಟ್ರಗೀತೆಯಂತೆ ನಾಡಗೀತೆಯನ್ನೂ ಕಾಲಮಿತಿಯಲ್ಲಿ ಯಾವ ಸಾಲೂ ಕೂಡಾ ಪುನರಾವರ್ತನೆಯಾಗದಂತೆ, ಹಿನ್ನೆಲೆ ಸಂಗೀತಕ್ಕಾಗಿ ವಿರಾಮ ನೀಡದೆ ಹಾಡುವ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ.

ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಾಡಗೀತೆಗೆ ಕಾಲಮಿತಿ ನಿಗದಿಪಡಿಸುವ ಸಂಬಂಧ ವಿದ್ವಾಂಸರು ಮತ್ತು ಶಿಕ್ಷಣತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಯಾರು ಯಾವ ಧಾಟಿಯಲ್ಲಾದರೂ ಹಾಡಲಿ, ಹಿನ್ನಲೆ ಸಂಗೀತ ಯಾವುದೇ ಇರಲಿ,ಯಾವ ರಾಗದಲ್ಲಿ ಬೇಕಾದರೂ ಹಾಡಲಿ, ತಾಳ ಯಾವುದಾದರೂ ಇರಲಿ ಆದರೆ ಗೀತೆಯನ್ನು ನಿಲ್ಲಿಸಿದೆ ಸಂಪೂರ್ಣವಾಗಿ ಹಾಡಬೇಕು ಎನ್ನುವ ಪ್ರಮುಖ ಅಂಶವನ್ನೂ ಸೇರಿಸಿಕೊಂಡಂತೆ ಮಾಹಿತಿಯನ್ನು ವರದಿ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು ಅನುಮೋದನೆ ಹಂತಕ್ಕೆ ಬಂದು ತಲುಪಿದೆ.

ನಾಡಗೀತೆಗೆ ಕಾಲಮಿತಿ ನಿಗದಿ

ವರದಿಯಲ್ಲೇನಿದೆ?

  • ಯಾವ ಸಾಲೂ ಅಥವಾ ಚರಣವನ್ನೂ ಕೂಡ ಕೈಬಿಡಬಾರದು
  • ಯಾವ ಸಾಲೂ ಪುನರಾವರ್ತನೆಯಾಗಬಾರದು
  • 2.30 ನಿಮಿಷದಲ್ಲಿ ಹಾಡಬೇಕು

ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಆ ಧಾಟಿ, ಈ ಧಾಟಿ, ಆ ರಾಗ ಈ ರಾಗ ಅಂತಾ ಇಲ್ಲ ಬೇರೆ ಬೇರೆಯವರು ಬೇರೆ ಬೇರೆ ರಾಗದಲ್ಲಿ ಹಾಡಲಿದ್ದಾರೆ. ಏಳೆಂಟು ವಿಧದಲ್ಲಿ ಹಾಡುತ್ತಾರೆ, ಸಂಗೀತವನ್ನು ಕೊಡುವ ಸಲುವಾಗಿ ಗೀತೆಯನ್ನು ಹಾಡುವ ಮಧ್ಯದಲ್ಲಿ ನಿಲ್ಲಿಸಿಬಿಡುತ್ತಾರೆ ಇದು ಆಗಬಾರದು. ಶಾಂತವಾಗಿ,ಸಮಾಧಾನವಾಗಿ 2.30 ನಿಮಿಷದಲ್ಲಿ ಇಡೀ ನಾಡಗೀತೆಯನ್ನು ಹಾಡಬಹುದು. ಈ ಹಿನ್ನೆಲೆ ಹಾಡನ್ನು ಹಾಡಿಸಿ, ವೀಡಿಯೋ ಮಾಡಿ ಅದನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದರು.

Intro:

ಬೆಂಗಳೂರು:ಇನ್ಮುಂದೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಾಡಗೀತೆ ಹಾಡುವ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ. ರಾಷ್ಟ್ರಗೀತೆಯಂತೆ ನಾಡಗೀತೆಯನ್ನೂ ಕಾಲಮಿತಿಯಲ್ಲಿ ಯಾವ ಸಾಲು ಪುನರಾವರ್ತನೆಯಾಗದಂತೆ, ಹಿನ್ನೆಲೆ ಸಂಗೀತಕ್ಕಾಗಿ ವಿರಾಮ ನೀಡದೇ ಹಾಡುವ ನಿಯಮ ಸಧ್ಯದಲ್ಲೇ ಜಾರಿಗೆ ಬರಲಿದೆ.

ಕನ್ನಡ ಸಾಹಿತ್ಯ ಪರಿಷರ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಾಡಗೀತೆಗೆ ಕಾಲಮಿತಿ ನಿಗದಿಪಡಿಸುವ ಸಂಬಂಧ ವಿದ್ವಾಂಸರು ಮತ್ತು ಶಿಕ್ಷಣ ತಜ್ಱರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.ಯಾರು ಯಾವ ಧಾಟಿಯಲ್ಲಾದರೂ ಹಾಡಲಿ, ಹಿನ್ನಲೆ ಸಂಗೀತ ಯಾವುದೇ ಇರಲಿ,ಯಾವ ರಾಗದಲ್ಲಿ ಬೇಕಾದರೂ ಹಾಡಲಿ, ತಾಳ ಯಾವುದಾದರೂ ಇರಲಿ ಆದರೆ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕು ಎನ್ನುವ ಪ್ರಮುಖ ಅಂಶವನ್ನೂ ಸೇರಿಸಿಕೊಂಡಂತೆ ಮಾಹಿತಿಯನ್ನು ವರದಿ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು ಅನುಮೋದನೆ ಹಂತಕ್ಕೆ ಬಂದು ತಲುಪಿದೆ.

ವರದಿಯಲ್ಲೇನಿದೆ?

ಎಂಟು ನುಡಿಯನ್ನೂ ಹಾಡಬೇಕು,
ಯಾವ ಸಾಲು ಅಥವಾ ಚರಣವನ್ನೂ ಕತ್ತರಿಸಬಾರದು
ಯಾವ ಸಾಲೂ ಪುನರಾವರ್ತನೆಯಾಗಬಾರದು,
2.30 ನಿಮಿಷದಲ್ಲಿ ಹಾಡಬೇಕು

ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್,
ಆ ಧಾಟಿ, ಈ ಧಾಟಿ, ಆ ರಾಗ ಈ ರಾಗ ಅಂತಾ ಇಲ್ಲ ಬೇರೆ ಬೇರೆಯವರು ಬೇರೆ ಬೇರೆ ರಾಗದಲ್ಲಿ ಹಾಡಲಿದ್ದಾರೆ ಏಳೆಂಟು ವಿಧದಲ್ಲಿ ಹಾಡುತ್ತಾರೆ, ಸಂಗೀತವನ್ನು ಕೊಡುವ ಸಲುವಾಗಿ ಗೀತೆಯನ್ನು ಹಾಡುವ ಮಧ್ಯದಲ್ಲಿ ನಿಲ್ಲಿಸಿಬಿಡುತ್ತಾರೆ ಇದು ಆಗಬಾರದು,ಶಾಂತವಾಗಿ,ಸಮಾಧಾನವಾಗಿ 2.30 ನಿಮಿಷದಲ್ಲಿ ಇಡೀ ನಾಡಗೀತೆಯನ್ನು ಹಾಡಬಹುದು ಎಂದು ಹಾಡಿಸಿ ವೀಡಿಯೋ ಮಾಡಿ ಅದನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದರು.

ರಾಷ್ಟ್ರಗೀತೆ ಕೇವಲ 56 ಸೆಕೆಂಡ್ ಇದೆ ಆದರೆ ನಮ್ಮ ನಾಡಗೀತೆ ಈಗಿರುವ ರೀತಿ ನೋಡಿದರೆ 8-9 ನಿಮಿಷ ಆಗಲಿದೆ ಇದು ಬಹಳ ಸಮಯ ತೆಗೆದುಕೊಂಡಂತಾಗಲಿದೆ ಹಾಗಾಗಿ ಆದಷ್ಟು ಬೇಗ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಹಿಂದಿನ ಸಿಎಂ ಹೆಚ್,ಡಿ, ಕುಮಾರಸ್ವಾಮಿ, ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೆವು, ಆಗ
ಕುಮಾರಸ್ವಾಮಿ ಡಿಪಿಎಆರ್ ಗೆ ನಿರ್ದೇಶನ ನೀಡಿದ್ದರು ನಂತರ ಸರ್ಕಾರ ಬದಲಾಗಿದ್ದು ಆದೇಶ ಬಾಕಿ ಇದೆ, ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರಲಿದ್ದೇವೆ ಎಂದರು.

ಒಟ್ಟಿನಲ್ಲಿ ಸಂಘ ಸಂಸ್ಥೆ,ಶಾಲಾ-ಕಾಲೇಜು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಾಡಗೀತೆಯನ್ನು ಹಾಡುವ ಸಂಪ್ರದಾಯಕ್ಕೆ ಸಧ್ಯದಲ್ಲೇ ತೆರೆ ಬೀಳಲಿದೆ, ಅತಿ ಶೀಘ್ರದಲ್ಲೇ ಏಕರೂಪ ನಾಡಗೀತೆ ಹಾಡುವ ನಿಯಮ ಜಾರಿಗೆ ಬರಲಿದೆ.Body:.Conclusion:
Last Updated : Oct 31, 2019, 8:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.