ETV Bharat / state

ಮಿನಿ ಬಸ್​​ ಬ್ರೇಕ್​ ಫೇಲ್​ನಿಂದ ಸರಣಿ ಅಪಘಾತ; ಮೂವರಿಗೆ ಗಾಯ, ನಾಲ್ಕು ಬೈಕ್​ ಜಖಂ

ಮಿನಿ ಬಸ್​​ನ ಬ್ರೇಕ್ ಕೈಕೊಟ್ಟಿದ್ದರಿಂದ ಸರಣಿ ಅಪಘಾತಗಳು ಸಂಭವಿಸಿವೆ. ಮೂವರು ಗಮಭೀರವಾಗಿ ಗಾಯಗೊಂಡರೆ ರಸ್ತೆ ಬದಿ ನಿಂತಿದ್ದ ನಾಲ್ಕು ಬೈಕ್​​ಗಳು ಜಖಂಗೊಂಡಿವೆ.

author img

By

Published : Oct 31, 2020, 5:18 PM IST

Updated : Oct 31, 2020, 5:50 PM IST

Serial accident in Bangaluru
ವಿನಾಯಕ ಸರ್ಕಲ್​ನಲ್ಲಿ ಸಂಭವಿಸಿದ ಸರಣಿ ಅಪಘಾತ

ಬೆಂಗಳೂರು: ನಗರದಲ್ಲಿ ಇಂದು ಸರಣಿ ಅಪಘಾತ ಸಂಭವಿಸಿದೆ. ವೈಯಾಲಿಕಾವಲ್​ನ ವಿನಾಯಕ ಸರ್ಕಲ್​ನಲ್ಲಿ ಸಂಭವಿಸಿದ ಈ ಸರಣಿ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Serial accident in Bangaluru
ವಿನಾಯಕ ಸರ್ಕಲ್​ನಲ್ಲಿ ಸಂಭವಿಸಿದ ಸರಣಿ ಅಪಘಾತ

ಬ್ರೇಕ್​​ ಫೇಲ್​​ ಆಗಿದ್ದರಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದ ಮಿನಿ ಬಸ್​ ಹಲವು ಮಂದಿ ದಾರಿಹೋಕರಿಗೆ ಗುದ್ದಿದೆ. ಪರಿಣಾಮ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Serial accident in Bangaluru
ವಿನಾಯಕ ಸರ್ಕಲ್​ನಲ್ಲಿ ಸಂಭವಿಸಿದ ಸರಣಿ ಅಪಘಾತ

ಇದೇ ವೇಳೆ ರಸ್ತೆ ಬದಿ ನಿಂತಿದ್ದ ನಾಲ್ಕು ಬೈಕ್​​ಗಳು ಸಹ ಜಖಂಗೊಂಡಿವೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದುಕೊಂಡಿವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈಯಾಲಿಕಾವಲ್​​ನಿಂದ ವಿನಾಯಕ ಸರ್ಕಲ್ ಬಳಿ ಬರುತ್ತಿದ್ದಾಗ ಮಿನಿ ಬಸ್​​ನ ಬ್ರೇಕ್ ಕೈಕೊಟ್ಟಿದ್ದರಿಂದ ಈ ಸರಣಿ ಅಪಘಾತಗಳು ಸಂಭವಿಸಿವೆ ಎನ್ನಲಾಗುತ್ತಿದೆ.

Last Updated : Oct 31, 2020, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.