ETV Bharat / state

ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಪ್ರತ್ಯೇಕ ಸೌಲಭ್ಯಕ್ಕೆ ಸೂಚನೆ - ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಪ್ರತ್ಯೇಕ ಸೌಲಭ್ಯಕ್ಕೆ ಸೂಚನೆ

ಇದೇ ಮಾರ್ಚ್ 31ರೊಳಗಾಗಿ ಹಿರಿಯರ ನಾಗರಿಕರ ಮಾರ್ಗಸೂಚಿಗಳನ್ನು ಪ್ರದರ್ಶಿಸಿರುವ ಮತ್ತು ಅನುಷ್ಠಾನಗೊಳಿಸಿರುವ ಆರೋಗ್ಯ ಸಂಸ್ಥೆಗಳ ಪಟ್ಟಿಯನ್ನು ಆಯುಕ್ತಾಲಯಕ್ಕೆ ತಪ್ಪದೇ ಸಲ್ಲಿಸಬೇಕು ಎಂದು ಸರ್ಕಾರ ಆದೇಶಿಸಿದೆ.

Health Department Commissioner Randeep
ಆರೋಗ್ಯ ಇಲಾಖೆ ಆಯುಕ್ತ ರಂದೀಪ್
author img

By

Published : Mar 4, 2022, 8:32 PM IST

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆಯ ಮೇರೆಗೆ ಆರೋಗ್ಯ ಸೇವೆ ಒದಗಿಸಬೇಕು. ಹಾಗೆಯೇ, ಅವರಿಗಾಗಿ ಪ್ರತ್ಯೇಕ ಸೌಲಭ್ಯ ಕಲ್ಪಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

separate-facility-for-senior-citizens-in-government-hospitals
ಪ್ರತ್ಯೇಕ ಸೌಲಭ್ಯ ಕಲ್ಪಿಸುವ ಕುರಿತು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅಧಿಕಾರಿಗಳಿಗೆ ಸೂಚನೆ

ಈ ಸಂಬಂಧ ಆದೇಶ ಹೊರಡಿಸಲಾಗಿದ್ದು ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಮತ್ತು ಪಾರ್ಶ್ವವಾಯು ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರ ವೈದ್ಯಕೀಯ ಅಗತ್ಯತೆಗಳನ್ನು ಆದ್ಯತೆಯ ಮೇರೆಗೆ ಪೂರೈಸುವಂತೆ ತಿಳಿಸಲಾಗಿದೆ.‌

ಮನೆ ಮಟ್ಟದಲ್ಲಿ ಆರೈಕೆ: ಹಾಸಿಗೆ ಹಿಡಿದಿರುವ ರೋಗಪೀಡಿತ ಅಥವಾ ಜರ್ಜರಿತ ಹಿರಿಯ ನಾಗರಿಕರಿಗೆ ಮನೆ ಮಟ್ಟದಲ್ಲಿಯೇ ಅಗತ್ಯ ವೈದ್ಯಕೀಯ ಆರೈಕೆಗೆ ವ್ಯವಸ್ಥೆಗೊಳಿಸಬೇಕು. ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರು/ಎನ್.ಸಿ.ಡಿ ಘಟಕದ ವೈದ್ಯರು, ಶುಶ್ರೂಶಕರು, ಭೌತಿಕ ಚಿಕಿತ್ಸಕರು ಮತ್ತು ಸಮಾಲೋಚಕರು ಹಿರಿಯರ ಮನೆಗೆ ಭೇಟಿ ನೀಡಿ ವೈದ್ಯಕೀಯ ಆರೈಕೆ ಅಗತ್ಯಗಳನ್ನು ಮನಗಾಣಬೇಕು ಎಂದು ಸೂಚಿಸಿದ್ದಾರೆ.

ಹಿರಿಯರಿಗೆ ಮತ್ತು ಅವರನ್ನು ಆರೈಕೆ ಮಾಡುತ್ತಿರುವ ಮನೆಯ ಸದಸ್ಯರಿಗೆ ಹಾಸಿಗೆ ಹುಣ್ಣು (Bedsore) ಆಗದಂತೆ ನೋವು, ಶಮನ ಔಷಧಿ ನೀಡುವ ಬಗ್ಗೆ ಮತ್ತು ವೈದ್ಯಕೀಯ ಪರಿಸ್ಥಿತಿಗೆ ಅನುಸಾರವಾಗಿ ಮಾಹಿತಿ ಮತ್ತು ತರಬೇತಿ ನೀಡಬೇಕು ಎಂದಿದ್ದಾರೆ.

ಎಲ್ಲಾ ಆರೋಗ್ಯ ಸಂಸ್ಥೆಗಳ ಮಟ್ಟದಲ್ಲಿ 'ಹಿರಿಯ ನಾಗರೀಕರಿಗೆ ಆದ್ಯತೆಯ ಮೇರೆಗೆ ಸೇವೆಗಳನ್ನು ಒದಗಿಸಲಾಗುವುದು. ಹಿರಿಯ ನಾಗರೀಕರ ಸರತಿ ಸಾಲು' ಎಂಬ ನಾಮಫಲಕಗಳನ್ನು ಆಯ್ಕೆ ಸ್ಥಳಗಳಲ್ಲಿ ಪ್ರದರ್ಶಿಸಬೇಕು.

ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರ ಮಟ್ಟದಲ್ಲಿ ಅನುಷ್ಠಾನಗೊಳಿಸಿರುವ ಬಗ್ಗೆ, ಹಿರಿಯ ನಾಗರೀಕರನ್ನು ವಿಶೇಷವಾಗಿ ಪರಿಗಣಿಸಿ ಆರೈಕೆ ನೀಡುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಪರಿಶೀಲಿಸಬೇಕು.

ಇದೇ ಮಾರ್ಚ್ 31ರೊಳಗಾಗಿ ಹಿರಿಯರ ನಾಗರೀಕರ ಮಾರ್ಗಸೂಚಿಗಳನ್ನು ಪ್ರದರ್ಶಿಸಿರುವ ಮತ್ತು ಅನುಷ್ಠಾನಗೊಳಿಸಿರುವ ಆರೋಗ್ಯ ಸಂಸ್ಥೆಗಳ ಪಟ್ಟಿಯನ್ನು (With Photos) ಆಯುಕ್ತಾಲಯಕ್ಕೆ ತಪ್ಪದೇ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ: ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ: ಇಬ್ಬರ ರಕ್ಷಣೆ, ಸಾವಿನ ಬಗ್ಗೆ ಸಿಗದ ನಿಖರ ಮಾಹಿತಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.