ಬೆಂಗಳೂರು: ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಹಿರಿಯ ನಿರ್ದೇಶಕ ಭಗವಾನ್ ಭೇಟಿ ನೀಡಿ ನಮಿಸಿದರು. ಈ ವೇಳೆ, ಭಾವುಕರಾದ ಅವರು, ಅಪ್ಪು ನಾಡಿನ ಜನತೆಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ನಿನ್ನೆ ದಿನ ಗಂಧದಗುಡಿ ಚಿತ್ರದ ಬಿಡುಗಡೆಯಾಗಿದೆ. ಗಂಧದಗುಡಿ ಚಿತ್ರದ ಮೂಲಕ ನಾಡಿನ ಜನತೆ ಒಳಿತು ಮಾಡಿದ್ದಾರೆ. ಅಪ್ಪು ಅಮರ ಅಜಾರಮರ, ನಾಡಿನ ಜನತೆಗೆ ಪ್ರೇರೇಪಣೆ ಆಗಿದ್ದಾರೆ ಎಂದರು.
ಇದೇ ವೇಳೆ ಅಪ್ಪು ಸಮಾಧಿಯ ಬಳಿ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ಹೇಳಿಕೆ ನೀಡಿದ್ದು, ಅಪ್ಪು ಅಭಿಮಾನಿಗಳು ಯಾವುದೇ ರೀತಿಯ ಗಲಾಟೆ ಮಾಡಲ್ಲ. ಇದುವರೆಗೂ 50 ಸಾವಿರಕ್ಕಿಂತ ಹೆಚ್ಚು ಅಭಿಮಾನಿಗಳು ಸಮಾಧಿ ದರ್ಶನ ಪಡೆದಿದ್ದಾರೆ ಎಂದರು.
ಪುನೀತ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಗೆ ಹರಿದು ಬರುತ್ತಿದೆ. ಅಪ್ಪು ಸಮಾಧಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಸಮಾಧಿ ಪೂರ್ತಿ ಹಸಿರು ಶ್ವೇತಾಂಬರಿ ವರ್ಣದ ಹೂಗಳಿಂದ ಸಿಂಗಾರಗೊಂಡಿದೆ.
ಇದನ್ನೂ ಓದಿ: ನನ್ನ ಪಾಲಿಗೆ ಅಪ್ಪು ದೇವರು: ಪುನೀತ್ ಬಾಡಿ ಗಾರ್ಡ್ ಚಲಪತಿ ಜತೆ ಈ ಟಿವಿ ಭಾರತ ಚಿಟ್ಚಾಟ್