ಬೆಂಗಳೂರು: ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ನ ಹೆಸರಿನಡಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರುತ್ತಿದ್ದ ವ್ಯಾಪಾರಸ್ಥರ ಅಂಗಡಿ, ಗೋದಾಮುಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಾಲು ವಶಕ್ಕೆ ಪಡೆದಿದ್ದಾರೆ. ಅರ್ಮಾನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಹೆಸರಾಂತ ಕಂಪನಿಗಳ ಬಟ್ಟೆ ಎಂದು ಗ್ರಾಹಕರನ್ನು ನಂಬಿಸುತ್ತಿದ್ದ ಆರೋಪಿಗಳು ಅಕ್ರಮ ಮಾರಾಟದಲ್ಲಿ ತೊಡಗಿದ್ದರು.
ಈ ಕುರಿತ ಖಚಿತ ಮಾಹಿತಿ ಮೇರೆಗೆ ಬೊಮ್ಮನಹಳ್ಳಿಯ ಪಟೇಲ್ ಎಕ್ಸ್‌ಪರ್ಟ್ ಹಾಗೂ ಆರ್‌ಬಿ ಫ್ಯಾಷನ್ ಗೋಡೌನ್‌ಗಳ ಮೇಲೆ ದಾಳಿ ಮಾಡಿದ ಸಿಸಿಬಿ, 1.5 ಕೋಟಿ ರೂಪಾಯಿ ಮೌಲ್ಯದ ನಕಲಿ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆಯ ವೇಳೆ ಎಸ್.ಆರ್.ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಗೋದಾಮುಗಳಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ ಹೆಸರಿನಡಿ ನಕಲಿ ಬಟ್ಟೆಗಳನ್ನು ಸಿದ್ಧಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ: ಎಫ್ಡಿಎ ಪರೀಕ್ಷಾ ಅಕ್ರಮ: ಕಲಬುರಗಿಯಲ್ಲಿ ಇಬ್ಬರು ಪ್ರಾಂಶುಪಾಲರ ಬಂಧನ