ETV Bharat / state

ಆಳುವ ಸರ್ಕಾರಗಳಿಂದ ದೇಶದ್ರೋಹ ಕಾನೂನು ದುರ್ಬಳಕೆ : ನ್ಯಾ. ನಾಗಮೋಹನ್ ದಾಸ್ - ದೇಶದ್ರೋಹ ಕಾನೂನು ದುರ್ಬಳಕೆ ಬಗ್ಗೆ ನ್ಯಾ. ನಾಗಮೋಹನ್ ದಾಸ್​ ಮಾತು

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ್ರೋಹ ಕಾನೂನಿನ ಅಡಿ ಹತ್ತಿಕ್ಕುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದ ನ್ಯಾ. ನಾಗಮೋಹನ್ ದಾಸ್ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಕಾನೂನು ಬಳಕೆಯಾಗಿದ್ದಕ್ಕಿಂತ ದುರ್ಬಳಕೆಯಾಗಿರುವುದೇ ಹೆಚ್ಚಾಗಿದೆ ಎಂದರು.

sedition-law-is-misusing-by-governments-n-nagamohan-das
ಆಳುವ ಸರ್ಕಾರಗಳಿಂದ ದೇಶದ್ರೋಹ ಕಾನೂನು ದುರ್ಬಳಕೆ
author img

By

Published : Jun 8, 2021, 3:39 AM IST

ಬೆಂಗಳೂರು : ಆಳುವ ಸರ್ಕಾರಗಳಿಂದ ದೇಶದ್ರೋಹ ಕಾನೂನು ದುರ್ಬಳಕೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸುವ ಅಗತ್ಯವಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ 'ದೇಶದ್ರೋಹ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವಿನ ಸಂಘರ್ಷ' ವೆಬಿನಾರ್ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ್ರೋಹ ಕಾನೂನಿನ ಅಡಿ ಹತ್ತಿಕ್ಕುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದ ನ್ಯಾ. ನಾಗಮೋಹನ್ ದಾಸ್ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಕಾನೂನು ಬಳಕೆಯಾಗಿದ್ದಕ್ಕಿಂತ ದುರ್ಬಳಕೆಯಾಗಿರುವುದೇ ಹೆಚ್ಚಾಗಿದೆ. ತಮ್ಮ ಮಾತಿಗೆ ಉದಾಹರಣೆ ನೀಡಿದ ನ್ಯಾಯಮೂರ್ತಿಗಳು, ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ 9 ಸಾವಿರ ಮಂದಿ ವಿರುದ್ಧ, ಕೃಷಿ ಕಾಯ್ದೆ ವಿರೋಧಿಸಿದ 3,300 ರೈತರ ವಿರುದ್ಧ, ಕೋವಿಡ್‌ ನಿರ್ವಹಣೆ ವೈಫಲ್ಯ ಎತ್ತಿ ತೋರಿದ 55 ಪತ್ರಕರ್ತರ ವಿರುದ್ಧ, ಉತ್ತರ ಪ್ರದೇಶದ ಹಾಥ್‌ ರಸ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದ 22 ಹೋರಾಟಗಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಅಲ್ಲದೇ, ಕಳೆದ ವರ್ಷ ಏಕಾಏಕಿ ಲಾಕ್​ಡೌನ್‌ ಜಾರಿ ಮಾಡಿದ ಪ್ರಧಾನ ಮಂತ್ರಿ ನಿರ್ಧಾರ ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ವಿನೋದ್‌ ದುವಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ರದ್ದು ಮಾಡುವ ಮೂಲಕ ದೇಶಕ್ಕೆ ಉತ್ತಮ ಸಂದೇಶ ನೀಡಿದೆ. ಆದರೆ, ದೇಶದ್ರೋಹ ಕಾನೂನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೂ ರಾಷ್ಟ್ರದ್ರೋಹ ಕಾನೂನನ್ನು ರದ್ದುಪಡಿಸುವ ಉತ್ತಮ ಅವಕಾಶವನ್ನು ಸುಪ್ರೀಂಕೋರ್ಟ್‌ ಕಳೆದುಕೊಂಡಿದೆ ಎಂದರು.

ಹಾಗೆಯೇ, ದೇಶದಲ್ಲಿ ಈ ಕಾನೂನು ಜಾರಿಗೆ ತಂದ ಇಂಗ್ಲೆಂಡ್‌ ಸೇರಿದಂತೆ ಅಮೆರಿಕ, ನ್ಯೂಜಿಲೆಂಡ್‌ ಮತ್ತಿತರೆ ದೇಶಗಳು ತಮ್ಮಲ್ಲಿದ್ದ ದೇಶದ್ರೋಹ ಕಾನೂನು ರದ್ದು ಮಾಡಿವೆ. ಇದೇ ನಿರ್ಧಾರ ನಮ್ಮ ದೇಶದಲ್ಲೂ ತೆಗೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಅಮೆಜಾನ್​ ಸಂಸ್ಥಾಪಕ ಜೆಫ್ ಬೆಜೋಸ್..! ಏನಿದು ಮಹಾ ಸಾಹಸ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.