ETV Bharat / state

ಸೆಕ್ಯೂರಿಟಿ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು: ಕಳ್ಳನೆಂದು ಭಾವಿಸಿ ಬ್ಯಾಂಕ್​ ಉದ್ಯೋಗಿಯ ಕೊಲೆ - ಕಳ್ಳನೆಂದು ಭಾವಿಸಿ ಬ್ಯಾಂಕ್​ ಉದ್ಯೋಗಿಯ ಕೊಲೆ

ಕುಡಿದ ನಶೆಯಲ್ಲಿ ಅಪಾರ್ಟ್​​ಮೆಂಟ್​ಗೆ ನುಗ್ಗಿದ ಅಪಚಿತ ವ್ಯಕ್ತಿ- ಆತನ ನಡವಳಿಕೆ ಕಂಡು ಕಳ್ಳ ಎಂದು ಭಾವಿಸಿದ ಸೆಕ್ಯೂರಿಟಿ- ರಾಡ್​ನಿಂದ ಹೊಡೆದು ಕೊಲೆ

security-guard-killed-a-bank-employee-after-he-suspicion-of-thieving-in-bengaluru
ಸೆಕ್ಯುರಿಟಿ ಗಾರ್ಡ್​ನ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು: ಕಳ್ಳನೆಂದು ಭಾವಿಸಿ ಬ್ಯಾಂಕ್​ ಉದ್ಯೋಗಿಯ ಕೊಲೆ
author img

By

Published : Jul 10, 2022, 4:24 PM IST

ಬೆಂಗಳೂರು: ತನ್ನ ಕರ್ತವ್ಯದ ನಿಯತ್ತೇ ಸೆಕ್ಯೂರಿಟಿ ಗಾರ್ಡ್​ಗೆ ಮುಳುವಾಗಿದೆ. ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್​ಮೆಂಟ್​ಗೆ ಕಳ್ಳ ಬಂದಿದ್ದಾನೆ ಎಂದು ಭಾವಿಸಿ ರಾಡ್​ನಿಂದ ಹೊಡೆದು ಬ್ಯಾಂಕ್ ಉದ್ಯೋಗಿಯ ಸಾವಿಗೆ ಕಾರಣನಾಗಿದ್ದಾರೆ. ಇಲ್ಲಿನ ಹೆಚ್​ಎಎಲ್​ನ ಆನಂದ ನಗರದ ವಂಶಿ ಸಿಟಾಡೆಲ್ ಅಪಾರ್ಟ್​ಮೆಂಟ್​ನಲ್ಲಿ ಈ ಪ್ರಕರಣ ನಡೆದಿದೆ.

ಅಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಶ್ಯಾಮನಾಥ್ ಹಾಗೂ ಸ್ನೇಹಿತ ಅಜೀತ್ ಮುರಾ ಎಂಬುವವರು ಕೊಲೆ ಪ್ರಕರಣದಲ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಸೆಕ್ಯೂರಿಟಿ ಗಾರ್ಡ್​ನ ನಿಯತ್ತು, ವ್ಯಕ್ತಿಯ ಜೀವಕ್ಕೆ ಕುತ್ತು: ಕಳ್ಳನೆಂದು ಭಾವಿಸಿ ಬ್ಯಾಂಕ್​ ಉದ್ಯೋಗಿಯ ಕೊಲೆ

ಏನಿದು ಘಟನೆ?: ಹಲವು ವರ್ಷಗಳಿಂದ‌ ಅಪಾರ್ಟ್​ಮೆಂಟ್​ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಶ್ಯಾಮನಾಥ್​ ಕೆಲಸ ಮಾಡುತ್ತಿದ್ದರು. ಇದೇ ಜುಲೈ 5ರಂದು ಮಧ್ಯರಾತ್ರಿ ಅಪರಿಚಿತ ವ್ಯಕ್ತಿ ಗೋಡೆ ಹಾರಿ ಪ್ರವೇಶಿಸಿದ್ದರು.‌ ಇದನ್ನು ಗಮನಿಸಿ ಕಾರ್ಯಪ್ರವೃತ್ತರಾದ ಶ್ಯಾಮನಾಥ್ ಹತ್ತಿರಕ್ಕೆ ಹೋಗಿ ಪ್ರಶ್ನಿಸಿದ್ದಾರೆ. ಆದರೆ, ಮದ್ಯದ ನಶೆಯಲ್ಲಿದ್ದ ಆ ವ್ಯಕ್ತಿ ಸೆಕ್ಯೂರಿಟಿ ಗಾರ್ಡ್ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಲ್ಲ.

ಅಲ್ಲದೇ, ಹಾಗೆಯೇ ಮನೆಗೆ‌ ನುಗ್ಗಲು ಪ್ರಯತ್ನಿಸಿದ್ದ. ಈತನ ನಡವಳಿಕೆ ಕಂಡು ಕಳ್ಳ ಎಂದು ಮನಗಂಡು ಶ್ಯಾಮನಾಥ್ ರಾಡ್​ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದಕ್ಕೆ ಅಜೀತ್ ಸಹ ಸಾಥ್ ನೀಡಿದ್ದರು. ರಾಡ್​ನಿಂದ ಹೊಡೆದ ಏಟಿಗೆ ಸ್ಥಳದಲ್ಲೇ ಕುಸಿದ್ದು ಬಿದ್ದು, ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದರ ಮಾಹಿತಿ ಅರಿತು ಪೊಲೀಸರು ಸ್ಥಳ ಪರಿಶೀಲಿಸಿ ಪ್ರಶ್ನಿಸಿದಾಗ ಕೆಲಸ ಹೋಗುವ ಭೀತಿಯಿಂದ ಹೊಡೆದಿರುವುದಾಗಿ ಎಂದು ಶ್ಯಾಮನಾಥ್ ಹೇಳಿದ್ದಾರೆ.

ಬಂಧಿತ  ಸೆಕ್ಯೂರಿಟಿ ಗಾರ್ಡ್ ಶ್ಯಾಮನಾಥ್ ಹಾಗೂ ಅಜೀತ್

ಕಳ್ಳ ಅಲ್ಲ, ಬ್ಯಾಂಕ್​ ಉದ್ಯೋಗಿ: ಕೊಲೆಯಾದ ಅಪರಿಚಿತನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಈತನ ಹಿನ್ನೆಲೆ ಬಗ್ಗೆ ತನಿಖೆ ನಡೆಸಿದ್ದಾರೆ. ಆಗ ಒಡಿಶಾ ಮೂಲದ ಈತ ಬ್ಯಾಂಕ್​ವೊಂದರ ಸಿಬ್ಬಂದಿಯಾಗಿದ್ದು, ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದರು. ಬಂದ ಮೊದಲ ದಿನವೇ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದರು. ಕುಡಿದ ನಶೆಯಲ್ಲೇ‌ ಸ್ನೇಹಿತನ ಮನೆ ವಿಳಾಸ ತಪ್ಪಿತ್ತು.

ಅಲ್ಲದೇ. ಮೊಬೈಲ್​ ಸ್ವಿಚ್​ ಆಫ್ ಅಗಿದ್ದರಿಂದ ದಾರಿ ತಪ್ಪಿ ತಾವು ವಾಸವಾಗಿರುವ ಅಪಾರ್ಟ್​ಮೆಂಟ್ ಎಂದು ಭಾವಿಸಿ ಎಂಟ್ರಿ ಕೊಟ್ಟಿದ್ದರು. ಅಪಾರ್ಟ್​ಮೆಂಟ್​ಗೆ ಈತ ಕಳ್ಳತನಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾವುಗಳ ಕಾಟ: ಸಾರ್ವಜನಿಕರು ಎಚ್ಚರದಿಂದಿರಲು ಪಾಲಿಕೆ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.