ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಡಿಲವಾದ ಮೇಲೆ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಸಂಚಾರ ದಟ್ಟಣೆ ಮತ್ತೆ ಜಾಸ್ತಿ ಆಗಿದೆ. ಈ ನಡುವೆ ಅಪಾಯಕಾರಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಂದು ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತರಾದ ರವಿಕಾಂತೇಗೌಡ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ನಮ್ಮ ಉದ್ದೇಶ ಕೇವಲ ದಂಡವನ್ನು ಸಂಗ್ರಹ ಮಾಡುವುದಲ್ಲ. ರಸ್ತೆ ಸುರಕ್ಷತೆ ಇಲ್ಲಿ ಅತೀ ಮುಖ್ಯವಾಗಿದ್ದು, ಉಲ್ಲಂಘನೆ ಮಾಡುವವರು ನೋಟಿಸ್ ಗಳಿಗೂ ಗಮನಹರಿಸುತ್ತಿರಲಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಚುರುಕು ಮುಟ್ಟಿಸಲು ಮುಚ್ಚಳಿಕೆ ಕಡ್ಡಾಯ ಮಾಡುವುದಾಗಿ ತಿಳಿಸಿದರು.
ಈ ರೀತಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರೇ ಹೆಚ್ಚು ಅಫಘಾತಗಳಿಗೆ ಕಾರಣರಾಗಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ಅಗತ್ಯವಾಗಿರುವುದಾಗಿ ತಿಳಿಸಿದರು.