ಬೆಂಗಳೂರು: ಹೈದ್ರಾಬಾದ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅಸಾದುದ್ದೀನ್ ಓವೈಸಿ ಇಂದು ನಗರದಲ್ಲಿ ಪೌರತ್ವ ಕಾಯ್ದೆ ಪ್ರತಿಭಟನೆಗೆ ಆಗಮಿಸುವ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದರ ಕುರಿತು ಮಾತಾನಾಡಿದ್ದಾರೆ.
ಇಂದು ಓವೈಸಿ ನಗರಕ್ಕೆ ಆಗಮಿಸುವ ಕಾರಣ ಫ್ರೀಡಂ ಪಾರ್ಕ್ ಸುತ್ತ ಭದ್ರತೆ ವಹಿಸಲಾಗಿದೆ. ಪೌರತ್ವ ಕುರಿತು ಅಥವಾ ಬೇರೆ ವಿಚಾರಗಳನ್ನ ನಾವು ಅವರಿಗೆ ಮಾತನಾಡಬೇಡಿ ಎಂದು ಹೇಳೋಕಾಗಲ್ಲ. ಅವರು ಸಂಸದರು ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ವಾಕ್ ಸ್ವಾತಂತ್ರ್ಯದ ಜೊತೆಗೆ ಜವಬ್ದಾರಿಯೂ ಇರಬೇಕು ಎಂದರು.
ಅಲ್ಲದೇ ಪ್ರತಿಭಟನೆ ವೇಳೆ ಯಾವುದಾದರೂ ಪ್ರಚೋದನಾತ್ಮಕ ಘಟನೆ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಇದೆ. ಆ ಪ್ರಕಾರ ನಡೆದುಕೊಳ್ಳಬೇಕು. ಈಗಾಗಲೆ ಆಯೋಜಕರಿಗೆ ಒಂದಷ್ಟು ಸೂಚನೆಯನ್ನ ನೀಡಿದ್ದೇವೆ. ಪ್ರತಿಭಟನೆಗೆ ನಾವು ಪೊಲೀಸ್ ಭದ್ರತೆಯನ್ನ ನೀಡಿದ್ದೇವೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.