ಬೆಂಗಳೂರು: ಜಿಕೆವಿಕೆ ವಿಶ್ವವಿದ್ಯಾಲಯ ಆಯೋಜಿಸಿರುವ ಸೈನ್ಸ್ ಕಾಂಗ್ರೆಸ್ ವಿಜ್ಞಾನ ಮೇಳವನ್ನು ಉದ್ಘಾಟನೆ ಮಾಡಲು ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಜನವರಿ ಮೂರರಿಂದ ಏಳನೇ ತಾರೀಖಿನ ವರೆಗೆ ನಡೆಯಲಿರುವ ವಿಜ್ಞಾನ ಮೇಳದಲ್ಲಿ ದೇಶವಿದೇಶಗಳ ವಿಜ್ಞಾನಿಗಳು, ಸಂಶೋಧಕರು, ನೊಬೆಲ್ ಪುರಸ್ಕೃತರು ಭಾಗಿಯಾಗಲಿದ್ದಾರೆ. ಈ ಸಮಾವೇಶದ ಉದ್ಘಾಟನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಬೆಂಗಳೂರಿನಲ್ಲಿ ಮಾನವ ರಹಿತ ಏರಿಯಲ್ ಸಿಸ್ಟಮ್ಸ್ ಗಳಿಗೆ ನಿಷೇಧವನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೇರಿದ್ದಾರೆ. ಇದೇ ಜನವರಿ 2 ಹಾಗೂ 3 ರಂದು ಮಾನವ ರಹಿತ ಡ್ರೋನ್ ಕ್ಯಾಮೆರಾ, ಬಲೂನ್ಸ್, ಏರ್ ಕ್ರಾಫ್ಟ್ ಸಿಸ್ಟಮ್ , ಗುಂಪು ಸೇರುವುದನ್ನ ತಡೆಯಲು ಸೆಕ್ಷನ್ 144 ಅಡಿ ನಿಷೇಧ ಮಾಡಲಾಗಿದೆ.