ETV Bharat / state

ಹೊಸ ವರ್ಷದ ನೆಪದಲ್ಲಿ ಜನಜಂಗುಳಿ‌ ತಡೆಗೆ ಸೆಕ್ಷನ್ 144 ಜಾರಿ: ಬೊಮ್ಮಾಯಿ ಸ್ಪಷ್ಟನೆ - ಸೆಕ್ಷನ್ 144

ಹೊಸ ವರ್ಷಾಚರಣೆ ಸಂಭ್ರಮದ ನೆಪದಲ್ಲಿ ಜನರು ಅನೇಕ ಪಾರ್ಟಿಗಳಲ್ಲಿ ತೊಡಗಿಕೊಳ್ಳಲಿದ್ದು, ಈ ವೇಳೆ ಬ್ರಿಟನ್​​ನ ರೂಪಾಂತರ ಕೊರೊನಾ ವೈರಸ್ ಹಬ್ಬುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

Bommayi
ಬಸವರಾಜ್​ ಬೊಮ್ಮಾಯಿ ಹೇಳಿಕೆ
author img

By

Published : Dec 31, 2020, 1:54 PM IST

Updated : Dec 31, 2020, 2:05 PM IST

ಬೆಂಗಳೂರು: ಕೊರೊನಾ ರೂಪಾಂತರಿ ವೈರಸ್ ಹರಡುವ ಭೀತಿ ಹಿನ್ನೆಲೆ, ಸಾಮೂಹಿಕ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದ್ದು, ಜನ ಸೇರುವುದನ್ನು ತಪ್ಪಿಸುವ ಸಲುವಾಗಿ ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಮೂವರಿಗೆ ಬ್ರಿಟನ್​​ನ ರೂಪಾಂತರ ವೈರಸ್ ಪಾಸಿಟಿವ್ ಬಂದಿದೆ. ಅದು ವೇಗವಾಗಿ ಹರಡುವ ಕಾರಣ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ, ಹೊಸ ವರ್ಷಾಚರಣೆ ನೆಪದಲ್ಲಿ ಜನ ಸೇರಿದಲ್ಲಿ ವೈರಾಣು ಅತಿ ವೇಗದಲ್ಲಿ ಹಬ್ಬಲು ಸಹಕಾರಿಯಾಗಲಿದೆ. ಈ ಕಾರಣದಿಂದಾಗಿ ಈಗಾಗಲೇ ನಗರದಲ್ಲಿ 144 ಸೆಕ್ಷನ್ ಜಾರಿ ಆದೇಶ ಮಾಡಿದ್ದು, ಇಂದು ಮಧ್ಯಾಹ್ನದಿಂದಲೇ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ 144 ಸೆಕ್ಷೆನ್ ​​ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಬಸವರಾಜ್​ ಬೊಮ್ಮಾಯಿ ಹೇಳಿಕೆ

ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾನಗರ, ಬ್ರಿಗೇಡ್ ರಸ್ತೆಯಲ್ಲಿ ಹೆಚ್ಚು ಜನ ಸೇರುತ್ತಾರೆ. ಹೀಗಾಗಿ ಜನರ ಓಡಾಟ ತಪ್ಪಿಸಲು ಇಂದು ಮಧ್ಯಾಹ್ನ 12 ಗಂಟೆಯಿಂದ ಎಲ್ಲ ಕಡೆಯೂ ನಿಷೇಧಾಜ್ಞೆ ಜಾರಿ ಇರುತ್ತದೆ ಎಂದರು.

ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿಯನ್ನು ಪಡೆಯುತ್ತೇವೆ, ಈವರೆಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ತನಿಖೆ ಮುಗಿದ‌ ಬಳಿಕ ಸತ್ಯಾಂಶ ಹೊರಬರಲಿದೆ. ಸ್ವತಂತ್ರ ತನಿಖೆ ಆಗಬೇಕು ಎನ್ನುವ ಲೋಕಸಭಾ ಸ್ಪೀಕರ್ ಅಭಿಪ್ರಾಯ ಕೂಡ ಗಮನದಲ್ಲಿದೆ ಎಂದರು.

Last Updated : Dec 31, 2020, 2:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.