ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಹೆಚ್ಚಾಗಿ ಇರುವ ಪ್ರದೇಶವನ್ನು ಈಗಾಗ್ಲೇ ಬಿಬಿಎಂಪಿ ಹಾಗು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಸೀಲ್ ಡೌನ್ ಮಾಡಿದೆ. ಪಾದರಾಯನಪುರ ಹಾಗೂ ಬಾಪುಜಿನಗರ ವಾರ್ಡ್ ಸಂಪೂರ್ಣವಾಗಿ ಸೀಲ್ ಡೌನ್ ಇದ್ದರೂ ಜನ ಮಾತ್ರ ಅನಗತ್ಯವಾಗಿ ಓಡಾಡುತ್ತಿದ್ದು, ಅವರ ಮೇಲೆ ಕಣ್ಣಿಡಲು ಪೊಲೀಸರು ಮುಂದಾಗಿದ್ದಾರೆ.
ನಗರದ ಎಲ್ಲಾ ಡೇಂಜರ್ ಜೋನ್ ಏರಿಯಾಗಳಲ್ಲಿ ಹೊಸದಾಗಿ ಸಿಸಿಟಿವಿಗಳನ್ನು ಪೊಲೀಸರು ಅಳವಡಿಸಿ ಅನಗತ್ಯವಾಗಿ ಓಡಾಡುವವರನ್ನು ಹಾಗೂ ಅನಧಿಕೃತ ವಾಹನಗಳನ್ನು ಪತ್ತೆ ಮಾಡಿ ಕೇಸ್ ದಾಖಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಭಯದ ವಾತಾವರಣ: ಪಾದರಾಯನಪುರ ಹಾಗೂ ಬಾಪುಜಿನಗರ ವಾರ್ಡ್ ನಲ್ಲಿ ಹೆಚ್ಚಾಗಿ ಸೋಂಕಿತರು ಕಂಡು ಬಂದ ಕಾರಣ ಸೀಲ್ಡೌನ್ ಮಾಡಲಾಗಿದ್ದು ಪೊಲೀಸರು ಭಯದ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಜನರು ರಾಜಾರೋಷವಾಗಿ ಓಡಾಟ ಮಾಡುವಾಗ ಯಾರಿಗೆ ಸೋಂಕು ಇದೆ ಅನ್ನೋ ಆತಂಕ ಪೊಲೀಸರಲ್ಲಿದೆ ಕೆಲವರಂತೂ ಮಾಸ್ಕ್ ಧರಿಸದೇ ಓಡಾಟ ಮಾಡ್ತಿದ್ದಾರೆ. ಸದ್ಯ ಅನಗತ್ಯವಾಗಿ ಓಡಾಟ ಮಾಡುವವರ ಮೇಲೆ ಖಾಕಿ ಸಂಪೂರ್ಣವಾಗಿ ಕಣ್ಗಾವಲು ಇಟ್ಟು ಪರಿಶೀಲನೆ ನಡೆಸ್ತಿದ್ದಾರೆ.