ಬೆಂಗಳೂರು: ಉತ್ತರಪ್ರದೇಶದ ಹಥ್ರಾಸ್ನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪಕ್ಷದ ಕಾರ್ಯಕರ್ತರು ನಗರದ ಮೈಸೂರು ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು.
ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಜ್ ಮಹಮ್ಮದ್ ತುಂಬೆ ಮಾತನಾಡಿ, ದೇಶದಲ್ಲಿ ಅಭಿವೃದ್ಧಿಗಾಗಿ ಬೀದಿಗೆ ಬರುವ ಬದಲಾಗಿ ನಮ್ಮ ಹೆಣ್ಣು ಮಕ್ಕಳ ಮಾನ ಉಳಿಸಿ ಎಂದು ಕೇಳಲು ಬೀದಿಗೆ ಬರುವಂತಾಗಿದೆ. ಉತ್ತರಪ್ರದೇಶ ಅತ್ಯಾಚಾರ-ಹತ್ಯೆಗಳ ಕೇಂದ್ರವಾಗಿದೆ. ಪ್ರಾಣಿಗಳನ್ನು ಕೊಂದು ತಿಂದ ಹಾಗೆ ದಲಿತ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ ಎಂದರು.
ನ್ಯಾಷನಲ್ ಕ್ರೈಂ ರೆಕಾರ್ಡ್ ಪ್ರಕಾರ ಉತ್ತರಪ್ರದೇಶದಲ್ಲಿ 2018ರಲ್ಲಿ 37,000 ಅತ್ಯಾಚಾರ ನಡೆದಿದೆ. ಸಂಘ ಪರಿವಾರದ ಕಾರ್ಯಕರ್ತರಿಗೆ, ಬಿಜೆಪಿಯವರಿಗೆ, ಯೋಗಿಯ ಹಿಂಬಾಲಕರಿಗೆ ರೇಪ್ ಮಾಡುವುದು, ಕೊಲೆ ಮಾಡುವುದು ಮಾತ್ರ ಕೆಲಸವಾ ಎಂದು ಪ್ರಶ್ನಿಸಿದರು.
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗುವ ಮೊದಲು ಕೂಡ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಉತ್ತರಪ್ರದೇಶದ ಸಿಎಂ ಮೇಲೆ 18 ಕ್ರಿಮಿನಲ್ ಕೇಸ್ಗಳಿವೆ. ಆದರೂ ಶಿಕ್ಷೆ ಸಿಗುತ್ತಿಲ್ಲ. ಸಿಎಂ ಆಗಿ ಅಧಿಕಾರ ಚಲಾಯಿಸ್ತಿದಾರೆ ಎಂದು ಆರೋಪಿಸಿದರು.