ETV Bharat / state

ಕಷ್ಟ ಪಟ್ಟು ಖರೀದಿಸಿದ್ದ ಸ್ಕೂಟರ್ ಕಳ್ಳನ ಪಾಲು: ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ - ಉತ್ತರ ಭಾರತ ಮೂಲದ ವಿಕ್ರಮ್ ಸಿಂಗ್

2 ವರ್ಷಗಳ ಕಾಲ ಕೆಲಸ ಮಾಡಿ, ಅದರಲ್ಲಿ ಉಳಿಸಿದ್ದ ಅಲ್ಪಸ್ವಲ್ಪ ಹಣದಿಂದ ವ್ಯಕ್ತಿಯೋರ್ವ ಆ್ಯಕ್ಟಿವಾ ಹೋಂಡಾ ಸ್ಕೂಟರ್​ನ್ನು ಖರೀದಿಸಿದ್ದರು. ಹೀಗೆ ಕಷ್ಟಪಟ್ಟು ಜೀವನದಲ್ಲಿ ಮೊದಲ ಬಾರಿ ಖರೀದಿಸಿದ್ದ ಸ್ಕೂಟರ್ ಸದ್ಯ ಕಳ್ಳನ ಪಾಲಾಗಿದೆ.

Bangalore
ಉತ್ತರ ಭಾರತ ಮೂಲದ ವಿಕ್ರಮ್ ಸಿಂಗ್
author img

By

Published : Aug 2, 2020, 10:06 AM IST

ಬೆಂಗಳೂರು: ನಗರದಲ್ಲಿ ಪ್ರತಿದಿನ ಒಂದಲ್ಲ ಒಂದು ಕಡೆ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಸದ್ಯ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 2 ವರ್ಷಗಳ ಕಾಲ ಕೆಲಸ ಮಾಡಿ, ಅದರಲ್ಲಿ ಉಳಿಸಿದ್ದ ಅಲ್ಪಸ್ವಲ್ಪ ಹಣದಿಂದ ಆ್ಯಕ್ಟಿವಾ ಹೋಂಡಾ ಸ್ಕೂಟರ್​ನ್ನು ಖರೀದಿಸಿದ್ದರು. ಇಷ್ಟು ಕಷ್ಟಪಟ್ಟು ಜೀವನದಲ್ಲಿ ಮೊದಲ ಬಾರಿ ಖರೀದಿಸಿದ್ದ ಸ್ಕೂಟರ್ ಸದ್ಯ ಕಳ್ಳನ ಪಾಲಾಗಿದೆ.

ಕಷ್ಟಪಟ್ಟು ಖರೀದಿಸಿದ್ದ ಸ್ಕೂಟರ್ ಕಳ್ಳನ ಪಾಲು: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರ ಭಾರತ ಮೂಲದ ವಿಕ್ರಮ್ ಸಿಂಗ್ ಖಾಸಗಿ ಕಂಪನಿಯೊಂದರಲ್ಲಿ ಕಳೆದ 3 ವರ್ಷಗಳಿಂದ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಮಾಡುತ್ತಿದ್ದ ಕೆಲಸದ ಸಂಬಳದಲ್ಲಿ ಅಲ್ಪಸ್ವಲ್ಪ ಉಳಿಸಿ ಆ್ಯಕ್ಟಿವಾ ಹೋಂಡಾ ಖರೀದಿಸಿದ್ದರು. ತಾನು ಕಷ್ಟಪಟ್ಟು ಬೈಕ್ ಖರೀದಿಸಿದ ಕಾರಣ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹಾಗೆ ಇದೇ ಸ್ಕೂಟರ್​ನಲ್ಲಿ ಕಳೆದ 2 ವರ್ಷಗಳಿಂದ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ‌ಕೂಡ ನಡೆಯುತ್ತಿತ್ತು.

ಜು.28 ರಂದು ಕ್ಲೈಂಟ್ ಒಬ್ಬರನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ಹೆಚ್​ಎಸ್​ ಆರ್ ಠಾಣಾ ವ್ಯಾಪ್ತಿಯ ಬ್ಲೂ ಸ್ಟೋನ್ ಶೋ ರೂಮ್ ಬಳಿ ಸ್ಕೂಟರ್ ನಿಲ್ಲಿಸಿ ಒಳ ಹೋಗಿದ್ದಾರೆ. ಮತ್ತೆ ಬಂದು ನೋಡುವಷ್ಟರಲ್ಲಿ ತಮ್ಮ ಸ್ಕೂಟರ್ ಇರಲಿಲ್ಲ. ಮೊದಲಿಗೆ ಸಂಚಾರಿ ಪೊಲೀಸರು ತೆಗೆದುಕೊಂಡು ಹೋಗಿರಬಹುದು ಎಂದು ಠಾಣೆ ಬಳಿ ಹೋಗಿ ಪರಿಶೀಲಿಸಿದ್ದಾರೆ. ಆದ್ರೆ ಅಲ್ಲಿ ಬೈಕ್ ಇಲ್ಲ ಎಂಬುದು ತಿಳಿದಿತ್ತು. ನಂತರ ಸ್ಕೂಟರ್ ನಿಲ್ಲಿಸಿದ್ದ ಬಳಿ ಶೋರೂಂನ ಸಿಸಿಟಿವಿ ಪರಿಶೀಲನೆ ವೇಳೆ ಅಸಲಿ ಸತ್ಯ ಬಯಲಾಗಿದೆ.

ಯಾರೋ ಖದೀಮ ಬೈಕ್ ಕದ್ದು ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಷ್ಟಪಟ್ಟು ಖರೀದಿಸಿದ್ದ ಬೈಕ್ ಕಳೆದುಕೊಂಡಿರುವ ವಿಕ್ರಮ್ ಸಿಂಗ್ ಕಂಗಾಲಾಗಿದ್ದಾರೆ. ಸದ್ಯ ಹೆಚ್​ಎಸ್​ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.