ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕ್ಲರಿಕಲ್ ಗ್ರೇಡ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಗ್ರಾಹಕರ ಬೆಂಬಲ ಮತ್ತು ಸೇವೆಯಲ್ಲಿ ಕಿರಿಯ ಸಹಾಯಕರ ಹುದ್ದೆಗಳ ಭರ್ತಿ ನಡೆಯಲಿದೆ. 8,283 ಹುದ್ದೆಗಳಿದ್ದು, ಕರ್ನಾಟಕಕ್ಕೆ 450 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಅಧಿಕೃತ ಮಂಡಳಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಠ ವಯೋಮಿತಿ 20 ವರ್ಷ. ಗರಿಷ್ಠ 28 ವರ್ಷ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇಎಸ್ಎಂ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡಲಾಗಿದೆ. ಇತರೆ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು 750 ರೂ ಅರ್ಜಿ ಶುಲ್ಕ ಭರಿಸಬೇಕು.
ಆಯ್ಕೆ ಪ್ರಕ್ರಿಯೆ: ಪ್ರಿಲಿಮನರಿ ಪರೀಕ್ಷೆ, ಮೇನ್ಸ್ ಮತ್ತು ಸಂದರ್ಶನ ಮೂಲಕ ಆಯ್ಕೆ.
ನವೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 7 ಆಗಿದೆ. ಪ್ರಿಲಿಮ್ಸ್ ಪರೀಕ್ಷೆಗಳು 2024ರ ಜನವರಿ ಮತ್ತು ಮೇನ್ಸ್ ಪರೀಕ್ಷೆಗಳು ಫೆಬ್ರವರಿಯಲ್ಲಿ ನಡೆಯಬಹುದು ಎಂದು ತಾತ್ಕಾಲಿಕ ದಿನಾಂಕವನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಅಧಿಕೃತ ಅಧಿಸೂಚನೆ, ಇತರೆ ಮಾಹಿತಿಗೆ ಅಭ್ಯರ್ಥಿಗಳು sbi.co.in ಭೇಟಿ ನೀಡಿ.
ಇದನ್ನೂ ಓದಿ: ಭಾರತೀಯ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: 1,899 ಹುದ್ದೆಗಳಿಗೆ ಅರ್ಜಿ ಆಹ್ವಾನ