ETV Bharat / state

ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಉತ್ಸವ ಆಚರಣೆ: ಪ್ರಮೋದ್ ಮುತಾಲಿಕ್

author img

By

Published : Aug 19, 2022, 5:23 PM IST

ಸಾವರ್ಕರ್ ಅವರ ಹೋರಾಟದ ಬಗ್ಗೆ ಜನರಿಗೆ ತಿಳಿಸಲು ಕಥಾ ಸ್ಪರ್ಧೆ ಹಾಗೂ ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗುವುದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

savarkar-utsav-celebration-at-public-ganeshotsav-says-pramod-mutalik
ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಉತ್ಸವ ಆಚರಣೆ: ಪ್ರಮೋದ್ ಮುತಾಲಿಕ್

ಬೆಂಗಳೂರು: ಸ್ವಾತಂತ್ರ್ಯ ವೀರ ಸಾವರ್ಕರ್ ಮಹಾ ಕ್ರಾಂತಿಕಾರಿ ಹೋರಾಟಗಾರ. ಹೀಗಾಗಿ ಬರುವ ಸಾರ್ವಜನಿಕ ಗಣೇಶೋತ್ಸವದಲ್ಲಿ 'ಸಾವರ್ಕರ್ ಉತ್ಸವ' ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.

ನಗರದ ಪ್ರೆಸ್​ಕ್ಲಬ್​ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಕೂರಿಸುವ ಸ್ಥಳಗಳಲ್ಲಿ ಸಾವರ್ಕರ್ ಫೋಟೋ ಇಡುವಂತೆ ಸಂಘಟಕರಿಗೆ ಮನವಿ ಮಾಡಲಾಗುವುದು. ಅದೇ ರೀತಿ ಸಾವರ್ಕರ್ ಅವರ ಹೋರಾಟದ ಬಗ್ಗೆ ಜನರಿಗೆ ತಿಳಿಸಲು ಅವರ ಹೋರಾಟದ ಚಿತ್ರದ ಪ್ರದರ್ಶನ, ಸಾವರ್ಕರ್ ಕುರಿತು ಉಪನ್ಯಾಸಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ಅಲ್ಲದೇ, ಸಾವರ್ಕರ್ ಕುರಿತ ನಾಟಕ, ನೃತ್ಯ ರೂಪಕ ಆಯೋಜಿಸಲಾಗುವುದು. ಸಾವರ್ಕರ್ ರಚಿಸಿದ ಹಾಡುಗಳನ್ನು ಹಾಡುವುದು, ಸಾವರ್ಕರ್ ಅವರ ಬಗ್ಗೆ ಕಥಾ ಸ್ಪರ್ಧೆ, ಹಾಡುಗಳ ಸ್ಪರ್ಧೆ, ಚಿತ್ರಗಳ ಸ್ಪರ್ಧೆ, ಕ್ವಿಜ್ ಇತ್ಯಾದಿಗಳನ್ನು ಏರ್ಪಡಿಸುವುದು ಹಾಗೂ ಸಾವರ್ಕರ್ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡುವುದು ಬಗ್ಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಾವರ್ಕರ್​ಗೆ ಅವಮಾನ ಸಹಿಸಲು ಸಾಧ್ಯವಿಲ್ಲ: ಸಾವರ್ಕರ್ ಅವರಿಗೆ ಅಪಮಾನ ಮಾಡುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕರಿ ನೀರಿನ ಶಿಕ್ಷೆ ಅನುಭವಿಸಿದ ಏಕೈಕ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತ ಸಾವರ್ಕರ್ ಪುಸ್ತಕವನ್ನು ಪ್ರಕಟಣೆಯ ಪೂರ್ವವೇ ಬ್ರಿಟಿಷರು ನಿರ್ಬಂಧ ಮಾಡಿದ್ದರು. ಅನೇಕ ಇತಿಹಾಸಗಳನ್ನು ಸೃಷ್ಟಿಸಿದ ಮಹಾನ್ ಕ್ರಾಂತಿಕಾರಿ ಸಾವರ್ಕರ್ ಅವರಿಗೆ ಮೇಲಿಂದ ಮೇಲೆ ಅವಮಾನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುತಾಲಿಕ್​ ಹೇಳಿದರು.

ವಕ್ಫ್ ಬೋರ್ಡ್ ಅಧ್ಯಕ್ಷರ ವಜಾಕ್ಕೆ ಆಗ್ರಹ : ವಕ್ಫ್​ ಬೋರ್ಡ್ ಅಧ್ಯಕ್ಷ ಶಫಿ ಸಾಅದಿ ಇವರನ್ನು ಕೂಡಲೆ ವಜಾಗೊಳಿಸಬೇಕು. ಶಾಲೆಗಳಲ್ಲಿ ಮತೀಯವಾದಕ್ಕೆ ಅವರು ಒತ್ತಾಯಿಸುತ್ತಿದ್ದಾರೆ. ನಮಾಜ್‌ಗೆ ಅವಕಾಶ ಹಾಗೂ ಪ್ರತ್ಯೇಕ ಕೊಠಡಿಗೆ ಬೇಡಿಕೆ ಮತ್ತು ಖುರಾನ್ ಪಠಣ ಇತ್ಯಾದಿಗಳಿಗೆ ಆಗ್ರಹಿಸುತ್ತಿರುವುದು ಮೂರ್ಖತನವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮಹಾತ್ಮ ಗಾಂಧಿ ಕೊಂದವರು ನನ್ನನ್ನು ಬಿಡುತ್ತಾರಾ.. ಸಿದ್ದರಾಮಯ್ಯ ಪ್ರಶ್ನೆ

ನೂರಾರು ವರ್ಷಗಳಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ಗಣೇಶ ಹಬ್ಬ ಆಚರಿಸುತ್ತಿದೆ. ಆದರೆ, ಈಗ ವಕ್ಫ್ ಬೋರ್ಡ್​ ಅಧ್ಯಕ್ಷ ಶಫಿ ನಮಾಜ್​ಗೆ ಅವಕಾಶ ಕೊಡಿ ಅಂತಿದ್ದಾರೆ. ನಿಮ್ಮ ನಮಾಜ್ ಬೇಕಿದ್ದರೆ ಮಸೀದಿಯಲ್ಲಿ ಮಾಡಿಕೊಳ್ಳಿ. ಶಿಕ್ಷಣ ಕ್ಷೇತ್ರದಲ್ಲಿ ಇದು ಬೇಕಾಗಿಲ್ಲ. ಶಾಲೆಗಳಲ್ಲಿ ನಮಾಜ್​ಗೆ ಸರ್ಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಇತ್ತೀಚೆಗೆ ಪರೇಶ್ ಮೇಸ್ತಾ ಕೊಲೆ ಪ್ರಕರಣದ ಆರೋಪಿ ಜಮಾಲ್‌ ಅಜಾದ್‌ ಅಣ್ಣಿಗೇರಿನನ್ನು ಕಾರವಾರ ಜಿಲ್ಲಾ ವಕ್ಫ್ ಬೋರ್ಡಿಗೆ ಉಪಾಧ್ಯಕ್ಷನನ್ನಾಗಿ ನೇಮಿಸಿದ್ದು ಇದೇ ಶಫಿ ಎಂಬುದು ಸತ್ಯ. ಹಾಗಾಗಿ ಇಂತಹವರನ್ನು ಸರ್ಕಾರ ಕೂಡಲೇ ವಜಾ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮುತಾಲಿಕ್​ ಎಚ್ಚರಿಕೆ ನೀಡಿದರು.

ಮೊಟ್ಟೆ ಎಸೆದಿದ್ದು ತಪ್ಪು, ಪ್ರತಿಭಟನೆಯಲ್ಲ: ಕೊಡಗಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಮೊಟ್ಟೆ ಎಸೆದಿರುವುದನ್ನು ನಾನು ಒಪ್ಪುವುದಿಲ್ಲ. ಆದರೆ, ಪ್ರತಿಭಟನೆ ಮಾಡಿದ ಉದ್ದೇಶ ಸರಿ ಇದೆ. ಹಾಗಾಗಿ, ಪ್ರತಿಭಟನಾಕಾರರನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಇದೇ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು. ಇಲ್ಲವಾದರೆ ನಾವು ನಮಾಜ್​ಗೆ ಅಡ್ಡಿಪಡಿಸಬೇಕಾಗುತ್ತದೆ. ಧ್ವನಿವರ್ಧಕಗಳ ಸಂಬಂಧ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಗಸ್ಟ್ 23ರಂದು ರಾಜ್ಯದ ಎಲ್ಲ ಜಿಲ್ಲೆಗಳ ಎಸ್​ಪಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಪ್ರತಿಪಕ್ಷ ನಾಯಕರ ಕಾರಿಗೆ ಮೊಟ್ಟೆ ಎಸೆತ ನಾಡಿನ ಗೌರವಕ್ಕೆ ಕಳಂಕ: ವಾಟಾಳ್ ನಾಗರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.