ಬೆಂಗಳೂರು: ತಮಿಳುನಾಡಿನ ರಾಜಕೀಯ ವಲಯದಲ್ಲಷ್ಟೇ ಅಲ್ಲ ಭಾವನಾತ್ಮಕ ವಲಯದಲ್ಲೂ ಸಂಚಲನ ಮೂಡಿಸಿರುವ ಚಿನ್ನಮ್ಮ ಶಶಿಕಲಾರ ಸ್ವಾಗತಕ್ಕೆ ನಿನ್ನೆಯಿಂದಲೇ ಸಿದ್ಧತೆ ನಡೆದಿತ್ತು. ಇದೀಗ ಬೆಂಗಳೂರು-ಹೊಸೂರು ಹೆದ್ದಾರಿ ಮೂಲಕ ಶಶಿಕಲಾ ತಮ್ಮ ಸಾವಿರಾರು ಅಭಿಮಾನಿಗಳ ಸ್ವಾಗತದೊಂದಿಗೆ ಕರ್ನಾಟಕದ ಗಡಿ ಅತ್ತಿಬೆಲೆ ದಾಟಿ ತಮಿಳುನಾಡು ಪ್ರವೇಶಿಸಿದರು.
ಕರ್ನಾಟಕದ ಗಡಿಯಲ್ಲಿ ನಿನ್ನೆ ಕಟ್ಟಿದ್ದ ಶಶಿಕಲಾ ಸ್ವಾಗತ ಕೋರುವ ಕಟೌಟ್ಗಳನ್ನು ಮುಲಾಜಿಲ್ಲದೇ ತೆರವುಗೊಳಿಸಿದ್ದ ಅತ್ತಿಬೆಲೆ ಪೊಲೀಸರು ಇಂದು ಇಡೀ ಹೆದ್ದಾರಿ ಶೂನ್ಯ ಸಂಚಾರವನ್ನು ಏರ್ಪಡಿಸಿದ್ದರು. ಆದರೆ, ಅತ್ತಿಬೆಲೆ ಗಡಿಯಲ್ಲಿ ಕಿಕ್ಕಿರಿದ ಅಭಿಮಾನಿಗಳ ಜನಸಂದಣಿ ಅತ್ತಿಬೆಲೆ ನಂತರ ಹೊಸೂರಿನಲ್ಲಿ ಹೆದ್ದಾರಿ ತುಂಬಿ ಸಂಚಾರ ದಟ್ಟಣೆ ಏರ್ಪಡಿಸಿದ್ದರು.
ಕಾರಿನಲ್ಲಿ ಮುಗುಳ್ನಗೆ ಬೀರುತ್ತಾ ಜನರತ್ತ ಕೈಬೀಸಿ ಟಾಟಾ ಹೇಳಿ ತಮಿಳುನಾಡಿನತ್ತ ಶಶಿಕಲಾ ತೆರಳಿದರು. ಇಲ್ಲಿಗೆ ಕರ್ನಾಟಕದಲ್ಲಿಯೂ ತಮಿಳಿಗರ ಮನೆ ಮಾತಾಗಿದ್ದ ಶಶಿಕಲಾರ ಅಬ್ಬರ ಕರ್ನಾಟಕದಲ್ಲಿ ಇಂದಿಗೆ ಮುಕ್ತಾಯಗೊಂಡಿತು.