ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿರುವ ಕೆಜೆ ಜಾರ್ಜ್ ತಮ್ಮ ಕ್ಷೇತ್ರವಾದ ಸರ್ವಜ್ಞನಗರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಐದು ಬಾರಿ ಶಾಸಕ ಆಗಿದ್ದ ಕೆಜೆ ಜಾರ್ಜ್ಗೆ ಈ ಬಾರಿ ಸರ್ವಜ್ಞನಗರ ಕ್ಷೇತ್ರದ ಜನ ಆರ್ಶೀವಾದ ಮಾಡಿದ್ದಾರೆ. ಕೆಜೆ ಜಾರ್ಜ್ಗೆ ಇದು ಸತತ ನಾಲ್ಕನೇ ಗೆಲುವು ಆಗಿದೆ.
ಬಹು ಧರ್ಮೀಯರು, ಹಲವು ಭಾಷಿಕರು, ವಿವಿಧ ಸಂಸ್ಕೃತಿಯನ್ನು ಒಳಗೊಂಡವರು, ಬಹುವಿಧದ ಆಚರಣೆಗಳ ತಾಣವಾಗಿ ಸರ್ವಜ್ಞನಗರ ಗುರುತಿಸಿಕೊಂಡಿದೆ. ಹೆಚ್ಚು ಪ್ರಗತಿ ಕಂಡಿದೆ ಎಂದು ಹೇಳಲಾಗದಿದ್ದರೂ, ಹಿಂದುಳಿದ ಪ್ರದೇಶವಂತೂ ಅಲ್ಲ. ಕಾಂಗ್ರೆಸ್ ಭದ್ರಕೋಟೆ ಎಂದು ಕ್ಷೇತ್ರವನ್ನು ಕರೆಯುವುದಕ್ಕಿಂತ ಮಾಜಿ ಗೃಹ ಸಚಿವರು ಈ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ನಿರಂತರವಾಗಿ ಗೆಲ್ಲುತ್ತಾ ಬಂದಿರುವ ಜಾರ್ಜ್ಗೆ ಈ ಕ್ಷೇತ್ರದ ಜನರು ಮತ್ತೊಮ್ಮೆ ಆರ್ಶೀವಾದ ಮಾಡಿದ್ದಾರೆ. ಅಷ್ಟೇ ಅಲ್ಲ ವರ್ಷದಿಂದ ವರ್ಷಕ್ಕೆ ತಮ್ಮ ಮತಗಳಿಕೆಯನ್ನು ಹಾಗೂ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದಾರೆ.
ಕೆಜೆ ಜಾರ್ಜ್ ಅವರು ಈ ಹಿಂದೆ ರಾಜ್ಯದ ಗೃಹ ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಮತ್ತು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾಗಿದ್ದರು. ಹೆಚ್ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರಾಗಿ, ಎಸ್ ಬಂಗಾರಪ್ಪ ಸರ್ಕಾರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈವರೆಗೆ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ಬಳಿಕ ಅಸ್ವಿತ್ವಕ್ಕೆ ಬಂದಿರುವ ಸರ್ವಜ್ಞ ನಗರ ಕ್ಷೇತ್ರದಲ್ಲಿ ಈವರೆಗೆ ನಡೆದ ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಕೆ.ಜೆ.ಜಾರ್ಜ್ ಅವರೇ ಜಯಭೇರಿ ಬಾರಿಸಿಕೊಂಡು ಬಂದಿದ್ದರು. ಪ್ರಸಕ್ತ ವರ್ಷದ ಚುನಾವಣೆಲ್ಲಿ ಬಿಜೆಪಿಯಿಂದ ಪದ್ಮನಾಭ ರೆಡ್ಡಿ ಎದುರಾಳಿಯಾಗಿದ್ದು, ಅವರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.
ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ನಡೆದ ಚುನಾವಣೆಗಳಲ್ಲಿ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುತ್ತಿರುವ ಜಾರ್ಜ್, ಕ್ಷೇತ್ರದಲ್ಲಿ ಹೊಂದಿರುವ ಹಿಡಿತಕ್ಕೆ ಸಾಕ್ಷಿಯಾಗಿದೆ. 2008ರಲ್ಲಿ ಅವರು ಇಲ್ಲಿಂದ ಮೊದಲ ಬಾರಿಗೆ ಗೆದ್ದಾಗ ಮತಗಳ ಅಂತರ 22,608 ಇತ್ತು. 2013ರಲ್ಲಿ 22,853 ಏರಿಕೆಯಾದರೆ, 2018ರಲ್ಲಿ 53,355 ಆಗಿತ್ತು. ಈಗ 55 ಸಾವಿರಕ್ಕೂ ಹೆಚ್ಚಾಗಿದೆ.
ಜಾರ್ಜ್ ಗೆಲುವಿನ ನಾಗಾಲೋಟ: 2008 ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಹೊಸದಾಗಿ ರಚನೆಯಾದ ಸರ್ವಜ್ಞನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಾರ್ಜ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಈದು ಸತತ ನಾಲ್ಕನೇ ಗೆಲುವು ಅವರದ್ದಾಗಿದೆ. ಇದಕ್ಕೂ ಮೊದಲು ಅಂದರೆ 1985 ರಲ್ಲೇ ಅಂದಿನ ಭಾರತೀನಗರ ವಿಧಾನಸಭೆ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 1989 ರಲ್ಲಿ ಅಲ್ಲಿಂದಲೇ ಮರು ಆಯ್ಕೆಯಾದರು. ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ ಸಿಎಂ ಆಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ನಂತರ ವಸತಿ ಮತ್ತು ನಗರ ಅಭಿವೃದ್ಧಿ ಖಾತೆಯ ಸಂಪುಟ ಸಚಿವರಾಗಿ ಕೆಲಸ ಮಾಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಮತ್ತು 2018 ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಖಾತೆಯ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.
ಓದಿ: ಕೆಜೆ ಜಾರ್ಜ್ ಕಟ್ಟಿದ "ಕೈ" ಕೋಟೆ ಭೇದಿಸುವವರಾರು? ಸರ್ವಜ್ಞನಗರದಲ್ಲಿ ನಡೆಯುತ್ತಾ ಕಮಾಲ್?