ETV Bharat / state

ಐಎಸ್​​ಡಿ ಕಾರ್ಯಾಚರಣೆ ಚುರುಕು: ರಾಜಕಾರಣಿಗಳ ಪುತ್ರರ ಮೇಲೆ ಹದ್ದಿನ ಕಣ್ಣು - bangalore latest news

ವಶಕ್ಕೆ ಪಡೆದ ಪೆಡ್ಲರ್​ಗಳಿಗೆ ಬಹುತೇಕ ಗ್ರಾಹಕರು ಯಾರು ಎಂಬದೇ ಗೊತ್ತಿಲ್ಲ. ಹೀಗಾಗಿ ಕೇವಲ ಅವರ ಕಾಲ್ ಡಿಟೈಲ್ಸ್ ಆಧರಿಸಿ ಹಲವರಿಗೆ ಐಎಸ್​​ಡಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿದ್ದಾರೆ‌.

Sansdalwood drug issue; ISD investigation is going well
ಐಎಸ್​​ಡಿ ಕಾರ್ಯಾಚರಣೆ ಚುರುಕು; ರಾಜಕಾರಣಿಗಳ ಪುತ್ರರ ಮೇಲೆ ಹದ್ದಿನ ಕಣ್ಣು
author img

By

Published : Sep 24, 2020, 12:46 PM IST

ಬೆಂಗಳೂರು: ಸ್ಯಾಂಡಲ್​​ವುಡ್​​ಗೆ ಡ್ರಗ್​​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಸ್​​ಡಿ ಡ್ರಗ್ಸ್​ ಪೆಡ್ಲರ್ಸ್​​ ವಿಚಾರಣೆಯನ್ನು ಮುಂದುವರೆಸಿದೆ.

ಸದ್ಯ ಬಂಧಿತರಾಗಿರುವ ಕೇರಳ ಮೂಲದ ಡ್ರಗ್ಸ್​​​​ ಪೆಡ್ಲರ್​​ಗಳ ಮಾಹಿತಿ ಆಧಾರದ ‌ಮೇರೆಗೆ ಐಎಸ್​ಡಿ ಅಧಿಕಾರಿಗಳು ನೋಟಿಸ್ ನೀಡಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಶಕ್ಕೆ ಪಡೆದ ಪೆಡ್ಲರ್​ಗಳಿಗೆ ಬಹುತೇಕ ಗ್ರಾಹಕರು ಯಾರು ಎಂಬದೇ ಗೊತ್ತಿಲ್ಲ. ಹೀಗಾಗಿ ಕೇವಲ ಅವರ ಕಾಲ್ ಡಿಟೈಲ್ಸ್ ಆಧರಿಸಿ ಐಎಸ್​​ಡಿ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿದ್ದಾರೆ‌.

ಬಹುತೇಕ ವ್ಯಸನಿಗಳು ಡಾರ್ಕ್ ನೆಟ್ ಬಳಕೆ ಮಾಡಿ ನಕಲಿ / ತಾತ್ಕಾಲಿಕ ವಿಳಾಸ ನೀಡಿ ಡ್ರಗ್ಸ್​ ಖರೀದಿಸಿರುವುದು ಪತ್ತೆ‌ಯಾಗಿದೆ. ಹೀಗಾಗಿ ಈವರೆಗೂ 8 ಜನರಿಗೆ ನೋಟಿಸ್ ನೀಡಿರುವ ಐಎಸ್​ಡಿ ನಟ ಯೋಗೀಶ್, ಮಾಜಿ ಕ್ರಿಕೆಟಿಗ ಎಸ್​ಸಿ ಅಯ್ಯಪ್ಪ, ಅಭಿಶೇಕ್ ದಾಸ್, ಗೀತಾ ಭಾರತಿ ಭಟ್, ರಶ್ಮಿತಾ ಚೆಂಗಪ್ಪ, ನಿಶ್ಚಿತಾ ಶರತ್ ಸೇರಿ 6 ಜನರ ವಿಚಾರಣೆ ನಡೆಸಿದೆ.

ಇನ್ನಿಬ್ಬರು ರಾಜಕೀಯ ಮಕ್ಕಳಿಗೆ ನೋಟಿಸ್​ ನೀಡಿ ವಿಚಾರಣೆಗೆ ಕರೆದರೂ ಕೂಡ ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಸದ್ಯ ಐಎಸ್​ಡಿ ಅಧಿಕಾರಿಗಳು ರಾಜಕಾರಣಿಗಳ ಮಕ್ಕಳ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಹೆಸರನ್ನು ಬಿಟ್ಟುಕೊಡದೆ ಸೈಲೆಂಟಾಗಿ ರಾಜಕಾರಣಿಗಳ ಮಕ್ಕಳಿಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.