ಬೆಂಗಳೂರು: ಜಿಂಕೆ ಕೊಂಬುಗಳನ್ನು ಮಾರಲು ಯತ್ನಿಸಿದ ಆರೋಪಿಯನ್ನು ಶಂಕರಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರಾಜಶೇಖರ ನಾಯಕ್ (28) ಬಂಧಿತ ಆರೋಪಿ.

ಕರ್ನಾಟಕ - ಆಂಧ್ರ ಗಡಿ ಭಾಗದವನಾಗಿದ್ದ ಆರೋಪಿಯನ್ನು, ನಿನ್ನೆ ಸಿಟಿ ಇನ್ಸ್ಟಿಟ್ಯೂಟ್ ಮುಂಭಾಗದಲ್ಲಿ ಜಿಂಕೆಯ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಎಂಜಿನ್ ದೋಷದಿಂದಾಗಿ ಹೊತ್ತಿ ಉರಿದ ಟ್ರಕ್!
ಬಂಧಿತನಿಂದ 24 ವಿವಿಧ ಅಳತೆಯ ಜಿಂಕೆ ಕೊಂಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.